ಫೆ.14 ರಂದು ಅದ್ದೂರಿಯಾಗಿ ಸಂಪನ್ನಗೊಂಡ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕ ಉತ್ಸವ:ದಾಖಲೆಯನ್ನೇ ಮೀರಿಸಿದ ಭಕ್ತಸಮೂಹ: ವಾರ್ಷಿಕ ಉತ್ಸವಕ್ಕೆ ಸಹಕರಿಸಿದ ಭಕ್ತಸಮೂಹಕ್ಕೆ ಧನ್ಯವಾದ ತಿಳಿಸಿದ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿ

ಆರಿಕೋಡಿ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಅದ್ದೂರಿಯಾಗಿ ನಡೆದ ವಾರ್ಷಿಕ ಉತ್ಸವವು ವಿವಿಧ ಸಾಂಸ್ಕೃತಿಕ, ಧಾರ್ಮಿಕ, ನೇಮೋತ್ಸವದ ಮೂಲಕ ಯಶಸ್ವಿಗೊಂಡು ಫೆ.14 ರಂದು ಸಂಪನ್ನಗೊಂಡಿತು.
ಫೆ.10-14 ರವರೆಗೆ ಜಗನ್ಮಾತೆ, ಆದಿಶಕ್ತಿ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿವಿಧ ಪೂಜಾ ಪುನಸ್ಕಾರಗಳು ಭಕ್ತಿಯಿಂದ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿಯವರ ನೇತೃತ್ವದಲ್ಲಿ ಜರುಗಿತು.
ಅದರಲ್ಲೂ ಫೆ.14 ರಂದು ನಡೆದ ಅಗೆಲು ಸೇವೆಯಲ್ಲಿ ದಾಖಲೆಯನ್ನು ಮೀರಿಸಿದೆ ಭಕ್ತಸಾಗರ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರ, ಚಲನಚಿತ್ರ ನಟ , ರಾಜಕೀಯ ವ್ಯಕ್ತಿಗಳು ಹೀಗೆ ಹಲವಾರು ಗಣ್ಯ ವ್ಯಕ್ತಿಗಳು ದೇವಾಲಯಕ್ಕೆ ಭೇಟಿ ನೀಡಿ ಉತ್ಸವದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಸ್ವಯಂ ಸೇವಕರು, ಆಡಳಿತ ಮಂಡಳಿ, ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಕೈಮೀರುವಷ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ಶ್ಲಾಘನೀಯ ಇವರೆಲ್ಲರ ಸಹಾಯಕ್ಕೆ ಧರ್ಮದರ್ಶಿಗಳು ಧನ್ಯವಾದವನ್ನು ತಿಳಿಸಿದ್ದಾರೆ