• September 8, 2024

ಉಜಿರೆಯಲ್ಲಿ ಲೋಕಾರ್ಪಣೆಗೊಂಡ ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾದ ಹೋಟೆಲ್ ದಿ ಓಶಿಯನ್ ಪರ್ಲ್:ಯಾವೆಲ್ಲ ಸೌಲಭ್ಯಗಳಿದೆ

 ಉಜಿರೆಯಲ್ಲಿ ಲೋಕಾರ್ಪಣೆಗೊಂಡ  ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾದ ಹೋಟೆಲ್  ದಿ ಓಶಿಯನ್  ಪರ್ಲ್:ಯಾವೆಲ್ಲ ಸೌಲಭ್ಯಗಳಿದೆ

ಉಜಿರೆ: ದಿ ಓಷ್ಯನ್  ಪರ್ಲ್  ಹೋಟೆಲ್ಸ್ ಪ್ರೈ.ಲಿಮಿಟೆಡ್ ಸಂಸ್ಥೆಯ 5ನೇ ಶಾಖೆ ಓಶಿಯನ್ ಪರ್ಲ್ ಸೆ.30ರಂದು ಉಜಿರೆಯ ಕಾಶಿ ಪ್ಯಾಲೇಸ್ ನಲ್ಲಿ  ಮಾತೃಶ್ರೀ ಕಾಶಿ ಶೆಟ್ಟಿ ಇವರ ಉಪಸ್ಥಿತಿಯಲ್ಲಿ  ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್  ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಆರ್ ಎಸ್ ಎಸ್ ಮುಖಂಡರು ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ ಇಬ್ಬರು ದಿಗ್ಗಜರು ಸುಸಜ್ಜಿತವಾದ ಹೋಟೆಲನ್ನು ನಿರ್ಮಿಸಿದ್ದಾರೆ. ಇವರು ಕಂಡಂತಹ ಸೋಲುಗಳು ಇದೀಗ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಿ ಅಭಿನಂದನೆಯನ್ನು ತಿಳಿಸಿದರು.

ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್ ಮಾತನಾಡಿ ಶಶಿಧರ್ ಶೆಟ್ಟಿ  ಅವರ ಅನುಭವದ ವ್ಯವಸ್ಥೆ ಯಡಿಯಲ್ಲಿ ಲೋಕಾರ್ಪಣೆಗೊಂಡಿದೆ. ಸಾಮಾನ್ಯ ಜನತೆಗೂ ಈ ಹೋಟೆಲ್ ಗೆ ಬರುವ ಅವಕಾಶ ಕಲ್ಪಿಸಲಾಗಿದೆ. ಈ ಸಂಸ್ಥೆ ಯಶಸ್ವಿಯತ್ತ ಮುನ್ನುಗ್ಗಲಿ ಎಂದು ಶುಭಹಾರೈಸಿದರು.

ಶರತ್ ಕೃಷ್ಣ ಪಡ್ವೆಟ್ನಾಯ ಮಾತನಾಡಿ ಉಜಿರೆಯಲ್ಲಿ ಈ ಹೋಟೆಲ್ ಇರುವುದು ಹೆಮ್ಮೆಯ ವಿಚಾರ. ಉಜಿರೆಯ ಇನ್ನೊಂದು ಬೆಳವಣಿಗೆ ಪ್ರಾರಂಭವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಹೆಮ್ಮೆಯ ಉದ್ಯಮವಾಗಿ ಬೆಳೆಯಲಿ. ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು  ಆಶಿಸಿದರು.

ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಡಾ|ಎಂ ಮೋಹನ್ ಆಳ್ವ, ಎಸ್ ಡಿಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು ಪ್ರೊ.ಎಸ್ ಪ್ರಭಾಕರ್, ಉಜಿರೆ ಎಸ್ ಡಿಎಂ  ಐಟಿ ಮತ್ತು ವಸತಿನಿಲಯಗಳ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರನ್ ಯಶೋವರ್ಮ, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಮಂಗಳೂರು ಉತ್ತರ ವಿದಾನಸಭಾ ಕ್ಷೇತ್ರದ ಶಾಸಕ ಡಾ| ವೈ ಭರತ್ ಶೆಟ್ಟಿ, ಪಟ್ಲ ಸತೀಶ್  ಭಾಗಿಯಾಗಿದ್ದರು.

ಕಾಶಿ ಪ್ಯಾಲೆಸ್ ಮಾಲಕರು ಶಶಿಧರ್ ಶೆಟ್ಟಿ, ಓಷ್ಯನ್ ಪರ್ಲ್ ಗ್ರೂಪ್ ಆಫ್ ಹೋಟೆಲ್ ಅಧ್ಯಕ್ಷರು ಜಯರಾಮ್ ಬನನ್ ಅತಿಥಿಗಳನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಓಶಿಯನ್ ಪರ್ಲ್ ವೈಸ್ ಪ್ರೆಸಿಡೆಂಟ್ ಗಿರೀಶನ್ , ಜಿ.ಎಂ ಓಶಿಯನ್ ಪರ್ಲ್ ನಿತ್ಯಾನಂದ ಮಂಡಲ್, ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ಶಶಿಕುಮಾರ್ ,  ಶಶಿಧರ್ ಶೆಟ್ಟಿ ಮನೆಯವರು ಉಪಸ್ಥಿತರಿದ್ದರು.

ಯಾವೆಲ್ಲ ಸೌಲಭ್ಯಗಳಿವೆ:

ಅತಿಥಿ ಸೇವೆಗೆ ಮತ್ತು ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾದ ಹೋಟೆಲ್ ಓಶಿಯನ್  ಪರ್ಲ್ ಉಜಿರೆಯಲ್ಲಿ   ಐಷಾರಾಮಿ ಹೋಟೆಲ್ ಗಳ ನಿರ್ವಹಣೆಗೆ ಹೊಸ ಮುಕುಟವನ್ನು ಸೇರ್ಪಡೆಗೊಳಿಸಿದಂತಾಗಿದೆ.

ಇಲ್ಲಿ 200 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಕಾನ್ಫೆರೆನ್ಸ್ ಹಾಲ್,  ಬ್ರಾಂಡ್ ಸಸ್ಯಹಾರಿ ರೆಸ್ಟೋರೆಂಟ್, 140 ಮಂದಿಯ ಆಸನ ವ್ಯವಸ್ಥೆಯ ಸಾಮರ್ಥ್ಯ ಹೊಂದಿದ್ದು, 50 ಮಂದಿ ಕುಳಿತುಕೊಂಡು ತಿನ್ನುವ ಮಾಂಸಾಹಾರಿ ರೆಸ್ಟೋರೆಂಟ್ ಕೋರಲ್ ಅನ್ನು ಹೊಂದಿದೆ. ” ಓಶಿಯನ್ ಪರ್ಲ್ ಜಿಮ್” ದೇಹ ದಾರ್ಡ್ಯತೆ ಬಯಸುವ ಉತ್ಸಾಹಿ ಜನರ ಗುಣಮಟ್ಟದ ಜೀವನಕ್ಕೆ ಮತ್ತು ಅಗತ್ಯಗಳನ್ನು ಪೂರೈಸಲೂ ಇಲ್ಲಿ ಅವಕಾಶವಿದೆ.

Related post

Leave a Reply

Your email address will not be published. Required fields are marked *

error: Content is protected !!