• June 13, 2024

ಕುಂದಾಪುರ: ಕಡಲತೀರದಲ್ಲಿ ಕಾಂತಾರ: ಮರಳಿನಲ್ಲಿ ಮೂಡಿದ ಆಕರ್ಷಣೀಯ ಕಲಾಕೃತಿ

 ಕುಂದಾಪುರ: ಕಡಲತೀರದಲ್ಲಿ ಕಾಂತಾರ: ಮರಳಿನಲ್ಲಿ ಮೂಡಿದ ಆಕರ್ಷಣೀಯ ಕಲಾಕೃತಿ

ಕುಂದಾಪುರ: ಎಲ್ಲಿ ನೋಡಿದರೂ ಕಾಂತರದ್ದೇ ಹವ. ಜಗತ್ತಿನಾದ್ಯಂತ ಈ ಸಿನಿಮಾದ್ದೇ ಅಬ್ಬರ. ರಿಷಬ್ ಶೆಟ್ಟಿಯವರ ನಿರ್ದೇಶನ, ನಟನೆ ಜನರ ಮನಸ್ಸನ್ನು ಗೆದ್ದಿದೆ. ಕಾಂತಾರದಲ್ಲಿ ಕ್ಲೈಮ್ಯಾಕ್ಸಲ್ಲಿ ಬರೋ 20 ನಿಮಿಷದ ದೃಶ್ಯ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದೆ.

ಬಹಳಷ್ಟು ಜನ ಇವರ ಅಭಿನಯವನ್ನು ಕಂಡು ದಂಗಾಗಿದ್ದಾರೆ. ಈ ಸಿನೆಮಾ ನೋಡಿ ಉಡುಪಿಯ ಸ್ಯಾಂಡ್ ಥೀಂ ತಂಡದ ಕಲಾವಿದರು ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಪ್ರಸಾದ್ ಆರ್ ಮರಳಿನ ಶಿಲ್ಪ ಕಲಾಕೃತಿಯ ಮೂಲಕ ಕಾಂತಾರ ಸಿನಿಮಾದ ಬಗ್ಗೆ ಅಭಿನಂದನೆ ತೋರಿಸಿ ಗಮನ ಸೆಳೆದಿದ್ದಾರೆ.ಕುಂದಾಪುರ ಕೋಟೇಶ್ವರ ಹಳೆ ಅಲಿವೆ ಕಡಲ ತೀರದಲ್ಲಿ ವರಾಹರೂಪಿ ಪಂಜುರ್ಲಿ ಮತ್ತು ದೈವರೂಪದಲ್ಲಿ ಅಚತರಿಸಿದ ನಟ ರಿಷಬ್ ಶೆಟ್ಟಿಯವರನ್ನೇ ಕೇಂದ್ರವಾಗಿರಿಸಿ 4 ಅಡಿ ಮತ್ತು 7.5 ಅಡಿ ಎತ್ತರ ಅಗಲವುಳ್ಳ ಮರಳು ಕಲಾಕೃತಿಯನ್ನು ರಚಿಸಿ ಅಭಿಮಾನ ತೋರಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!