ಬೆಳ್ತಂಗಡಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ತಾಲೂಕು ಮಟ್ಟದ ಮಂದಿರ ಅಧಿವೇಶನ:ದೇವಸ್ಥಾನಗಳ ಅಭಿವೃದ್ಧಿಗಾಗಿ ಹಿಂದೂಗಳು ತಮ್ಮ ಕೈ ಜೋಡಿಸಬೇಕು ! – ಶ್ರೀ ಚಂದ್ರ ಮೊಗವೀರ

ಬೆಳ್ತಂಗಡಿ : ಭಾರತಾದ್ಯಂತ ಮಂದಿರ ಮಹಾಸಂಘದ ಕಾರ್ಯಕ್ಕೆ ಹಿಂದೂಗಳ ಅತ್ಯುತ್ತಮ ಬೆಂಬಲದಿಂದ ಸಿಕ್ಕಿದ ಯಶಸನ್ನು ಹೇಳಿದರು. ಕರ್ನಾಟಕ ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗಾಗಿ ಹಿಂದೂಗಳು ತಮ್ಮ ಕೈ ಜೋಡಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ ಇವರು ಕರೆ ನೀಡಿದರು.
ದೇವಸ್ಥಾನಗಳ ಸಂಸ್ಕೃತಿ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜನೆಯಲ್ಲಿ ‘ ತಾಲೂಕು ಮಟ್ಟದ ಮಂದಿರ ಅಧಿವೇಶನ’ವು ಶ್ರೀ ಸುಬ್ರಹ್ಮಣ್ಯ ಸ್ಥಾಣಿಕ ಬ್ರಾಹ್ಮಣ ಸಭಾಭವನ, ಲಾಯಿಲ ಬೆಳ್ತಂಗಡಿಯಲ್ಲಿ ಇಂದು ಶಂಖನಾದದೊಂದಿಗೆ ಪ್ರಾರಂಭವಾಯಿತು.
ಸನ್ಯಾಸಿ ಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಸದಸ್ಯರಾದ ಶ್ರೀ ನಾರಾಯಣ ಫಡ್ಕೆ , ಅನಂತೆಶ್ವರ ದೇವಸ್ಥಾನದ ಅಧ್ಯಕ್ಸರು ಹಾಗು ವಕೀಲರಾದ ಶ್ರೀ ಶ್ರೀನಿವಾಸ ಗೌಡ, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂಜ್ಯ ರಮಾನಂದ ಗೌಡ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಚಂದ್ರ ಮೊಗವೀರ ಇವರು ದೀಪಪ್ರಜ್ವಲನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಡಾ. ಪ್ರದೀಪ್ ನಾವೂರ , ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ನ ಅಧ್ಯಕ್ಷರಾದ ಶ್ರೀ ರವಿಕುಮಾರ್ ಭಟ್ ಪಜೀರಡ್ಕ, ಬ್ರಹ್ಮಲಿಂಗೆಶ್ವರ ದೇವಸ್ಥಾನ ಧರ್ಮ ದರ್ಶಿಗಳಾದ ಶ್ರೀ ಜಯ ಸಾಲಿಯಾನ್ ಇವರು ಉಪಸ್ಥಿತರಿದ್ದರು.
ದೇವಸ್ಥಾನಗಳನ್ನು ಧರ್ಮಶಿಕ್ಷಣದ ಕೇಂದ್ರಗಳಾಗಬೇಕು ! – ಪೂಜ್ಯ. ರಮಾನಂದ ಗೌಡ, ಧರ್ಮಪ್ರಸಾರಕರು , ಸನಾತನ ಸಂಸ್ಥೆ
ಪ್ರಾಚೀನ ಕಾಲದಿಂದ ದೇವಸ್ಥಾನಗಳು ಧರ್ಮ ಶಿಕ್ಷಣ ನೀಡುವ ವಿಶ್ವವಿದ್ಯಾಲಯವಾಗಿ, ನ್ಯಾಯ ನೀಡುವ ನ್ಯಾಯಾಲಯಗಳಾಗಿ, ರೋಗಗಳನ್ನು ಗುಣ ಪಡಿಸುವ ಆಸ್ಪತ್ರೆಗಳಾಗಿ, ಕಲೆ ಶಿಲ್ಪಕಲೆ, ನೃತ್ಯ, ಸಂಗೀತ ಮತ್ತು ಮೂರ್ತಿಕಲೆಗಳನ್ನು ಜೋಪಾಸನೆ ಮಾಡುವ ಕಾರ್ಯವನ್ನು ಮಾಡಿದೆ. ಇಂದು ಮತಾಂತರ, ದೇವತೆಗಳ ಅಪಮಾನ, ಹಿಂದೂಗಳಲ್ಲಿ ಸ್ವಾಭಿಮಾನ ಕೊರತೆ, ಹೀಗೆ ಅನೇಕ ಸಂಕಟಗಳನ್ನು ಎದುರಿಸುತ್ತಿದ್ದೇವೆ. ದೇವಸ್ಥಾನಗಳಲ್ಲಿ ಭಕ್ತರಿಗೆ ಧರ್ಮದ ಬಗ್ಗೆ ಧರ್ಮ ಶಿಕ್ಷಣ ನೀಡುವ ಕಾರ್ಯ ಮಾಡಬೇಕು ಮತ್ತು ಅದರಿಂದ ದೇಶಭಕ್ತಿಯ ಪೀಳಿಗೆ ನಿರ್ಮಾಣವಾಗುತ್ತದೆ.
ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ನಿಯಮಿತವಾಗಿ ಸೇರಬೇಕು ! – ಶ್ರೀ ನಾರಾಯಣ ಫಡ್ಕೆ
ಶ್ರೀ ನಾರಾಯಣ ಫಡ್ಕೆ ಇವರು ಬೆಂಗಳೂರಿನ ರಾಜ್ಯ ಮಂದಿರ ಅಧಿವೇಶನದ ಪ್ರೇರಣೆಯಿಂದ ಇಂದು ತಾಲೂಕು ಮಟ್ಟದ ಅಧಿವೇಶನವನ್ನು ಏರ್ಪಡಿಸಲು ಸಾಧ್ಯವಾಗಿದೆ ಎಂದು ಹೇಳಿದರು. ಇತ್ತೀಚಿಗೆ ದೇವಸ್ಥಾನಗಳಲ್ಲಿ ದಿನನಿತ್ಯ ಸೇವೆಗಳಿಗೆ ಹಿಂದೂಗಳು ಸೇರುವ ಪ್ರಮಾಣವವು ತುಂಬಾ ಅಲ್ಪವಾಗಿದೆ. ದೇವಸ್ಥಾನಗಳಲ್ಲಿ ಸಾಮೂಹಿಕ ಪೂಜೆ, ಆರತಿ ಮುಂತಾದವುಗಳನ್ನು ಹಮ್ಮಿಕೊಳ್ಳಬೇಕು ಮತ್ತು ಹಿಂದೂಗಳು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ನಮ್ಮ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಯ ಕಾರ್ಯವನ್ನು ಮಾಡಬೇಕೆಂದು ಶ್ರೀ ನಾರಾಯಣ ಫಡ್ಕೆ ಇವರು ಉಪಸ್ಥಿತ ದೇವಸ್ಥಾನ ವಿಶ್ವಸ್ಥರಿಗೆ ಕರೆ ನೀಡಿದರು.
ದೇವಸ್ಥಾನದ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡುವುದು ದೇವಸ್ಥಾನ ಆಡಳಿತದ ಕರ್ತವ್ಯವಾಗಿದೆ. ದೇವಸ್ಥಾನದ ಸ್ವಚ್ಛತೆಯ ಕಾರ್ಯದಲ್ಲಿ ಸುತ್ತಮುತ್ತಲಿನ ಭಕ್ತಾದಿಗಳು ಸೇರಬೇಕು ಎಂದು ಅನಂತೆಶ್ವರ ದೇವಸ್ಥಾನದ ಅಧ್ಯಕ್ಸರು ಹಾಗು ವಕೀಲರಾದ ಶ್ರೀ ಶ್ರೀನಿವಾಸ ಗೌಡ ಇವರು ಕರೆ ನೀಡಿದರು.