ಅಡುಗೆ ಚೆನ್ನಾಗಿಲ್ಲ ಎಂದು ಪತ್ನಿಯ ಕತ್ತು ಸೀಳಿ ಕೊಲೆಗೈದ ಪಾಪಿ ಪತಿ

ದಾವಣಗೆರೆ: ಅಡುಗೆ ಚೆನ್ನಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಪತಿ ಪತ್ನಿಯರ ನಡುವೆ ಜಟಾಪಟಿ ನಡೆದು ಪತಿ, ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ದಾವಣಗೆರೆಯ ರಾಮಕೃಷ್ಣ ಹೆಗಡೆ ನಗರದಲ್ಲಿ ಅ.9ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಖ್ತರ್ ರಜಾ ಸರ್ಕಲ್ ರಿಂಗ್ ರಸ್ತೆಯ ಹೆಗಡೆ ನಗರದ ನಿವಾಸಿ ಶಾಕಿರಾ ಬೀ(70) ಕೊಲೆಯಾದ ದುರ್ದೈವಿ.
ಪತಿ ಚಮನ್ ಸಾಬ್ (80) ಕೊಲೆ ಮಾಡಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಶಾಕೀರಾ ಬೀ ಮತ್ತು ಚಮನ್ ಸಾಬ್ ಗೆ ಮಕ್ಕಳಿದ್ದರೂ ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಅಡುಗೆ ಇತರೆ ವಿಚಾರವಾಗಿ ಗಂಡ ಹೆಮಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.