• February 20, 2025

ಉಜಿರೆ ರುಡ್‌ ಸೆಟ್‌ ಸಂಸ್ಥೆಯಲ್ಲಿವಸ್ತ್ರ ವಿನ್ಯಾಸ ತರಬೇತಿಯ ಸಮಾರೋಪ ಸಮಾರಂಭ

 ಉಜಿರೆ ರುಡ್‌ ಸೆಟ್‌ ಸಂಸ್ಥೆಯಲ್ಲಿವಸ್ತ್ರ ವಿನ್ಯಾಸ ತರಬೇತಿಯ ಸಮಾರೋಪ ಸಮಾರಂಭ

 

ಉಜಿರೆ : ನಿಮ್ಮಲ್ಲಿ ಇರುವ ಧೈರ್ಯ, ಚಾಕಕ್ಯತೆ, ಕ್ರಿಯಾಶೀಲತೆ ನೋಡಿ ನೀವು ನಿಜವಾಗಿಯೂ ಯಶಸ್ಸು ಕಾಣುತ್ತೀರಿ ಎಂದು ಭಾವಿಸುತ್ತೇನೆ. ನೀವು ಒಟ್ಟಿಗೆ ಸೇರಿ ಕಲಿಯುವುದರಿಂದ ಇನ್ನೊಬ್ಬರನ್ನು ತುಳಿದು ಬದುಕು ಸಾಮರ್ಥ್ಯ ವ್ಯರ್ಥ. ಆದರೆ ಇನ್ನೊಬ್ಬರನ್ನು ಅರಿತು ಜೊತೆಯಾಗಿ ಬದುಕಿ ಬಾಳುವುದು ಸಾಮರ್ಥ್ಯ ಎಂದು ಕಾಣುತ್ತದೆ. ಬೇರೆ ಬೇರೆ ಊರುಗಳಿಂದ ಬೇರೆ ಬೇರೆ ಹಿನ್ನಲೆಯನ್ನು ಹೊಂದಿರುವ ನೀವು ರುಡ್‌ ಸೆಟ್‌ ಸಂಸ್ಥೆಗೆ ಬಂದು ಒಟ್ಟಾಗಿ ಒಂದೇ ಮನೆಯವರಾಗಿ ಕಲಿತ್ತಿದ್ದೀರಿ ತುಂಭಾ ಸಂತೋಷ. ಇದನ್ನು ಮುಂದುವರೆಸಿ. ಈ ಸಂಸ್ಥೆಯಲ್ಲಿ ವೃತ್ತಿ ಕೌಶಲ್ಯದ ಜೊತೆಗೆ ಜೀವನ ಕೌಶಲ್ಯವನ್ನು ಕಲಿಸಿ, ಇದನ್ನು ಅಳಡಿಸಿಕೊಂಡು ನಡೆಯಿರಿ.ನಮ್ಮ ಯೋಚನೆಗಳು ಚೆನ್ನಾಗಿ ಇದ್ದಲ್ಲಿ ಯೋಜನೆ ಚೆನ್ನಾಗಿ ಆಗುತ್ತದೆ. ಸಮಸ್ಯೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಅದನ್ನು ಎದುರಿಸಿ ನಾವು ಬದುಕುವುಯದನ್ನು ಕಲಿಯಬೇಕು.ವೃತ್ತಿ ಜೀವನದ ಜೊತೆಗೆ ಸಂಸಾರಕ್ಕೂ ಒಂದಷ್ಟು ಸಮಯ ಕೊಡಬೇಕು ಎಂದು ನೆನಪಿರಲಿ. ವಸ್ತ್ರ ವಿನ್ಯಾಸಕ್ಕೆ ಯಾವತ್ತೂ ಬೇಡಿಕೆ ಇಲ್ಲಂತ ಆಗುವುದಿಲ್ಲ. ಪ್ರತಿಯೋಬ್ಬರು ಹೊಸ ವಿನ್ಯಾಸಗಳನ್ನು ಕೇಳುತ್ತಾರೆ. ನೀವು ಎಷ್ಟು ಹೊಸತನ ಕಲಿಯುತ್ತೀರಿ ಅಷ್ಟು ಕೆಲಸ ನಿಮಗೆ ಸಿಗುತ್ತದೆ. ನೀವು ಕಂಡ ಕನಸ ಅನ್ನು ನನಸು ಮಾಡಿಕೊಳ್ಳಿ ಶುಭವಾಗಲಿ ಎಂದು ಧರ್ಮಸ್ಥಳದ ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪರಿಮಳ ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ * ವಸ್ತ್ರ ವಿನ್ಯಾಸ* ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು.ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ *ಹಿರಿಯ ಉಪನ್ಯಾಸಕರಾದ *ಅಬ್ರಹಾಂ ಜೇಮ್ಸ್* ಕಾರ್ಯಕ್ರಮ ನಿರೂಪಿಸಿದರು *ಉಪನ್ಯಾಸಕರಾದ *ಕೆ.ಕರುಣಾಕರ ಜೈನ್* ವಂದಿಸಿದರು. ಸುಮಾರು 33 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು, ಶ್ರೀಮತಿ ದೀಪ್ತಿ, ಕುಮಾರಿ ಪೂರ್ಣಿಮಾ ಮತ್ತು ಕುಮಾರಿ ಸ್ವಾತಿ, ಕುಮಾರಿ ಲಾವಣ್ಯ ಪ್ರಾರ್ಥನೆ ಮಾಡಿದರು, ಶ್ರೀಮತಿ ಮೋನಿಕಾ, ಕುಮಾರಿ ಪೂಣ್ಯಶ್ರೀ , ಶ್ರೀಮತಿ ಯಾಮಿನಿ ತರಬೇತಿಯ ಅನುಭವ ಹಂಚಿಕೊಂಡರು.

Related post

Leave a Reply

Your email address will not be published. Required fields are marked *

error: Content is protected !!