• October 16, 2024

ಮುಂಡಾಜೆ ಅಗರಿಯಲ್ಲಿ ಪ್ರಾಣಕ್ಕೆ ಕಂಟಕ ವಾಗಿರುವ ವಿದ್ಯುತ್ ತಂತಿ: ಪ್ರಾಣ ಹಾನಿಯಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ ಸಂಬಂಧಪಟ್ಟ ಅಧಿಕಾರಿಗಳು

 ಮುಂಡಾಜೆ ಅಗರಿಯಲ್ಲಿ ಪ್ರಾಣಕ್ಕೆ ಕಂಟಕ ವಾಗಿರುವ ವಿದ್ಯುತ್ ತಂತಿ: ಪ್ರಾಣ ಹಾನಿಯಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ ಸಂಬಂಧಪಟ್ಟ ಅಧಿಕಾರಿಗಳು

 

ಮುಂಡಾಜೆ ಗ್ರಾಮದ ಅಗರಿ ಎಂಬ ಪರಿಸರದಲ್ಲಿ ಸುಮಾರು 50 ವರ್ಷಗಳ ಹಿಂದೆ ಹಾಕಿರುವ ವಿದ್ಯುತ್ ತಂತಿಗಳು ಬಹಳಷ್ಟು ಕ್ಷೀಣಿಸಿದ್ದು , ವರ್ಷದಲ್ಲಿ ಏಳೆಂಟು ಬಾರಿ ಈ ವಿದ್ಯುತ್ ತಂತಿ ಮಾರ್ಗಕ್ಕೆ ಕಡಿದು ಬೀಳುತ್ತಿದೆ. ಈ ಭಾಗದ ಲೈನ್ ಮ್ಯಾನ್ ದೂರು ನೀಡಿದ ತಕ್ಷಣ ಬಂದು ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಆದರೆ ಅದೆಷ್ಟು ಬಾರಿ ಇಲಾಖೆಗೆ ಮನವಿ ಮಾಡಿದರೂ ಕೂಡಾ ಈ ಪರಿಸರದಲ್ಲಿ ಹೊಸ ತಂತಿಯನ್ನು ಅಳವಡಿಸುತ್ತಿಲ್ಲ. ಈ ಹಿಂದೆ ಮೆಸ್ಕಾಂ ಇಲಾಖೆಯ ಅದಾಲತ್ ನಲ್ಲಿ ಕೂಡ ದೂರು ದಾಖಲಿಸಲ್ಪಟ್ಟಿದೆ. ಇದೀಗ ಮತ್ತೊಮ್ಮೆ ಇದೇ ಪರಿಸರದಲ್ಲಿ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಹೋಗುವ ದಾರಿಯಲ್ಲೇ ವಿದ್ಯುತ್ ತಂತಿಯೊಂದು ಕಡಿದು ಬಿದ್ದು ಕುತ್ತಿಗೆ ನೇರಕ್ಕೆ ನೇತಾಡುತ್ತಿದ್ದು, ಪ್ರಾಣಕ್ಕೆ ಕಂಟಕವಾಗಿದೆ.

ಅದೃಷ್ಟವಶಾತ್ ಇಂದು ಶಾಲಾ-ಕಾಲೇಜುಗಳಿಗೆ ರಜೆ ಇದ್ದುದರಿಂದ ಆಗುವ ದೊಡ್ಡ ಅನಾಹುತ ತಪ್ಪಿದೆ.ಇದೇ ಮನೆಯಲ್ಲಿ ಈ ಹಿಂದೆ 3-4 ವರ್ಷ ಗಳಿಂದ ಕಾಲೇಜಿನ ಹಾಗೂ ಪ್ರೌಢಶಾಲೆಯ ಕ್ರೀಡಾಪಟು ವಿದ್ಯಾರ್ಥಿಗಳು ನೆಲೆಸಿದ್ದರು. ಇಂತಹ ಸಮಸ್ಯೆ ಇರುವುದರಿಂದಲೇ ಈ ವರ್ಷ ಇಲ್ಲಿ ಮಾಲೀಕರು ವಾಸಕ್ಕೆ ಅವಕಾಶ ನೀಡಲಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಪ್ರಾಣ ಹಾನಿ ಆಗುವ ಮೊದಲು ಈ ಪರಿಸರದಲ್ಲಿ ಹೊಸ ತಂತಿಯನ್ನು ಅಳವಡಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

Related post

Leave a Reply

Your email address will not be published. Required fields are marked *

error: Content is protected !!