ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಸಂಘಟನೆಗಳ ಮೂಲಕ ರಾಷ್ಟ್ರೀಯ ಹಿಂದೂ ಆಂದೋಲನ
ಮಂಗಳೂರು : ಸದ್ಯ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಲವ್ ಜಿಹಾದ್ ತಡೆಯಲು ಸಾದ್ಯವಾಗುತ್ತಿಲ್ಲ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಮ್‌ಗೆ ಮತಾಂತರ ಮಾಡುವ ಘಟನೆಗಳು ಹೆಚ್ಚುತ್ತಿವೆ. ಆದರೆ ಈ ಘಟನೆಗಳು ಮತಾಂತರ ಪ್ರಕರಣವೆಂದು ದಾಖಲಾಗುವುದಿಲ್ಲ. ಈ ಗಂಭೀರ ಸಮಸ್ಯೆಗೆ ಪರಿಹಾರವಾಗಿ ರಾಜ್ಯದಲ್ಲಿ ಸಹ ಉತ್ತರ ಪ್ರದೇಶದ ಮಾದರಿಯಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಠಿಣವಾಗಿ ಅನುಷ್ಠಾನ ಮಾಡಲು ವಿಶೇಷ ಲವ್ ಜಿಹಾದ್ ವಿರೋಧಿ ಪೊಲೀಸ್ ದಳ ವನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ಡಿ.17 ರಂದು ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಸಂಘಟನೆಗಳ ಮೂಲಕ ರಾಷ್ಟ್ರೀಯ ಹಿಂದೂ ಆಂದೋಲನ ವನ್ನು ಮಂಗಳೂರು ನಗರದ ಕ್ಲಾಕ್ ಟವರ್, ಮಿನಿ ವಿಧಾನಸೌಧದ ಎದುರು ನಡೆಸಲಾಯಿತು.
ಅಯ್ಯಪ್ಪ ಮಂಡಳಿ ಜಿಲ್ಲಾ ಉಪಾಧ್ಯಕ್ಷೆ ಆಗಿರುವ ಕಾತ್ಯಾಯನಿ ಇವರು ಮಾತನಾಡುತ್ತ ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನು ಮತಾಂತರ ಮಾಡಿ ಭಯೋತ್ಪಾದಕ ಚಟುವಟಿಕೆಗಳಿಗೆ ಉಪಯೋಗಿಸುವುದರ ಬಗ್ಗೆ ಅನೇಕ ಘಟನೆಗಳಾಗಿವೆ. ಇದೆಲ್ಲವನ್ನೂ ಗಮನಿಸಿದರೆ ಹಿಂದೂ ಸ್ತ್ರೀಯರಿಗೆ ನಾವು ನಮ್ಮ ದೇಶದ ರಾಷ್ಟ್ರ ಪುರುಷರ ಪರಾಕ್ರಮಗಳ ಕುರಿತು ಹೇಳದೆ ಇರುವುದು, ಹಾಗೂ ಅವರಲ್ಲಿ ಇರುವ ಶಕ್ತಿ ಬಗ್ಗೆ ಹಿಂದೂ ಸ್ತ್ರೀ ವಿಚಾರ ಮಾಡಬೇಕಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಮತ್ತು ರಣ ರಾಗಿಣಿ ಶಾಖೆಯ ಸಮನ್ವಯಕಿ ಪವಿತ್ರಾ ಕುಡ್ವ ಇವರು ಮಾತನಾಡಿ, ದೆಹಲಿಯ ಜಿಹಾದಿ ಅಫ್ತಾಬ್ ಹಿಂದೂ ಯುವತಿ ಶ್ರದ್ಧಾವಾಲ್ಕರ್‌ಳನ್ನು ಲವ್ ಜಿಹಾದ್ ಪ್ರಕರಣದಲ್ಲಿ 35 ತುಂಡುಗಳಾಗಿ ಕತ್ತರಿಸಿದ ಘಟನೆಯ ನಂತರ ದೇಶಾದ್ಯಂತ ಲವ್ ಜಿಹಾದ್ ವಿರುದ್ಧ ತೀವ್ರ ಆಕ್ರೋಶದ ಅಲೆ ಹಬ್ಬಿದೆ. ಕರ್ನಾಟಕದಲ್ಲೂ ಸಹ ಲವ್ ಜಿಹಾದ್ ಘಟನೆಗಳು ಹೆಚ್ಚಾಗಿದೆ. . ಈ ಎಲ್ಲ ಗಂಭೀರ ಘಟನೆಗಳನ್ನು ಗಮನಕ್ಕೆ ತಗೆದುಕೊಂಡು ಸರಕಾರವು ರಾಜ್ಯದಿಂದ ಮಹಿಳೆಯರು ಮತ್ತು ಹುಡುಗಿಯರ ನಾಪತ್ತೆಯ ಹಿಂದೆ ಏನಾದರೂ ಪಿತೂರಿ ಇದೆಯೇ ಅಥವಾ ಅದರ ಹಿಂದೆ ಯಾವುದಾದರೂ ಲವ್ ಜಿಹಾದ್’ ಇದೆಯೇ ಎಂದು ತನಿಖೆ ಮಾಡಲು ಗೃಹ ಕಚೇರಿ ಸ್ವತಂತ್ರ ತಂಡವನ್ನು ನೇಮಿಸಬೇಕು, ಲವ್ ಜಿಹಾದ್’ ಪ್ರಕರಣಗಳ ತನಿಖೆ ನಡೆಸಲು ಉತ್ತರ ಪ್ರದೇಶದ ಮಾದರಿಯಲ್ಲಿ ಪೊಲೀಸ್ ವಿಶೇಷ ಶಾಖೆಯನ್ನು ಸ್ಥಾಪಿಸಬೇಕು. ಇಂತಹ ಪ್ರಕರಣಗಳಲ್ಲಿ ‘ಲವ್ ಜಿಹಾದ್’ ಹೆಸರಿನಲ್ಲಿ ಅಪರಾಧಗಳನ್ನು ದಾಖಲಿಸಬೇಕು. ಎಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಧರ್ಮಪ್ರೇಮಿಗಳದ ಕಾತ್ಯಯಿನಿ ಅಯ್ಯಪ್ಪ ಮಂಡಳಿ ಜಿಲ್ಲಾ ಉಪಾಧ್ಯಕ್ಷೆ, ರೈತ ಸಂಘ ರಾಜ್ಯ ಉಪಾಧ್ಯಕ್ಷ ಶ್ರೀ. ಗಿರೀಶ್ ಕೊಠ್ಠಾರಿ, ಉದ್ಯಮಿಗಳಾದ ಎಂ.ಜೆ. ಶೆಟ್ಟಿ, ವಿನಾಯಕ ಕಾಮತ್, ಸತೀಶ್,
ಸ್ವಾಭಿಮಾನಿ ಹಿಂದೂ ಬಳಗ ದಿಂದ ಧರ್ಮೇಂದ್ರ, ಗಣೇಶ್, ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಪ್ರಭಾಕರ್ ನಾಯ್ಕ, ಉಪೇಂದ್ರ ಆಚಾರ್ಯ, ಕಿಶೋರ್, ಉಪಸ್ಥಿತರಿದ್ದರು.