• July 27, 2024

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಕ್ರೀಡಾ ದಿನಾಚರಣೆ ಸಂಭ್ರಮ.

 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಕ್ರೀಡಾ ದಿನಾಚರಣೆ ಸಂಭ್ರಮ.

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಸಂಭ್ರಮದಿಂದ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧರ್ಮಸ್ಥಳದ ಅನ್ನ ಛತ್ರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿರುವ ಸುಬ್ರಹ್ಮಣ್ಯ ಪ್ರಸಾದ್ ಇವರು ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇಹದ ಸದೃಢ ಆರೋಗ್ಯಕ್ಕೆ ಇಂತಹ ಕ್ರೀಡಾ ಚಟುವಟಿಕೆಗಳು ಅತ್ಯುತ್ತಮವಾಗಿವೆ. ಶಾಲೆ ಎಂದರೆ ಕೇವಲ ಪಠ್ಯವಲ್ಲ ಜೊತೆಗೆ ಕ್ರೀಡೆಗಳು ಸಹ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ತುಂಬಬಲ್ಲ ಪ್ರೇರಣಾ ಶಕ್ತಿಯಾಗಿವೆ. ಅದಕ್ಕಾಗಿ ಶಾಲೆಯಲ್ಲಿ ಕ್ರೀಡಾಂಗಣದ ವ್ಯವಸ್ಥೆ ಇರುತ್ತದೆ. ಕ್ರೀಡೆಗಳು ಮಾನವನ ದೇಹದಲ್ಲಿ ಚೈತನ್ಯದ ಶಕ್ತಿಯನ್ನು ತುಂಬುತ್ತವೆ. ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣ ಸಮರವನ್ನು ಎದುರಿಸುವ ಗುಣ ಸಾಮರಸ್ಯವನ್ನು ತುಂಬುವ ಗುಣ ಜೊತೆಗೂಡಿ ಬಾಳುವ ಗುಣ ಹೀಗೆ ಅನೇಕ ರೀತಿಯ ಪಾಠವನ್ನು ಕಲಿಸಿಕೊಡುತ್ತದೆ. ಶಾಲೆಯ ಕ್ರೀಡೋತ್ಸವ ಒಂದು ಹಬ್ಬದಂತೆ. ಎಲ್ಲರೂ ಈ ಹಬ್ಬದಲ್ಲಿ ಪಾಲ್ಗೊಳ್ಳಿ. ಆಟದಲ್ಲಿ ಸೋಲು ಗೆಲುವು ಮಾಮೂಲಿ. ಸೋತಾಗ ಕುಗ್ಗದೆ ಸೋಲನ್ನು ಸಂಭ್ರಮಿಸಿ ಎಂದು ಶುಭ ಹಾರೈಸಿದರು.

ತದನಂತರ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಶುಭ ಹಾರೈಸಿದರು.

ಶಾಲಾ ದೈಹಿಕ ಶಿಕ್ಷಕರಾದ ಸಂತೋಷ್ ಸ್ಪರ್ಧೆಗಳ ವಿವರವನ್ನು ನೀಡಿದರು. ಈ ಈ ಕಾರ್ಯಕ್ರಮದ ಯಶಸ್ವಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಶಾಲೆ, ಧರ್ಮಸ್ಥಳ ಇದರ ದೈಹಿಕ ಶಿಕ್ಷಕರಾಗಿರುವ ಶ್ರೀ.ಸಂಜೀವ್ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಇಲ್ಲಿನ ದೈಹಿಕ ಶಿಕ್ಷಕರಾಗಿರುವ ಶ್ರೀಯುತ ಸುಭಾಷ್ ಸಹಕರಿಸಿದರು.

ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಿದ್ಯಾರ್ಥಿಗಳನ್ನು ಶಾಂತಿ ಸ್ಪೂರ್ತಿ ಕೀರ್ತಿ ಜ್ಯೋತಿ ಎಂಬ ನಾಲ್ಕು ವಿಭಾಗಗಳನ್ನಾಗಿ ಆ ನಾಲ್ಕು ತಂಡಗಳು ಪಥ ಸಂಚಲನದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.

Related post

Leave a Reply

Your email address will not be published. Required fields are marked *

error: Content is protected !!