ನೆರಿಯ: ಅಪ್ಪೆಲ ಶ್ರೀ ಉಮಾ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು: ಗರ್ಭಗುಡಿಯ ಬೀಗ ಒಡೆದು ಕಳ್ಳತನಕ್ಕೆ ಯತ್ನ
ನೆರಿಯ : ನೆರಿಯ ಗ್ರಾಮದ ಅಪ್ಪೆಲ ಶ್ರೀ ಉಮಾ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯಿಂದ ಹಣ ಕಳ್ಳತನ ಮಾಡಿರುವ ಘಟನೆ ಸೆಪ್ಟೆಂಬರ್ 27ರಂದು ರಾತ್ರಿ ವೇಳೆ ನಡೆದಿದೆ ಸೆಪ್ಟೆಂಬರ್ 28ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ರಾತ್ರಿಯ ವೇಳೆ ಕಳ್ಳರು ದೇವಸ್ಥಾನಕ್ಕೆ ನೂಗ್ಗಿದ್ದು ಕಳ್ಳರು ಗರ್ಭಗುಡಿಯ ಬೀಗ ಒಡೆದಿದ್ದು, ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ದೋಚಿದ್ದಾರೆ ಹಗಲಿನಲ್ಲಿ ಸಮೀಪವಿರುವ ಫ್ಯಾನ್ಸಿ ಅಂಗಡಿಗೂ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ್ದಾರೆ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಹೆಚ್ಚಿನ ಮಾಹಿತಿ ಲಭ್ಯ ಆಗಬೇಕಾಗಿದೆ.