• July 15, 2024

ಬಳಂಜ: ಸ್ವಾಧೀನ ಕಳೆದುಕೊಂಡು ಬಳಲುತ್ತಿರುವ ಬಳಂಜ ನಿವಾಸಿ ಲತಾ ಇವರಿಗೆ ನೆರವಿನ ಹಸ್ತ ಬೇಕಾಗಿದೆ: ಇಬ್ಬರು ಪುಟ್ಟ ಪುಟ್ಟ ಮಕ್ಕಳಿಗೆ ತಾಯಿಯ ಮಮತೆಯ ಆಸರೆ ಬೇಕಾಗಿದೆ: ಸಹೃದಯ ಮಿತ್ರರ ನೆರವು ನೀಡುವಿರಾ?

 ಬಳಂಜ: ಸ್ವಾಧೀನ ಕಳೆದುಕೊಂಡು ಬಳಲುತ್ತಿರುವ ಬಳಂಜ ನಿವಾಸಿ ಲತಾ ಇವರಿಗೆ ನೆರವಿನ ಹಸ್ತ ಬೇಕಾಗಿದೆ: ಇಬ್ಬರು ಪುಟ್ಟ ಪುಟ್ಟ ಮಕ್ಕಳಿಗೆ ತಾಯಿಯ ಮಮತೆಯ ಆಸರೆ ಬೇಕಾಗಿದೆ: ಸಹೃದಯ ಮಿತ್ರರ ನೆರವು ನೀಡುವಿರಾ?

ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಕೊಂಗುಲ ನಿವಾಸಿಯಾಗಿರುವ ಲತಾ ದೇವಾಡಿಗರವರು ಇತ್ತೀಚೆಗೆ ಸುಮಾರು 25 ದಿನಗಳಿಂದ ಸೊಂಟ ಹಾಗೂ ಎರಡು ಕಾಲುಗಳ ಸ್ವಾದೀನ ಕಳೆದುಕೊಂಡು ಬಳಲುತ್ತಿದ್ದಾರೆ.

ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಸುಮಾರು ಮೂರುವರೆ ಲಕ್ಷಕ್ಕೂ ಅಧಿಕ ಆಸ್ಪತ್ರೆ ವೆಚ್ಚವಾಗಿರುತ್ತದೆ ಜೊತೆಗೆ ಮುಂದಿನ ಚಿಕಿತ್ಸೆಯ ಅಗತ್ಯತೆ ಇರುತ್ತದೆ ಅವರಿಗೆ ಆರು ವರ್ಷ ಮತ್ತು ಒಂದೂವರೆ ವರ್ಷದ ಎರಡು ಮಕ್ಕಳಿದ್ದು ಗಂಡ ಕೃಷಿ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುತ್ತಿದ್ದರು. ಆದರೆ ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಹಾಗೂ ಪತ್ನಿಯ ಆರೈಕೆಗಾಗಿ ಕೆಲಸಕ್ಕೆ ಹೋಗಲೂ ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ.

ಅನಿರೀಕ್ಷಿತವಾಗಿ ಬಂದ ಪರಿಸ್ಥಿತಿಯನ್ನು ಎದುರಿಸಲು ದಾನಿಗಳ ಸಹಾಯ ಸಹಕಾರದ ಅಗತ್ಯವಿದೆ. ಹನಿ ಹನಿಬಕೂಡಿದರೆ ಹಳ್ಳ ಅನ್ನುವಂತೆ ದಾನಿಗಳು , ನಾವು, ನೀವು ಸೇರಿ ಸಹಾಯ ಮಾಡಬೇಕಾಗಿದೆ. ನೊಂದ ಕುಟುಂಬಕ್ಕೆ ಆಸರೆಯಾಗಬಹುದು ಎನ್ನುವುದು ಆಶಯ

Related post

Leave a Reply

Your email address will not be published. Required fields are marked *

error: Content is protected !!