ಧರ್ಮನಗರ ಸಿದ್ದಿವಿನಾಯಕ ಯುವಕ ಮಂಡಲ ವತಿಯಿಂದ ಕೆಸರ್ಡೊಂಜಿ ದಿನ
ಕಂಬಳಬೆಟ್ಟು: ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ- ಕಂಬಳಬೆಟ್ಟು ಇವರ ವತಿಯಿಂದ ಮೂರೂ ಗ್ರಾಮಗಳನ್ನೊಳಗೊಂಡ ಹಿಂದೂ ಬಾಂಧವರ ತುಳುನಾಡ ಜಾನಪದ ಕ್ರೀಡೆ ಮತ್ತು ಆಚರಣೆಗಳನ್ನು ನೆನಪಿಸುವ ಸಲುವಾಗಿ ಮತ್ತು ಯುವಜನತೆಯ ಮನಸ್ಸುಗಳನ್ನು ದೇಶ ಭಾಷೆಗಳೊಂದಿಗೆ ಒಗ್ಗೂಡಿಸುವ ಸಲುವಾಗಿ ಕೆಸರ್ಡೊಂಜಿ ದಿನ ಕಾರ್ಯಕ್ರಮವು ಜು.24 ರಂದು ಕಾರ್ಯಾಡಿ ಬೈಲಿನಲ್ಲಿ ಜರುಗಿತು.
ಧರ್ಮನಗರದಿಂದ ಕಾರ್ಯಾಡಿ ಬೈಲಿಗೆ ಬೈಕ್ ರ್ಯಾಲಿ ಮೂಲಕ ಬರಲಾಯಿತು.
ಕಾರ್ಯಕ್ರಮವನ್ನು ಪುತ್ತೂರು ಚಾರಿಟೇಬಲ್ ಟ್ರಸ್ಟ್ ಮತ್ತು ರೈ ಎಜುಕೇಶನ್ ಸಂಚಾಲಕರು ಅಶೋಕ್ ಕುಮಾರ್ ರೈ ಕೋಡಿಂಬಾಡಿ ಉದ್ಘಾಟಿಸಿ, ಆಟಿ ತಿಂಗಳ ವಿಶೇಷತೆಯ ಬಗ್ಗೆ ತಿಳಿಸಿದರು.
ಧರ್ಮನಗರ ಸಿದ್ದಿವಿನಾಯಕ ಯುವಕ ಮಂಡಲ ಅಧ್ಯಕ್ಷರು ಕಾರ್ತಿಕ್ ಕುಮಾರ್ ಶೆಟ್ಟಿ ಮೂಡಾಯಿಮಾರ್ ಅಧ್ಯಕ್ಷ ತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಧರ್ಮಸೇವಾ ವಿಶ್ವಸ್ಥ ಮಂಡಳಿ ಅಧ್ಯಕ್ಷರು ಸುಬ್ರಹ್ಮಣ್ಯ ಭಟ್ ಉರಿಮಜಲು, ಕೃಷಿಕರು ಗೋಪಾಲಕೃಷ್ಣ ಭಟ್ ಮಿತ್ತೂರು, ಇಡ್ಕಿದು ಸೇ.ಸ.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ್ ನಾಯ್ಕ ಎಸ್, ವಿಟ್ಲ ಸಾನ್ವಿ ಕನ್ಸ್ಟ್ರಕ್ಷನ್ ತಾರನಾಥ ಬೊಳಿಗದ್ದೆ, ಇಡ್ಕಿದು ಗ್ರಾ.ಪಂ ಸದಸ್ಯರು ಚಿದಾನಂದ ಪೆಲತ್ತಿಂಜ, ಶಂಕರ್ ಭಟ್ ಉರಿಮಜಲು, ಧರ್ಮಸೇವಾ ವಿಶ್ವಸ್ಥ ಮಂಡಳಿ ಟ್ರಸ್ಟಿ ಧನರಾಜ್ ಅಮೈ ಮಾಗಣೆ, ಇಡ್ಕಿದು ಸೇ.ಸ.ಸಂಘದ ಶಾಖಾಧಿಕಾರಿ ರವೀಂದ್ರ ಮೇಲಾಂಟ ಕಲ್ಲಂದಡ್ಕ, ಸತೀಶ್ ಪೂಜಾರಿ ನೇರೋಳ್ತಡ್ಕ, ಜಿನ್ನಪ್ಪ ಪೂಜಾರಿ ಮುರ, ಪುತ್ತೂರು ಮೆಸ್ಕಾಂನ ರಾಜೇಂದ್ರ ಮರೀಲು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಯುವ ಜನತೆ ಅಪರೂಪದ ಆಟಗಳಲ್ಲಿ ಭಾಗವಹಿಸಿ ಸಂಭ್ರಮ ಪಟ್ಟರು.
ಈ ವೇಳೆ ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರದ ಕಂಬಳಬೆಟ್ಟು ಕಾರ್ಯಕರ್ತರು, ಗ್ರಾಮಸ್ಥರು, ಪುಟ್ಟ ಪುಟ್ಟ ಮಕ್ಕಳು, ಮಹಿಳೆಯರು ಇನ್ನಿತರರು ಭಾಗಿಯಾಗಿದ್ದರು.