ಮಂಗಳೂರು: ದ್ವಿದಶಕ ಪೂರ್ಣಗೊಳಿಸಿದ ಹಿಂದೂ ಜನಜಾಗೃತಿ ಸಮಿತಿ: ಹಲಾಲ್ ವ್ಯಾಖ್ಯಾನ, ಪತ್ರಿಕಾಗೋಷ್ಠಿ
ಮಂಗಳೂರು: ಹಿಂದೂ ಜನಜಾಗೃತಿ ಸಮಿತಿಯು ದ್ವಿದಶಕ ಪೂರ್ಣಗೊಳಿಸಿದ ಸಂದರ್ಭದಲ್ಲಿ ಮಂಗಳೂರಿನ ಬಾಲಂಭಟ್ ಸಭಾಗೃಹದಲ್ಲಿ ಅ.3ರಂದು ಹಿಂದೂ ಧರ್ಮಾಭಿಮಾನಿಗಳಿಗೆ “ಹಲಾಲ್ ವ್ಯಾಖ್ಯಾನ” ದ ಆಯೋಜನೆಯನ್ನು ಮಾಡಲಾಯಿತು.
ಹಿಂದೂ ಜನಜಾಗೃತಿ ಸಮನ್ವಯಕರು ಚಂದ್ರ ಮೊಗೇರ ರವರು ಮಾತನಾಡಿ ಕಳೆದ 20 ವರ್ಷಗಳಿಂದ ಮಾಡಿದ ನಿರಂತರ ಜಾಗೃತಿಯಿಂದಾಗಿ ರಾಜ್ಯದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಹಿಂದೂಗಳ ಶ್ರದ್ಧಾ ಸ್ಥಾನಗಳ ವಿಡಂಬನೆಯನ್ನು ತಡೆಯಲು ಹಿಂದೂಗಳು ಸಕ್ರಿಯವಾಗಿರುವುದು ಕಂಡು ಬರುತ್ತಿದೆ. ಧರ್ಮಶಿಕ್ಷಣ, ಧರ್ಮಜಾಗೃತಿ, ಹಿಂದೂ ಸಂಘಟನೆ, ರಾಷ್ಟ್ರರಕ್ಷಣೆ ಮತ್ತು ಧರ್ಮರಕ್ಷಣೆಯ ೀ ಪಂಚಸೂತ್ರಗಳ ಆಧಾರದಲ್ಲಿ ವರ್ಷವಿಡೀ ವಿವಿಧ ಉಪಕ್ರಮಗಳನ್ನು ನಡೆಸಲಾಗುತ್ತದೆ ಎಂದು ಸಮಿತಿಯ ಪರಿಚಯವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷರು ರಾಜಶೇಖರ ಹೆಬ್ಬಾರ್ ಹಿಂದೂಗಳಲ್ಲಿ ತಮ್ಮ ಕರ್ತವ್ಯದ ಜಾಗೃತಿಯನ್ನು ಮೂಡಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ ಮಾತನಾಡಿ ಹಲಾಲ ವ್ಯವಸ್ಥೆಯ ಬಗ್ಗೆ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮನ್ವಯಕರು ಚಂದ್ರ ಮೊಗೇರ, ಉಡುಪಿ ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷರು ರಾಜಶೇಖರ ಹೆಬ್ಬಾರ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ ಉಪಸ್ಥಿತರಿದ್ದರು.