• October 14, 2024

ಫೆ.24:ಮೊಗ್ರು ಇಲ್ಲಿನ ಶ್ರೀರಾಮ ಶಿಶುಮಂದಿರದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಮತ್ತು ಭಾರತ್ ಮಾತ ಪೂಜನ ಕಾರ್ಯಕ್ರಮ

 ಫೆ.24:ಮೊಗ್ರು  ಇಲ್ಲಿನ ಶ್ರೀರಾಮ ಶಿಶುಮಂದಿರದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಮತ್ತು ಭಾರತ್ ಮಾತ ಪೂಜನ ಕಾರ್ಯಕ್ರಮ

 

ಮೊಗ್ರು : ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ -ಮುಗೇರಡ್ಕ, ಮೊಗ್ರು ಬೆಳ್ತಂಗಡಿ ಇಲ್ಲಿನ ಶ್ರೀರಾಮ ಶಿಶುಮಂದಿರದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಮತ್ತು ಭಾರತ್ ಮಾತ ಪೂಜನ ಕಾರ್ಯಕ್ರಮ 24 ಫೆಬ್ರವರಿ 2024 ಶನಿವಾರ ಸಂಜೆ4.00 ರಿಂದ ಆರಂಭಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಸಚಿನ್ ಜೈನ್ ಹಳೆಯೂರು, ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ, ಉದ್ಯಮಿಗಳು ಲಕ್ಷ್ಮೀ ಇಂಡಸ್ಟ್ರೀಸ್ ಉಜಿರೆ ಮೋಹನ್ ಕುಮಾರ್ ಸಭಾಧ್ಯಕ್ಷರಾಗಿ ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ ಇದರ ಕಾರ್ಯದರ್ಶಿ ನೇಮಿಚಂದ್ರ ಮುಗೇರಡ್ಕ, ಗೌರವ ಉಪಸ್ಥಿತಿಯಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಶ್ರೀ ಕ್ಷೇತ್ರ ಮುಗೇರಡ್ಕ ಮೂವರು ದೈವಸ್ಥಾನದ ಆಡಳಿತ ಮೋಕ್ತೇಸರರಾದ ಮನೋಹರ ಗೌಡ ಅಂತರ, ಕಡಮ್ಮಾಜೆ ಫಾರ್ಮ್ಸ್ ಪ್ರಗತಿಪರ ಕೃಷಿಕರಾದ ದೇವಿಪ್ರಸಾದ್ ಗೌಡ ಕಡಮ್ಮಾಜೆ, ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ ಗೌರವಧ್ಯಕ್ಷರಾದ ಉದಯ ಭಟ್ ಕೊಳಬ್ಬೆ, ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ ಅಧ್ಯಕ್ಷರಾದ ರಮೇಶ್ ಗೌಡ ನೆಕ್ಕರಾಜೆ ಇವರೆಲ್ಲರೂ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಂಜೆ 4.0 ಗಂಟೆಗೆ ಮಾತೃ ಪಾದ ಪೂಜೆ, ಸಂಜೆ 6.30 ಕ್ಕೆ ಭಾರತ್ ಮಾತಾ ಪೂಜೆ, ಸಂಜೆ 7.00 ಗಂಟೆಗೆ ಸಭಾ ಕಾರ್ಯಕ್ರಮ, ರಾತ್ರಿ 8.00 ಗಂಟೆಗೆ ಶಿಶು ಮಂದಿರ ಬಾಲಗೋಕುಲದ ಮತ್ತು ಮಾತೃ ಮಂಡಳಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9.30 ರಿಂದ ನೆರೆದವರೆಲ್ಲರಿಗೂ ಭೋಜನ ವ್ಯವಸ್ಥೆ ಇರಲಿದೆಯೆಂದು ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.)ಅಲೆಕ್ಕಿ ಇದರ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related post

Leave a Reply

Your email address will not be published. Required fields are marked *

error: Content is protected !!