ಶಾಸಕ ಹರೀಶ್ ಪೂಂಜರ ಮೇಲೆ ಕಿಡಿಗೇಡಿಗಳ ತಂಡದಿಂದ ದಾಳಿಗೆ ಯತ್ನ:ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ವಿ.ಹಿ.ಪ ಭಜರಂಗದಳ ಬೆಳ್ತಂಗಡಿ ಪ್ರಖಂಡ ವತಿಯಿಂದ ಮನವಿ


ಬೆಳ್ತಂಗಡಿ: ದುಷ್ಕರ್ಮಿಗಳ ತಂಡ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೆ ದಾಳಿಗೆ ಯತ್ನಿಸಿರುವ ಘಟನೆಯನ್ನು ವಿರೋಧಿಸಿ, ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿ ವಿ.ಹಿ.ಪ ಭಜರಂಗದಳ ಬೆಳ್ತಂಗಡಿ ಪ್ರಖಂಡ ವತಿಯಿಂದ ಅ. 14ರಂದು ಬೆಳ್ತಂಗಡಿ ವೃತ್ತನಿರೀಕ್ಷರಿಗೆ ಮನವಿ ಸಲ್ಲಿಸಲಾಯಿತು.
ಶಾಸಕರ ಮೇಲೆ ದಾಳಿಗೆ ಯತ್ನಿಸಿದ ಕಿಡಿಗೇಡಿಗಳ ತಂಡವನ್ನು ಶೀಘ್ರ ವಾಗಿ ಬಂಧಿಸಬೇಕು, ಶಾಸಕರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ವಿ.ಹಿ.ಪ ಜಿಲ್ಲಾ ಸಂಚಾಲಕ ಭಾಸ್ಕರ್ ಧರ್ಮಸ್ಥಳ, ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ಮೊದಲಾದವರು ಉಪಸ್ಥಿತರಿದ್ದರು.