ಜೇನು ಕೃಷಿ ತರಬೇತಿ ಶಿ ಸ್ತು, ಬದ್ಧತೆ ಜೇನು ಕೃಷಿಯಲ್ಲಿ ಇರಲಿ:ಜಗದೀಶ್ ಪ್ರಸಾದ್
ಉಜಿರೆ : ಇತ್ತೀಚಿನ ದಿನಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಯುವಕರು ಜೇನುಕೃಷಿ ತರಬೇತಿಯಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಜೇನು ಹೇಗಿದೆ ಎಂದು ನೋಡಬೇಕಾದರೆ ಅದರ ಸಿಹಿಯನ್ನು ಸವಿಯಬೇಕು, ಬಿಸಿ ಅರ್ಥವಾಗಬೇಕಾದರೆ ಬೆಂಕಿ ಮುಟ್ಟು ಬೇಕು ಹಾಗೇಯೇ ರುಡ್ ಸೆಟ್ ಸಂಸ್ಥೆಗೆ ಬಂದರೆ ಮಾತ್ರ ಇಲ್ಲಿನ ವಿಶೇಷತೆ ತಿಳಿಯಲು ಸಾಧ್ಯ. ಒಂದು ದೇಶ ಸುಭಿಕ್ಷೆ ಆಗಬೇಕಾದರೆ ಅಲ್ಲಿನ ಜನ ವಿದ್ಯಾವಂತರಾದರೆ ಸಾಲದು ಜನ ಪ್ರಜ್ಞಾವಂತರಗಾಬೇಕು. ನಾವು ಏನು ಕಲಿಯುತ್ತೇವೆ ಅದರಲ್ಲಿ ಶಿಸ್ತು, ಬದ್ಧತೆ ನಿರ್ಧರಿಸು ಸಾಮರ್ಥ್ಯ ಇದ್ದರೆ ಜೇನು ಕೃಷಿ ಮಾಡಲು ಸಾದ್ಯ. ಜೊತೆಗೆ ಆಧುನಿಕತೆಯ ಹೊಸ ಆವಿಷ್ಕಾರಗಳನ್ನು ಆಳವಡಿಸಿಕೊಂಡು ಸುಧಾರಣೆಗಳನ್ನು ಮಾಡಿಕೊಂಡು ಮುಂದರೆಯಬೇಕು.
ಜೇನ ಅನ್ನು ಋರ್ತುಮಾನ ಮತ್ತು ಪ್ರಾದೇಶಿಕತೆಗೆ ಹಾಗೂ ಪರಿಸರದ ಬೆಳೆಗಳು ಇದೆ ಅವುಗಳಿಗೆ ಅನುಗುಣವಾಗಿ ಜೇನು ಕೃಷಿ ಮಾಡಬೇಕು. ಜೇನು ಬುದ್ದಿವಂತಹ ಹುಳು ಅದರ ಜೊತೆಗೆ ನಾವು ಮಾತನಾಡಲು ಕಲಿಯಬೇಕು. ಅಲ್ಲದೇ ಜೇನಿನ ಉಪ ಉತ್ಪನ್ನಗಳನ್ನು ತಯಾರಿಸುವ ಯೋಜನೆಗಳನ್ನು ಸಹ ಯೋಚನೆ ಮಾಡಿಕೊಳ್ಳಿ. ಜೇನು ಕೃಷಿ ಮಾಡುವಾಗ ಅತೀ ಕಡಿಮೆ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುವ ಸ್ಥಳದಲ್ಲಿ ಮಾಡಿ. ಮಾರುಕಟ್ಟೆಯಲ್ಲಿ ಇರುವ ಶುದ್ಧ ಜೇನು ತುಪ್ಪ ಮತ್ತು ನಕಲಿ ಜೇನು ತುಪ್ಪದ ವ್ಯತ್ಯಾಸವನ್ನು ಸಹ ತಿಳಿದುಕೊಳ್ಳಬೇಕು. ಜೇನಿನ ಪ್ರತಿದಿನದ ದಿನಚರಿಯನ್ನು ಅಧ್ಯಯನ ಮಾಡಿ ಅದರ ಕಾರ್ಯನಿರ್ವಾಣೆಯ ವಿಧಾನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಪಡೆಯಬಹುದು ಎಂದು ಉಜಿರೆಯ ಪ್ರಗತಿ ಪರ ಕೃಷಿಕರಾದ ಶ್ರೀ ಜಗದೀಶ್ ಪ್ರಸಾದ್ ಅಭಿಪ್ರಾಯ ಪಟ್ಟರು.
ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 10 ದಿನಗಳ ಕಾಲ ನಡೆದೆ “ಜೇನು ಕೃಷಿʼʼ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ತಮ್ಮ ಅನುಭವದ ಹಂಚಿಕೊಂಡು ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.
ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ *ಹಿರಿಯ ಉಪನ್ಯಾಸಕರಾದ *ಅಬ್ರಹಾಂ ಜೇಮ್ಸ್* ಕಾರ್ಯಕ್ರಮ ನಿರೂಪಿಸಿದರು *ಉಪನ್ಯಾಸಕರಾದ *ಕೆ.ಕರುಣಾಕರ ಜೈನ್* ವಂದಿಸಿದರು. ಶ್ರೀ ದಿನೇಶ್ ವಿಟ್ಲ ಪ್ರಾರ್ಥನೆ ಮಾಡಿದರು. ಶಿರಾರ್ಥೀಗಳಾದ ಶ್ರಿ ಸುದೀರ್ ಸಾಲ್ಯಾನ್, ಶ್ರೀ ರೋಹಿತ್, ಶ್ರೀ ಖಲೀಲ್, ಶ್ರೀ ಸುಬ್ರಮಣ್ಯ ತನ್ನ ತರಬೇತಿಯ ಅನುಭವ ಹಂಚಿಕೊಂಡರು.