ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ II ಮೆಟ್ರಿಕ್ ಮೇಳ

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ II . ಫೆ 14 ರಂದು ಶಾಲೆಯಲ್ಲಿ ಮೆಟ್ರಿಕ್ ಮೇಳ ಬಹಳ ಅದ್ದೂರಿಯಿಂದ ನೆರವೇರಿತು.
ಈ ಕಾರ್ಯಕ್ರಮವನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೆ ನಂದ ಉದ್ಘಾಟಿಸಿದರು. ಮಕ್ಕಳು ತಮ್ಮ ಮನೆಯಲ್ಲಿ ತಯಾರಿಸಿದ ಬಗೆ ಬಗೆಯ ತಿನಿಸುಗಳು, ತಾಜಾ ತಂಪು ಪಾನೀಯಗಳು, ತಾಜಾ ಹಣ್ಣುಗಳು, ಫ್ಯಾನ್ಸಿ ಅಂಗಡಿ, ದಿನ ಬಳಕೆಯ ವಸ್ತುಗಳು, ಹೂವಿನ ಅಂಗಡಿ, ಮನೆಯಲ್ಲೇ ಬೆಳೆಸಿದಂತಹ ಸಾವಯವ ಸೊಪ್ಪು-ತರಕಾರಿಗಳು ಎಲ್ಲರನ್ನೂ ಮನಸೂರೆ ಗೊಳಿಸುವಂತಿತ್ತು.
ಮಕ್ಕಳು ಮನೋರಂಜನೆ ಆಟದ ಮೂಲಕ ವ್ಯವಹಾರವನ್ನು ಮಾಡಿದರು. ಮಕ್ಕಳಲ್ಲಿ ವ್ಯವಹಾರದ ಜ್ಞಾನವನ್ನು ವೃದ್ಧಿಸಲು, ಜೀವನದಲ್ಲಿ ಗಣಿತದ ಅವಶ್ಯಕತೆ, ಗ್ರಾಹಕರನ್ನು ವ್ಯವಹಾರದ ಕಡೆ ಸೆಳೆಯುವ ಮಾತಿನ ಕೌಶಲ್ಯ, ಹಣದ ವ್ಯವಹಾರ ಮತ್ತು ಈಗಿನ ಡಿಜಿಟಲ್ ತಂತ್ರಜ್ಞಾನದ ಕ್ಯೂ ಆರ್ ಕೋಡ್ ಮತ್ತು ಸ್ಕ್ಯಾನರ್ ಬಳಸಿ ವ್ಯವಹಾರವನ್ನು ಮಾಡುವಂಥದ್ದು ಇವೆಲ್ಲವನ್ನೂ ಮೆಟ್ರಿಕ್ ಮೇಳದ ಮೂಲಕ ಮಕ್ಕಳು ವಿಶೇಷ ಜ್ಞಾನವನ್ನು ಪಡೆದುಕೊಂಡರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪಾ ಎನ್ , ಶಾಲಾ ಶಿಕ್ಷಕ ವೃಂದ , ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಮತ್ತು ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಮಕ್ಕಳನ್ನು ಉರಿದುಂಬಿಸಲು ವ್ಯವಹಾರದಲ್ಲಿ ಕೈಜೋಡಿಸಿದರು. ಮಕ್ಕಳನ್ನು ವಿಶೇಷವಾಗಿ ಪ್ರೋತ್ಸಾಹಿಸಲು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರು,ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ಪಿ.ಶ್ರೀನಿವಾಸ್ ರಾವ್, ಶಾಲಾ ಗೌರವ ಸಲಹೆಗಾರ ಶ್ರೀಯುತ ರಾಜೇಂದ್ರ ಅಜ್ರಿ, ಶ್ರೀಯುತ ಚಾಮರಾಜ ಇಂದ್ರ, ಶ್ರೀಯುತ ನವೀನ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.