• October 14, 2024

ಅಕ್ಕ-ತಂಗಿಯರ ಬಾಳಿಗೆ ಬೆಳಕಾದ “ಬದುಕು ಕಟ್ಟೋಣ ಬನ್ನಿ” ತಂಡ

 ಅಕ್ಕ-ತಂಗಿಯರ ಬಾಳಿಗೆ ಬೆಳಕಾದ “ಬದುಕು ಕಟ್ಟೋಣ ಬನ್ನಿ” ತಂಡ

 

ಕಲ್ಮಂಜ: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಅಕ್ಷಯನಗರದ ಸದಾಶಿವ ಮತ್ತು ರೇಖಾ ದಂಪತಿಗಳ ಮಕ್ಕಳಾದ 8ನೆ ತರಗತಿಯ ಸ್ನೇಹ ಮತ್ತು 6ನೆ ತರಗತಿ‌ ದೀಪ ಶ್ರೀ ಇವರು ಕಲ್ಮಂಜ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಈ ಮಕ್ಕಳಿಗೆ ಫೋಷಕರಿಲ್ಲದೆ ಪೋಷಣೆಯನ್ನು ಮಾವ ಆಟೋ ಚಾಲಕರಾಗಿರುವ ಪ್ರವೀಣ್ ನೋಡಿಕೊಳ್ಳುತ್ತಿದ್ದು ಇದನ್ನು ಮನಗಂಡ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ ಸೆಪ್ಟೆಂಬರ್ 18 ರಂದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿತ್ತು.

ಈ ಮಕ್ಕಳ ವಿದ್ಯಾಭ್ಯಾಸ ಕ್ಕೆ “ಶಿಕ್ಷಣ ದೀವಿಗೆ” ಹಾಗೂ ಮನೆ ನಿರ್ಮಿಸಿಕೊಡುವ “ಸೇವೆ ನಮ್ಮದು ಬದುಕು ನಿಮ್ಮದು” ಎಂಬ ಭರವಸೆಯ ಕಾರ್ಯಕ್ರಮ ಸೆಪ್ಟೆಂಬರ್ 27ರಂದು(ಇಂದು) ಅಕ್ಷಯನಗರದ ಮನೆಯಲ್ಲಿ ನಡೆಸಲಾಯಿತು.

ವಾಸಕ್ಕೆ ಯೋಗ್ಯವಲ್ಲದ ಮನೆಯಾಗಿದ್ದು ಇವರಿಗಾಗಿ ನೂತನ ಮನೆ ಮತ್ತು ವಿದ್ಯಾಭ್ಯಾಸದ ಪೂರ್ಣ ಖರ್ಚು ವೆಚ್ಚಗಳನ್ನು ಗೆಳೆಯರ ಬಳಗ ಅಕ್ಷಯ ನಗರ ,ಸತ್ಯನಾರಾಯಣ ಭಜನಾ ಮಂಡಲಿ‌ ನಿಡಿಗಲ್ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ಹಾಗೂ ಊರವರ ಸಮ್ಮುಖದಲ್ಲಿ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಯಿತು‌.

ಇದೇ ಸಂದರ್ಭದಲ್ಲಿ ಉಜಿರೆ ಸಂಧ್ಯಾ ಟ್ರೆಡರ್ಸ್ ಮಾಲೀಕರಾದ ರಾಜೇಶ್ ಪೈಯವರ ಹುಟ್ಟುಹಬ್ಬವನ್ನು ಕೂಡ ಆಚರಿಸಲಾಯಿತು.

ಯೋಗದಲ್ಲಿ ದೀಪ ಶ್ರೀ ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಮತ್ತು ಸ್ನೇಹ ಜಿಲ್ಲಾ ಮಟ್ಟಕ್ಕೆ ಅಯ್ಕೆಯಾಗಿದ್ದು ಅದಲ್ಲದೆ ವಿಧ್ಯಾಭ್ಯಾಸದಲ್ಲಿ ಅಕ್ಕ-ತಂಗಿ ಮುಂಚೂನಿಯಲ್ಲಿದ್ದಾರೆ.

ಈ ಸಂದರ್ಭದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ರೂವಾರಿ ಲಕ್ಷ್ಮೀ ಇಂಡಸ್ಟ್ರೀಸ್ ‘ಕನಸಿನ ಮನೆ’ ಮಾಲೀಕರಾದ ಮೋಹನ್ ಕುಮಾರ್ ಹಾಗು ಸಂಧ್ಯಾ ಟ್ರೇಡರ್ಸ್ ಮಾಲೀಕ ರಾಜೇಶ್ ಪೈ, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಎಮ್. ಶ್ರೀಧರ್ ,ಮಾಜಿ ತಾಲೂಕು ಪಂಚಾಯತ್ ಸದಸ್ಯ ಎಮ್.ಶಶಿಧರ್, ಗೆಳೆಯರ ಬಳಗದ ಅಧ್ಯಕ್ಷ ವಿಲ್ಸನ್ ಮೋನಿಸ್ ಹಾಗೂ ಸದಸ್ಯರು, ಸತ್ಯನಾರಾಯಣ ಭಜನಾ ಮಂಡಳಿ ನಿಡಿಗಲ್ ಅಧ್ಯಕ್ಷರಾದ ಬಾಲಪ್ಪ.ಟಿ ಮತ್ತು ಸದಸ್ಯರು,
ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ಹಾಗೂ ಊರವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ನೆಲ್ಸನ್ ಮೋನಿಸ್ ಧನ್ಯವಾದ ಸಮರ್ಪಿಸಿದರು.

Related post

Leave a Reply

Your email address will not be published. Required fields are marked *

error: Content is protected !!