ಕಾಣೆಯಾಗಿದ್ದ ಉಜಿರೆ ಅತ್ತಾಜೆ ನಿವಾಸಿ ಗೋಪಾಲನಾಯ್ಕ್ ಕೆರೆಯಲ್ಲಿ ಶವವಾಗಿ ಪತ್ತೆ
ಉಜಿರೆ: ಉಜಿರೆ ಅತ್ತಾಜೆ ನಿವಾಸಿ ಗೋಪಾಲನಾಯ್ಕ್ (60) ಎಂಬವರು ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಅ.13 ರಂದು ನಡೆದಿದ್ದು ಅ.14ರಂದು ಬೆಳಿಗ್ಗೆ ಶವ ಪತ್ತೆಯಾಗಿದೆ.
ಮೃತರಾದ ಗೋಪಾಲನಾಯ್ಕ್ ಅ.13ರಂದು ಸಂಜೆ ಪೇಟೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಾರದೇ ಇದ್ದುದನ್ನು ಕಂಡು ಸ್ಥಳೀಯರಲ್ಲಿ ಮನೆಯವರು ವಿಚಾರಿಸಿದ್ದಾರೆ. ಆದರೆ ಮನೆಯವರಿಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.
ಅ.14ರಂದು ಸ್ಥಳೀಯರೋರ್ವರು ಎಂದಿನಂತೆ ವಾಕಿಂಗ್ ಹೋಗಿದ್ದ ವೇಳೆ ಉಜಿರೆ ಮುಖ್ಯ ರಸ್ತೆಯಲ್ಲಿ ಮೃತರ ಚಪ್ಪಲಿಯನ್ನು ಕಂಡು ಹುಡುಕಾಟ ನಡೆಸಿದ್ದಾರೆ ಅಲ್ಲೇ ದೂರದ ಕೆರೆಯಲ್ಲಿ ಶವ ಪತ್ತೆಯಾಗಿರುವುದು ಕಂಡು ಬಂದಿದೆ. ಮನೆಯವರಿಗೆ ಸ್ಥಳೀಯರೋರ್ವರು ತಿಳಿಸಿದ್ದಾರೆ. ಶವವನ್ನು ಮೇಲಕ್ಕೆತ್ತಿ ಬೆಳ್ತಂಗಡಿ ಸಾರ್ವಜನಿಕ ಾಸ್ಪತ್ರೆಯ ಶವಗಾರದಲ್ಲಿ ಶವವನ್ನು ಇಡಲಾಗಿದೆ.
ಮೃತರು ಪತ್ನಿ ದೇವಕಿ, ಇಬ್ಬರು ಗಂಡು ಮಕ್ಕಳಾದ ರವಿ, ರಾಜೇಶ್, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ