ಮೊಗ್ರು: ಮೀನು ಹಿಡಿಯಲೆಂದು ಹೋಗಿ ನೀರುಪಾಲದ ಯುವಕನ ಮೃತದೇಹ ಪತ್ತೆ
ಮೊಗ್ರು: ಬಂದಾರು ಪಂಚಾಯತ್ ವ್ಯಾಪ್ತಿಯ , ಮೊಗ್ರು ಗ್ರಾಮದ, ಮುಗೇರಡ್ಕ ನೇತ್ರಾವತಿ ನದಿಯ ಪಂಪ್ ಹೌಸ್ ಬಳಿ ಬಲೆ ಬಿಟ್ಟು ಮೀನು ಹಿಡಿಯಲು ಹೋದ ಯುವಕ ನೀರು ಪಾಲಾದ ಘಟನೆ ಡಿ.26 ರಂದು ಸಂಜೆ ನಡೆದಿದ್ದು, ರಾತ್ರಿಯಿಂದಲೇ ಅಗ್ನಿಶಾಮಕ ತಂಡ ಹಾಗೂ ಉಪ್ಪಿನಂಗಡಿ ಪೊಲೀಸರ ಮಾರ್ಗದರ್ಶನದಲ್ಲಿ ಮುಳುಗುಪಟುಗಳಿಂದ ಶೋಧ ಕಾರ್ಯ ನಡೆದಿದ್ದು ಇದೀಗ ಯುವಕನ ಮೃತದೇಹ ಸಿಕ್ಕಿದೆ.
ನೀರು ಪಾಲಾದ ಯುವಕ ಮೊಗ್ರು ಗ್ರಾಮದ ದಂಡುಗ ನಿವಾಸಿ ಗುಮ್ಮಣ್ಣ ಗೌಡರ ವಿವಾಹಿತ ಪುತ್ರ ಜನಾರ್ಧನ ಗೌಡ (42) ಎಂದು ಸೂಚಿಸಿದರು.
ಜನಾರ್ಧನ ಹಾಗೂ ಬಂದಾರು ಗ್ರಾಮದ ಬೋಲೋಡಿ ಮನೆ ನಿವಾಸಿ ಮಹೇಶ್ ಎಂಬವರು ಮುಗೇರಡ್ಕದ ಕಾಮಗಾರಿ ಹಂತದಲ್ಲಿರುವ ಸೇತುವೆ ನೇತ್ರಾವತಿ ನದಿಯಲ್ಲಿ ಬಲೆ ಹಾಕಲು ಬಂದಿದ್ದರು. ಈ ವೇಳೆ ಜನಾರ್ಧನ ಅವರು ನೀರು ಪಾಲಾಗಿದ್ದಾರೆ. ಆದರೆ ಜೊತೆಗಿದ್ದ ಮಹೇಶ್ ಈ ವೇಳೆ ಸಹಾಯಕ್ಕೂ ಕೂಗದೆ ಅವರನ್ನು ಬಿಟ್ಟು ತನ್ನ ಪಾಡಿಗೆ ವಾಪಾಸ್ ಬಂದಿದ್ದರು. ನೀರಿಗೆ ಬಿದ್ದ ವಿಷಯ ತಡವಾಗಿ ಬೆಳಕಿಗೆ ಬಂದ ಕಾರಣ ರಾತ್ರಿ ನೀರು ಪಾಲಾದವರ ಹುಡುಕಾಟ ಶುರುವಾಗಿತ್ತು. ಉಪ್ಪಿನಂಗಡಿ ಮತ್ತು ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದ್ದರು ಇಂದು ಮುಂಜಾನೆ ಮೃತದೇಹ ಸಿಕ್ಕಿದೆ.
ಶಾಸಕರಾದ ಹರೀಶ್ ಪೂಂಜ ಮುಗೇರಡ್ಕ ನದಿಯಲ್ಲಿ ಮುಳುಗಿದ ವ್ಯಕ್ತಿ ಶವಸಿಕ್ಕಿದ ಸ್ಥಳಕ್ಕೆ ಭೇಟಿ ನೀಡಿದರು.