ಉಪ್ಪಿನಂಗಡಿ: ಆನ್ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿದವರಿಗೆ ಸಿಕ್ತು ಹಳಸಿದ ಆಹಾರ ಪಾರ್ಸೆಲ್:
ಉಪ್ಪಿನಂಗಡಿ: ಆನ್ಲೈನ್ ಮೂಲಕ ಮೊಬೈಲ್ ಆರ್ಡರ್ ಮಾಡಿದವರಿಗೆ ಹಳಸಿ ಆಹಾರ ಪಾರ್ಸೆಲ್ ಬಂದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ದೇವಸ್ಥಾನ ಒಂದರಲ್ಲಿ ಸೆಕ್ಯೂರಿಟಿ ಗಾರ್ಡಾಗಿ ಕಾರ್ಯ ನಿರ್ವಹಿಸುವ ಭವಾನಿ ಶಂಕರ್ ಅವರು ಇತ್ತೀಚಿಗೆ ತಮ್ಮ ಕುಟುಂಬ ಸದಸ್ಯರಿಗೆ ಮೂರು ವಿವೋ ಕಂಪನಿಯ ಮೊಬೈಲ್ ಫೋನ್ ಗಳನ್ನು ಖರೀದಿಸಿದ್ದರು. ವಿವೋದ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕರೆ ಮಾಡಿ ಮೂರು ಮೊಬೈಲ್ ಫೋನ್ ಕರೆಯಿಸಿದಕ್ಕೆ ತಮ್ಮ ಕಂಪನಿಯ ಅದೃಷ್ಟದ ಗ್ರಾಹಕ ಎಂದು ಆಯ್ಕೆಯಾಗಿದ್ದೀರಿ ಹೀಗಾಗಿ 1785 ರೂಪಾಯಿಗೆ 8,800 ಮೌಲ್ಯದ ಮೊಬೈಲ್ ಕಳುಹಿಸಲಾಗುವುದು ಹಣ ತೆತ್ತು ಅಂಚೆ ಕಛೇರಿಯಿಂದ ಪಡೆದುಕೊಳ್ಳಿ ಎಂದು ತಿಳಿಸಿದರು. ತಾನು ಫೋನ್ ಖರೀದಿಸಿದ ಕಾರಣ ಅದೃಷ್ಟ ಒಲಿದಿರುವುದು ನಿಜವಾಗಿರಬಹುದು ಎಂದು ನಂಬಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್ ಅನ್ನು ಹಣ ತೆತ್ತು ಪಡೆದುಕೊಂಡದಲ್ಲದೆ ಸಂದೇಹ ಬಗೆಹರಿಸಲು ಅಲ್ಲಿಯೇ ಪಾರ್ಸಲ್ ಅನ್ನು ತೆರೆದು ನೋಡಿದಾಗ ಕೆಟ್ಟು ಹೋದ ತಿಂಡಿಯ ಪಟ್ಟಣವನ್ನ ಪ್ಯಾಕ್ ಮಾಡಿ ಕಳಿಸಿರುವುದು ಕಂಡು ಬಂದಿದೆ . ತಾನು ಫೋನ್ ಖರೀದಿಸಿರುವುದು ಈ ವಂಚಕರ ತಂಡಕ್ಕೆ ತಿಳಿದಿರುವ ಬಗೆ ಹೇಗೆ ಎನ್ನುವ ಪ್ರಶ್ನೆಯೊಂದಿಗೆ ತಾನು ಮೋಸ ಹೋದಂತೆ ಇನ್ಯಾರು ಮೋಸ ಹೋಗಬಾರದೆಂದು ಪ್ರಕರಣವನ್ನು ಅವರು ಮಾಧ್ಯಮದ ಗಮನಕ್ಕೆ ತಂದಿದ್ದಾರೆ.