ಹಿಂದೂ ದೇವತೆಗಳ ಅಪಹಾಸ್ಯ ಮಾಡಿರುವ ‘ಥ್ಯಾಂಕ್ ಗಾಡ್’ ಸಿನಿಮಾವನ್ನು ನಿಷೇಧಿಸಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ
ಬೆಳ್ತಂಗಡಿ:.ನಟ ಅಜಯ ದೇವಗನ ಅಭಿನಯದ ‘ಥ್ಯಾಂಕ್ ಗಾಡ್’ ಚಲನಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಈ ಚಲನಚಿತ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಚಿತ್ರಗುಪ್ತ ಮತ್ತು ಯಮ ದೇವರ ಅಪಹಾಸ್ಯವನ್ನು ಮಾಡಲಾಗಿದ್ದು, ಇದನ್ನು ಎಂದಿಗೂ ಸಹಿಸುವುದಿಲ್ಲ. ಈ ಟ್ರೇಲರ್ ಬಿಡುಗಡೆ ಆಗುವವರೆಗೂ ಸೆನ್ಸಾರ್ ಮಂಡಳಿ ನಿದ್ರೆ ಮಾಡುತ್ತಿತ್ತೇ ? ಸೆನ್ಸಾರ್ ಮಂಡಳಿ ಈ ಚಲನಚಿತ್ರಕ್ಕೆ ಸರ್ಟಿಫಿಕೇಟ್ ನೀಡಬಾರದು, ಇಲ್ಲದಿದ್ದರೆ ನಾವು ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ ರಾಜ್ಯ ಹಾಗೂ ಕೇಂದ್ರ ಗೃಹಸಚಿವಾಲಯವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಈ ಚಲನಚಿತ್ರದ ಮೇಲೆ ನಿಷೇಧ ವಹೇರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.
ಈ ಚಲನಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಪರಿಕಲ್ಪನೆಗಳು ಮತ್ತು ದೇವತೆಗಳನ್ನು ಅಪಹಾಸ್ಯ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲಾಗಿದೆ. ಈ ಚಲನಚಿತ್ರದ ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಮಾತ್ರ ಬಹಿರಂಗಪಡಿಸಲಾಗಿದೆ. ಪ್ರತ್ಯಕ್ಷದಲ್ಲಿ ಪೂರ್ಣ ಚಲನಚಿತ್ರದಲ್ಲಿ ಇನ್ನಷ್ಟು ಆಕ್ಷೇಪಾರ್ಹ ಸಂಭಾಷಣೆಗಳನ್ನು ಹೊಂದಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.ಹಿಂದೂ ಧರ್ಮದಲ್ಲಿನ ಒಂದು ಉದಾತ್ತ ಪರಿಕಲ್ಪನೆಯನ್ನು ‘ಕಾಮೆಡಿ’ದ ಹೆಸರಿನಲ್ಲಿ ತಪ್ಪಾಗಿ ಮತ್ತು ಆಕ್ಷೇಪಾರ್ಹವಾಗಿ ತೋರಿಸಿ ಅಪಹಾಸ್ಯ ಮಾಡಲಾಗಿದೆ.
ಈ ಹಿಂದೆಯೂ, ‘ಪಿಕೆ’, ‘ಓ ಮೈ ಗಾಡ್’, ‘ಸಿಂಗಮ್ ರಿಟರ್ನ್ಸ್’, ’ತಾಂಡವ್’ ನಂತಹ ಅನೇಕ ಚಲನಚಿತ್ರಗಳು ಮತ್ತು ವೆಬ್ ಸಿರೀಸ್ ಗಳು ಹಿಂದೂ ಧರ್ಮ, ದೇವತೆಗಳು, ಸಾಧುಸಂತರನ್ನು ಗುರಿಯಾಗಿಸಿಕೊಂಡಿವೆ. ಹಿಂದೂಗಳ ಆಚಾರ-ವಿಚಾರಗಳ ಬಗ್ಗೆ ಹಾಸ್ಯ ಚಟಾಕಿ ಹಾರಿಸಿ ಅವರ ಬಗ್ಗೆ ದ್ವೇಷ ಹುಟ್ಟಿಸುತ್ತಾರೆ. ಇದನ್ನೆಲ್ಲ ತಡೆಯಲು ಕೇಂದ್ರ ಸರಕಾರ ಕೂಡಲೇ ಕಠಿಣ ಕಾನೂನು ರೂಪಿಸಬೇಕಿದೆ. ಅಲ್ಲದೇ ಸೆನ್ಸಾರ್ ಮಂಡಳಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಧಾರ್ಮಿಕ ಪ್ರತಿನಿಧಿಗಳು ಇರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.