ಕೆಲವೇ ತಿಂಗಳಲ್ಲಿ ವಿಧಾನ ಸಭೆ ಚುನಾವಣೆ..!: ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭ..!: ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಬಿಜೆಪಿಗೆ ಅಧಿಕೃತ ಸೇರ್ಪಡೆ
ಬೆಳ್ತಂಗಡಿ: ವಿಧಾನ ಸಭೆ ಚುನಾವಣೆ ಕೆಲವೇ ತಿಂಗಳಲ್ಲಿ
ಆರಂಭವಾಗಲಿದ್ದು ಈ ನಡುವೆ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಕೈಗೆ ಕೈಕೊಟ್ಟು ಕಮಲದ ಪತಾಕೆ ಹಿಡಿದಿದ್ದಾರೆ. ಬೆಳ್ತಂಗಡಿಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳ ಸಭೆಯಲ್ಲಿ ಹಲವು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಒಂದೆಡೆ ಕಾಂಗ್ರೆಸ್ ಪಕ್ಷದಲ್ಲಿ ಮೂವರು ನಾಯಕರುಗಳು ಮುಂದಿನ ಚುನಾಣೆಯಲ್ಲಿ ಸ್ಪರ್ಧಿಸಲು ಹಾತೊರೆಯುತ್ತಿದ್ದು, ಪಕ್ಷದೊಳಗೆ ಅಸಮಧಾನ, ಗೊಂದಗಳಿವೆ. ಜೊತೆಗೆ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಬಿ ಫಾರಂ ಯಾರ ಕೈಗೆ ಸಿಗಲಿದೆ ಎಂಬ ಕುತೂಹಲವೂ ಇದೆ. ಇವೆಲ್ಲದರ ಜೊತೆಗೆ ಸಚಿವ ಸುನಿಲ್ ಕುಮಾರ್ ಮುಂದಾಳತ್ವದಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ಗೆ ಮತ್ತಷ್ಟು ನಷ್ಟ ಉಂಟಾಗುವ ಸಂಭವಗಳು ಗೋಚರಿಸತ್ತಿದೆ.
ಬಿಜೆಪಿ ಕಾರ್ಯಕಾರಿಣಿ ಸಭೆಯ ವೇಳೆ ಹಿರಿಯ ಕಾಂಗ್ರೆಸ್ ಮುಖಂಡ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಇತ್ತೀಚೆಗೆ ಧರ್ಮಸ್ಥಳದಲ್ಲಿ ಸಚಿವ ಬೈರತಿ ಬಸವರಾಜ್ ನೇತೃತ್ವದಲ್ಲಿ ಬಿಜೆಪಿ ಸೇರಿದ್ದ ಚಂದನ್ ಕಾಮತ್, ಮಡಂತ್ಯಾರಿನ ಕಾಂಗ್ರೆಸ್ ಮುಖಂಡ ಪುಷ್ಪರಾಜ ಹೆಗ್ಡೆ, ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಸುಧಾಕರ್ ಲಾಯಿಲ, ಮುಂಡಾಜೆ ಪಂಚಾಯತ್ ಮಾಜಿ ಸದಸ್ಯೆ, ಕಾಂಗ್ರೆಸ್ ನಾಯಕಿ ಅಶ್ವಿನಿ ಹೆಬ್ಬಾರ್, ರಾಜೇಶ್ವರಿ ಕುಕ್ಕಳ, ಸತೀಶ್ ಮಡಿವಾಳ ವೇಣೂರು, ಧರ್ಮಸ್ಥಳ ಗ್ರಾ.ಪಂ ಸದಸ್ಯೆ ಗಾಯತ್ರಿ, ಗ್ರಾ.ಪಂ. ಅಂತೋನಿ, ನಂದಾ ಭಟ್ ಕನ್ಯಾಡಿ, ವಿಠಲ ಗೌಡ ಕೊಕ್ಕಡ, ಕೇಶವ ಮೊಗು, ಜನಾರ್ದನ್ ಆಚಾರ್ಯ ಉಜಿರೆ, ಆನಂದ ಶೆಟ್ಟಿ ಆರಂಬೋಡಿ, ಸೆಬಾಸ್ಟಿಯನ್ ಮಾಜಿ ಯೋಧ, ಸುಂದರಿ ಕಲ್ಮಂಜ ಬಿಜೆಪಿ ಕಾರ್ಯಕಾರಿಣಿ ಸಭೆಯ ವೇಳೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಕಾಂಗ್ರೆಸ್ ನಾಯಕ ಹರಿಕೃಷ್ಣ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ, ಶ್ರೀನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.