• October 14, 2024

ಖಾಯಿಲೆಯಿಂದ ಬಳಲುತ್ತಿರುವ ಕಣಿಯೂರು ಗ್ರಾಮದ ಪೈರೊಟ್ಟು ನಿವಾಸಿ ರೇವತಿಯವರಿಗೆ ಬೇಕಾಗಿದೆ ನೆರವಿನ ಹಸ್ತ

 ಖಾಯಿಲೆಯಿಂದ ಬಳಲುತ್ತಿರುವ ಕಣಿಯೂರು ಗ್ರಾಮದ ಪೈರೊಟ್ಟು ನಿವಾಸಿ ರೇವತಿಯವರಿಗೆ ಬೇಕಾಗಿದೆ ನೆರವಿನ ಹಸ್ತ

 

ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪೈರೊಟ್ಟು ಸುಂದರ ನಾಯ್ಕರವರಪತ್ನಿ 40 ವರ್ಷ ಪ್ರಾಯದ ರೇವತಿಯವರು ಮಾರಣಾಂತಿಕ ರೋಗವಾದ ಗಂಟಲಿನ ಕ್ಯಾನ್ಸರ್ ನಿಂದ ಕಳೆದ 8 ತಿಂಗಳಿನಿಂದ ಬಳಲುತ್ತಿದ್ದಾರೆ.

ಇವರು ಮಂಗಳೂರಿನ ಸ್ಪೆಷಲಿಸ್ಟ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಇದುವರೆಗೆ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಹಣವನ್ನು ಚಿಕಿತ್ಸೆಗಾಗಿ ವ್ಯಯಮಾಡಿದ್ದಾರೆ.

ಇನ್ನು ಮುಂದಿನ ಚಿಕಿತ್ಸೆಗೆ ಅಂದಾಜು ಸುಮಾರು 10 ಲಕ್ಷ ಬೇಕಾಗಬಹುದು ವೈದ್ಯರು ತಿಳಿಸಿದ್ದಾರೆ. ಆದರೆ ಇವರ ಕುಟುಂಬವು ತೀರಾ ಬಡತನದಿಂದ ಕೂಡಿದ್ದು, 2 ಹೆಣ್ಣು ಮಕ್ಕಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಮುಂದಿನ ಚಿಕಿತ್ಸೆಯನ್ನು  ನಡೆಸಲುಸಾಧ್ಯವಿಲ್ಲವೆಂದು ಕೈಚೆಲ್ಲಿ ಕೂತಿದ್ದಾರೆ. ಸಹೃದಯಿ ಬಂಧುಗಳು ಇವರ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ. ಕೈಲಾಗುವಷ್ಟು ಸಹಕಾರ ಮಾಡಿ ಈ ಬಡ ಕುಟುಂಬಕ್ಕೆ ನೆರವಾಗಬೇಕಾಗಿದೆ.

ಬ್ಯಾಂಕ್ ವಿವರ
ಹೆಸರು : ರೇವತಿ

ಮೊಬೈಲ್ ನಂಬರ್: 9901807008

ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್, ಪದ್ಮುಂಜ

ಬ್ಯಾಂಕ್ ಖಾತೆ ಸಂಖ್ಯೆ: 1599119009218

ಐಎಫ್ ಎಸ್ ಸಿ ಕೋಡ್: CNRB0001599

Related post

Leave a Reply

Your email address will not be published. Required fields are marked *

error: Content is protected !!