• November 22, 2024

ಉಜ್ವಲ್ ಗ್ಯಾಸ್ ವಿತರಣೆ ಹಾಗೂ ಕೆ ವೈ ಸಿ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಾರ್ಯಕ್ರಮ

 ಉಜ್ವಲ್ ಗ್ಯಾಸ್ ವಿತರಣೆ ಹಾಗೂ ಕೆ ವೈ ಸಿ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಾರ್ಯಕ್ರಮ

 

ಬಂದಾರು : ಗ್ರಾಮ ಪಂಚಾಯತ್ ಬಂದಾರು ಹಾಗೂ ಅಮೂಲ್ಯ ಎಚ್.ಪಿ ಗ್ಯಾಸ್ ಎಜೆನ್ಸಿ ಉಪ್ಪಿನಂಗಡಿ ಇದರ ಸಹಯೋಗದಲ್ಲಿ ಉಜ್ವಲ್ ಗ್ಯಾಸ್ ವಿತರಣೆ ಹಾಗೂ ಕೆ ವೈ ಸಿ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಮೈರೋಳ್ತಡ್ಕ ಶಾಲಾ ಮುಂಭಾಗ ಯಶಸ್ವಿ ಕಾಂಪ್ಲೆಕ್ಸ್ ಬಳಿ ಕಾರ್ಯಕ್ರಮ ನಡೆಯಿತು.

ಸನ್ಮಾನ್ಯ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಬಂದಾರು ಮೊಗ್ರು ಗ್ರಾಮದ 19 ಜನ ಫಲನುಭವಿಗಳಿಗೆ ಉಜ್ವಲ್ ಗ್ಯಾಸ್ ವಿತರಣೆ ಮಾಡಿದರು.ಕೇಂದ್ರ ಸರ್ಕಾರದ ಸಾಧನೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಯವರು ಮಾಡಿರುವ ಸಾಧನೆ ಹಾಗೂ ಬಂದಾರು,ಮೊಗ್ರು ಗ್ರಾಮದಲ್ಲಿ ಆಗಿರುವಂತಹ ಅಭಿವೃದ್ಧಿ ಕಾಮಗಾರಿಯನ್ನು ಬಗ್ಗೆ ಉಲ್ಲೇಖ ಮಾಡಿದ್ರು ಹಾಗೂ ಪೆರ್ಲ -ಬೈಪಾಡಿ ಯ ಮೈಪಾಲ ಎಂಬಲ್ಲಿ ಬಂದಾರು – ಕೊಕ್ಕಡದ ಗ್ರಾಮದ ಸಂಪರ್ಕ ಸೇತುವೆ ಕಾಮಗಾರಿ ಆರಂಭಗೊಂಡಿದೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ನೀಡಿದರು.

ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಕೀಲ ಶ್ರೀ ಉದಯ್ ಕುಮಾರ್ ಬಿ.ಕೆ ಯವರು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಯೋಜನೆಗಳ ಮಾಹಿತಿ ಹಾಗೂ ಮಹಿಳೆಯರಿಗೆ ಕಾನೂನು ಮಾಹಿತಿಯನ್ನು ಸವಿಸ್ತಾರವಾಗಿ ಪ್ರಾಸ್ತವಿಕವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ದಿನೇಶ್ ಗೌಡ ಖಂಡಿಗ ಇವರು ಇಂತಹ ಅನೇಕ ಸೌಲಭ್ಯಗಳನ್ನು ಗ್ರಾಮಸ್ತರು ಪಡೆದುಕೊಳ್ಳಬೇಕು. ಹಾಗೂ ಶಾಸಕ ಹರೀಶ್ ಪೂಂಜಾ ರವರು ಬಂದಾರು ಪಂಚಾಯತ್ ವ್ಯಾಪ್ತಿಯ ಹಲವಾರು ಕಾಮಗಾರಿಗೆ ಶ್ರಮಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿ ಇನ್ನೂ ಮುಂದೆಯೂ ಇನ್ನಷ್ಟು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಅಮೂಲ್ಯ ಎಚ್. ಪಿ ಗ್ಯಾಸ್ ಮಾಲಿಕರಾದ ಶ್ರೀ ಚಂದಪ್ಪ ಮೂಲ್ಯ, ಪದ್ಮುಂಜ ಸಿ. ಎ ಬ್ಯಾಂಕ್ ಅಧ್ಯಕ್ಷರಾದ ಶ್ರೀ ರಕ್ಷಿತ್ ಪಣೆಕ್ಕರ,ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಬರಮೇಲು,ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯರಾದ ಶ್ರೀಮತಿ ಪರಮೇಶ್ವರಿ ಕೆ ಗೌಡ,ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಗಂಗಾಧರ ಪೂಜಾರಿ ಮುಗೇರಡ್ಕ,ಸದಸ್ಯರಾದ ಶ್ರೀಮತಿ ಮಂಜುಶ್ರೀ ಊoತನಾಜೆ,ಶ್ರೀಮತಿ ಸುಚಿತ್ರ ಮುರ್ತಾಜೆ, ಚೇತನ್ ಪಾಲ್ತಿಮಾರ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ ಇವರು ಉಪಸ್ಥಿತರಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಎಚ್. ಪಿ ಗ್ಯಾಸ್ ಗ್ರಾಹಕರು ಕೆ.ವೈ. ಸಿ ಆಧಾರ್ ಬಯೋಮೆಟ್ರಿಕ್ ಸೌಲಭ್ಯ ಪಡೆದುಕೊಂಡರು.

Related post

Leave a Reply

Your email address will not be published. Required fields are marked *

error: Content is protected !!