• September 8, 2024

ಪಿಲಿಗೂಡು : ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ

 ಪಿಲಿಗೂಡು :  ಹಿಂದೂ ಜನಜಾಗೃತಿ ಸಮಿತಿಯಿಂದ  ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ

ಪಿಳಿಗೂಡು : ಪಿಳಿಗೂಡು ಬಾರ್ಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆ ಡಿ.4ರಂದು ನಡೆಸಲಾಯಿತು.

ಈ ಸಂದರ್ಭದಲ್ಲಿ ದಿನೇಶ್ ಜೈನ್ ಮಾತನಾಡಿ 400 ವರ್ಷಗಳಿಂದ ಹಿಂದುಗಳಿಗೆ ಧರ್ಮಶಿಕ್ಷಣ ಸಿಗುತ್ತಿಲ್ಲ, ಒಂದು ವೇಳೆ ಸಿಗುತ್ತಿದ್ದರೆ ಲವ್ ಜಿಹಾದ್, ಮತಾಂತರ ,ಗೋ ಹತ್ಯೆ ,ದೇವತೆಗಳ ವಿಡಂಬನೆ, ಹಿಂದೂ ಧರ್ಮದ ವಿಕೃತಿಕರಣ, ಆಗುತ್ತಿರಲಿಲ್ಲ. ನಿರ್ಭಯವಾಗಿ ಹಿಂದೂಗಳು ಬದುಕುತಿದ್ದರು. ಆದರೆ ಧರ್ಮಶಿಕ್ಷಣವಿಲ್ಲದೆ ಹಿಂದೂಗಳು ಭಯಭೀತರಾಗಿ ಬದುಕುತಿದ್ದಾರೆ. ನಿರ್ಭಯವಾಗಿ ಬದುಕಬೇಕಾದರೆ ಧರ್ಮಶಿಕ್ಷಣ ಒಂದೇ ದಾರಿ ಎಂದು ಹೇಳಿದರು.

ಸನಾತನ ಸಂಸ್ಥೆಯ ಆನಂದ ಗೌಡರವರು ಮಾತನಾಡುತ್ತಾ ಹಿಂದೂ ರಾಷ್ಟ್ರ ಸ್ಥಾಪನೆ ಎಂದರೆ ಯಾರು ಉಡುಗೊರೆ ಕೊಡಲು ಆಗುವುದಿಲ್ಲ. ಅದನ್ನು ನಾವು ಎಲ್ಲರೂ ಗಳಿಸಬೇಕಾಗಿದೆ. ಶಿವಾಜಿ ಮಹಾರಾಜರು ಹಿಂದೂ ಸ್ವರಾಜ್ಯವನ್ನು ಸ್ಥಾಪನೆ ಮಾಡಿದರು. ಅದೇ ರೀತಿ ನಾವು ಹಿಂದೂ ರಾಷ್ಟ್ರ ಸ್ಥಾಪನೆಗೆ ನಮ್ಮವರನ್ನು ಸೇರಿಸಿ ಕೃತಿಶೀಲರನ್ನಾಗಿ ಮಾಡಬೇಕಾಗಿದೆ. ಹಿಂದೂ ಧರ್ಮದ ಧರ್ಮಾಚರಣೆ ಮಾಡಲು ನಾವು ಹಿಂಜರಿಯುತ್ತಿದ್ದೇವೆ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ವಿವೇಕ್ ಪೈ ಅವರು ಮಾತನಾಡುತ್ತಾ ಯಾರು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ದಿನನಿತ್ಯ ದೇವರಿಗೆ ಪ್ರಾರ್ಥನೆ ಮಾಡಿ ದೀಪ ಹಚ್ಚುತ್ತಾನೋ, ಅವನೇ ನಿಜವಾದ ಹಿಂದೂ. ನಮ್ಮ ಸಂವಿಧಾನದಲ್ಲಿ ಬಹು ಸಂಖ್ಯಾತರಿಗೆ ಯಾವುದೇ ಸವಲತ್ತು ಧರ್ಮಶಿಕ್ಷಣ ವ್ಯವಸ್ಥೆ ಇಲ್ಲ. ಅಲ್ಪಸಂಖ್ಯಾತರಿಗೆ ಅವರ ಧರ್ಮಶಿಕ್ಷಣದ ಬಗ್ಗೆ ಶಿಕ್ಷಣ ಕೊಡುವ ವ್ಯವಸ್ಥೆ ಇದೆ. ಬಹು ಸಂಖ್ಯಾತ ಹಿಂದೂಗಳಿಗೆ ಯಾವುದೇ ಆರ್ಟಿಕಲ್ ಯಾವುದೇ ಕಲಂಗಳು ಅನ್ವಯವಾಗುವುದಿಲ್ಲ. 9 ರಾಜ್ಯಗಳಲ್ಲಿ ಮತಾಂತರ ಮಾಡಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ. ಹಿಂದೂ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹಣ ಹಿಂದೂ ದೇವಸ್ಥಾನದ ಅಭಿವೃದ್ಧಿಗೆ ,ತ್ರಿಕಾಲ ಪೂಜೆ ,ಧರ್ಮಶಿಕ್ಷಣಕ್ಕೆ ಉಪಯೋಗವಾಗದೆ ಅದನ್ನು ಅನ್ಯ ಪಂಥ ಶ್ರದ್ಧಾಕೇಂದ್ರಗಳಿಗೆ ಉಪಯೋಗಿಸಲಾಗುತ್ತದೆ. ವಕ್ಫ್ ಬೋರ್ಡ್ ನಿಂದ ಅಲ್ಲಲ್ಲಿ ಭೂಕಬಳಿಕೆ ಆಗುತ್ತಿರುತ್ತದೆ. ಇದನ್ನು ಇದನ್ನು ಪ್ರತಿಯೊಬ್ಬರೂ ಭೂ ದಾಖಲೆಗಳನ್ನು ಪರಿಶೀಲಿಸುತ್ತಿರಬೇಕಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಭೆಯ ವಕ್ತರರಾಗಿ ಸನಾತನ ಸಂಸ್ಥೆಯ ಆನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ವಿವೇಕ್ ಪೈ, ನಿವೃತ್ತ ತಹಶೀಲ್ದಾರ್ ರಾಘವೇಂದ್ರ ಆಚಾರ್ಯ ಮತ್ತು ದಿನೇಶ್ ಜೈನ್ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!