ಬೆಳ್ತಂಗಡಿಯ ವಿಜಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಅಜಿತ್ ಅವಿರೋಧವಾಗಿ ಆಯ್ಕೆ

ಬೆಳ್ತಂಗಡಿಯ “ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ”ಯ ಅಧ್ಯಕ್ಷರಾಗಿ ಅಜಿತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮೊದಲ ಬ್ರಾಂಚಿನ ಮೊದಲ ಮ್ಯಾನೇಜರ್ ಆಗಿ ಸೇರಿಕೊಂಡು ಮುಂದೆ ಬ್ಯಾಂಕಿನ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬ್ಯಾಂಕಿನ ಜೊತೆ ಜೊತೆಯಲ್ಲಿ ತಾನೂ ಬೆಳೆದು 19 ಬ್ರಾಂಚುಗಳ ದೊಡ್ಡ ಸಹಕಾರಿ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (CEO) ಆಗಿ ಅಲ್ಲಿಂದ ಈಗ 2025ರಲ್ಲಿ ನಡೆದ ಚುನಾವಣೆಯಲ್ಲಿ ಸಹಕಾರಿ ಸಂಘದ ನಿರ್ದೇಶಕನಾಗಿ ಅವಿರೋಧವಾಗಿ ಆಯ್ಕೆಯಾಗಿ, ಇಂದು ಮತ್ತೆ ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾರೆ.