ಮಿಯ್ಯಾರು- ಕಾಯರ್ತಡ್ಕ- ಬರೆಂಗಾಯ- ಶಿಶಿಲ ಬಸ್ ಗಳ ಸಮಸ್ಯೆ: ಪ್ರಯಾಣಿಕರ ಪರದಾಟ: ಬಸ್ ಗಳನ್ನು ಪುನರಾರಂಭಿಸುವಂತೆ ಗ್ರಾಮಸ್ಥರಿಂದ ಮನವಿ
ಕಾಯರ್ತಡ್ಕ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ವತಿಯಿಂದ ಮತ್ತು ಗ್ರಾಮಸ್ಥರು ಹಾಗೂ ಕಳೆಂಜ ಗ್ರಾ.ಪಂ ಸಹಯೋಗದೊಂದಿಗೆ ಬಸ್ಸಿನ ಸಮಸ್ಯೆಯ ಕುರಿತು ನ.6 ರಂದುಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ ಕಾಯರ್ತಡ್ಕದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕಳೆಂಜ ಗ್ರಾ.ಪಂ ಅಧ್ಯಕ್ಷ ಪ್ರಸನ್ನ ಎಪಿ ವಹಿಸಿದ್ದರು.
ಈ ಸಂದರ್ಭದಲ್ಲಿ ಮಿಯ್ಯೂರು- ಕಾಯರ್ತಡ್ಕ- ಬರೆಂಗಾಯ- ಧರ್ಮಸ್ಥಳ ದ ವರೆಗೆ ಸಂಚರಿಸುತ್ತಿರುವ ಬಸ್‌ಗಳ ಸಮಸ್ಯೆಗಳ ಕುರಿತು, 5.45 ಕ್ಕೆ ಧರ್ಮಸ್ಥಳ- ಬರೆಂಗಾಯ – ಕಾಯರ್ತಡ್ಕ ಮಿಯ್ಯಾರು ವರೆಗೆ ಸಂಚರಿಸುತ್ತಿದ್ದ ಬಸ್ ಅನ್ನು ರೂಟ್ ಬಸ್ ಮಾಡುವ ಕುರಿತು ಹಾಗೂ 6.15 ಕ್ಕೆ ಸಂಚರಿಸುತ್ತಿದ್ದ ಧರ್ಮಸ್ಥಳ- ಕಾಯರ್ತಡ್ಕ – ಶಿಶಿಲ ಬಸ್ ಗಳನ್ನು ಪುನರಾರಂಭಿಸುವ ಬಗ್ಗೆ ಧರ್ಮಸ್ಥಳ ಘಟಕದ ಅಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಲಾಯಿತು.
ಈ ವೇಳೆ ಅರಣ್ಯ ಗ್ರಾಮ ಸಮಿತಿ ಅಧ್ಯಕ್ಷರು ಧನಂಜಯ ಗೌಡ, ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರು ಅಶೋಕ ಗೌಡ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರಾದ ಪ್ರಜ್ವಲ್ ಗೌಡ, ಪವನ್ ಕುಮಾರ್, ಪಂಚಾಯತ್ ಸದಸ್ಯರು ಭಾಗಿಯಾಗಿದ್ದರು.
ವಿವಿಧ ಸಂಘ ಟನೆಯ ಕಾರ್ಯಕರ್ತರು, ವಿದ್ಯಾರ್ಥಿ ಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.