• October 25, 2024

ಡಿಸೆಂಬರ್ 19ರಿಂದ ಹಳೆ ಪಿಂಚಣಿ ಗಾಗಿ ‘ಮಾಡು ಇಲ್ಲವೇ ಮಡಿ’ ಹೋರಾಟ

 ಡಿಸೆಂಬರ್ 19ರಿಂದ ಹಳೆ ಪಿಂಚಣಿ ಗಾಗಿ ‘ಮಾಡು ಇಲ್ಲವೇ ಮಡಿ’ ಹೋರಾಟ

 


ಬೆಳ್ತಂಗಡಿ : 2006 ರ ನಂತರ ನೇಮಕಗೊಂಡ ಸರಕಾರಿ, ಅರೆ ಸರಕಾರಿ, ನಿಗಮ ಮಂಡಳಿಯ ನೌಕರರು ಹಳೆ ಪಿಂಚಣಿ ಗಾಗಿ ಒತ್ತಾಯಿಸಿ,ಡಿಸೆಂಬರ್ 19 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ‘ಮಾಡಿ ಇಲ್ಲವೇ ಮಡಿ’ ಅನಿರ್ದಿಷ್ಟಾವಧಿಯ ಹೋರಾಟ ಕೈಗೊಳ್ಳಲಿದ್ದಾರೆ.

ಬೆಳ್ತಂಗಡಿ ತಾಲೂಕಿನಿಂದಲೂ ಸುಮಾರು ನೂರ ಐವತ್ತಕ್ಕೂ ಅಧಿಕ ನೌಕರರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಾಲೂಕು ಎನ್.ಪಿ.ಎಸ್.ನೌಕರರ ಸಂಘದ ಅಧ್ಯಕ್ಷರಾದ ಸುರೇಶ್ ಮಾಚಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈಗ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆಯು ಸಂಪೂರ್ಣವಾಗಿ ಶೇರು ಮಾರುಕಟ್ಟೆ ಆಧಾರಿತವಾಗಿದ್ದು,ಅಭದ್ರತೆಯಿಂದ ಕೂಡಿದ್ದು,ಇದರಿಂದ ನೌಕರರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಿಲ್ಲ.ಸರಕಾರದ ವಂತಿಗೆ ಹಣ ಮತ್ತು ನೌಕರರ ಕಟಾವಿನ ಹಣಕ್ಕೆ ಯಾವುದೇ ಭದ್ರತೆ ಇರುವುದಿಲ್ಲ. ಈ ಬಗ್ಗೆ ಕಳೆದ ಆರು ವರ್ಷಗಳಿಂದ ಸಂಘವು ನಿರಂತರವಾಗಿ ಹೋರಾಟ ಮಾಡುತ್ತಿರುವ ಫಲವಾಗಿ ಸರಕಾರ ಡಿ.ಸಿ.ಆರ್.ಜಿ. ಸೌಲಭ್ಯ,ಸರಕಾರದ ವಂತಿಗೆ ಶೇ 14 ಕ್ಕೆ ಏರಿಕೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಮಾಡಲು ಮುಂದಾಗಿದೆ.ಆದರೆ ಇದನ್ನು ಯಾವುದೇ ನೌಕರರು ಒಪ್ಪಲು ತಯಾರಿಲ್ಲ,ಯಾಕೆಂದರೆ ಎನ್.ಪಿ.ಎಸ್.ಅಡಿಯಲ್ಲಿ ನಿವೃತ್ತಿ ಯಾಗುತ್ತಿರುವ ನೌಕರರ ನಿವೃತ್ತಿ ವೇತನ ಕೇವಲ 900 ರೂಪಾಯಿಯಿಂದ 1500 ದಷ್ಟು ಮಾತ್ರ ಸಿಗುತ್ತಿದೆ.ಇದರಿಂದ ನಿವೃತ್ತಿಯ ನಂತರದ ನೌಕರನ ಬದುಕು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ.

ಕರ್ನಾಟಕ ರಾಜ್ಯವೂ ಸಹ ಎನ್.ಪಿ.ಎಸ್.ರದ್ದುಗೊಳಿಸಿ ಹಳೆ ಪಿಂಚಣಿ ಜಾರಿಗೆ ತರಲು ನೌಕರರು ರಾಜ್ಯಾದ್ಯಂತ ಹೋರಾಟ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

Related post

Leave a Reply

Your email address will not be published. Required fields are marked *

error: Content is protected !!