• June 24, 2024

ಮುಂಡಾಜೆ ವಲಯದ ಕಟ್ಟಡ ಕಾರ್ಮಿಕರ ಸಭೆ: ಕಾರ್ಮಿಕರ ಸೌಲಭ್ಯಗಳ ಬಗ್ಗೆ ಮಾಹಿತಿ

 ಮುಂಡಾಜೆ ವಲಯದ ಕಟ್ಟಡ ಕಾರ್ಮಿಕರ ಸಭೆ: ಕಾರ್ಮಿಕರ ಸೌಲಭ್ಯಗಳ ಬಗ್ಗೆ ಮಾಹಿತಿ

ಮುಂಡಾಜೆ:  ಬೆಳ್ತಂಗಡಿ ತಾಲೂಕಿನ ಮುಂಡಾಜೆ ವಲಯದ ಕಟ್ಟಡ ಕಾರ್ಮಿಕರ ಸಭೆ  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಬಿಎಂಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯನ್ ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಗೃಹ ಸಹಾಯಧನ ಮುಂತಾದ ಕಾರ್ಮಿಕರ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು  ನೀಡಿದರು.

ಬಿ ಎಂ ಎಸ್ ಎನ್ ಬೆಳ್ತಂಗಡಿ ತಾಲೂಕು ಸಂಯೋಜಕ ಸಾಂತಪ್ಪ ಕಲ್ಮಂಜ ಅವರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕ ಮದ್ದೂರ್ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್ ಕಲ್ಮಂಜ , ವಲಯ ಬಿಎಮ್ಎಸ್ ನ ಅಧ್ಯಕ್ಷರಾದ ಸುರೇಶ್ ಕುಮಾರ್ ಹೆಗ್ಡೆ,  ಕಾರ್ಯದರ್ಶಿ ವಿಜಯ್ ಕುಮಾರ್ ಮಂಡಾಜೆ , ಕೋಶಾಧಿಕಾರಿ ಹೊನ್ನಪ್ಪ ಪೂಜಾರಿ ಹಾಗೂ ದೇವಾಲಯದ ಮೋಕ್ತೇಸರರಾದ ರಾಜಶೇಖರ್ ಭಟ್, ಸ್ಥಳಿಯ ಪ್ರಮುಖರಾದ ಚೆನ್ನಕೇಶವ ಅರಸ ಮಜಲು, ಹಿರಿಯ ಸಿವಿಲ್ ಗುತ್ತಿಗೆದಾರರಾದ ಗಣೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಂಡಾಜಿ ವಲಯದಿಂದ ಸುಮಾರು 75 ಜನ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!