ಉಜಿರೆ ಶ್ರೀ ಧ.ಮಂ.ಆ.ಮಾ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ
ಉಜಿರೆ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ( ರಾಜ್ಯ ಪಠ್ಯಕ್ರಮ) ಇದರ ವಾರ್ಷಿಕೋತ್ಸವವು ಡಿ.20 ರಂದು ನಡೆಯಿತು.
ಕಾರ್ಯಕ್ರಮವನ್ನು ಎಸ್.ಡಿ.ಯಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್ ಅವರು ಉದ್ಘಾಟಿಸಿದರು ಹಾಗೆಯೇ ಶಾಲಾ ವಾರ್ಷಿಕ ಸಂಚಿಕೆಗಳಾದ ‘ಛಾತ್ರವಾಣಿ’ ಮತ್ತು ‘ಛಾತ್ರದ್ಯುತಿ’ ಗಳನ್ನು ಬಿಡುಗಡೆಗೊಳಿಸಿ , 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್ .ಎಲ್. ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕು. ಅಮೃತ .ಕೆ . ಇವರನ್ನು ಸನ್ಮಾನಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಧೀಶರಾದ ಶ್ರೀ ದೇವರಾಜು ಎಚ್.ಎಂ ಮತ್ತು ಎಸ್. ಡಿ.ಯಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ.ಬಿ.ಸೋಮಶೇಖರ ಶೆಟ್ಟಿ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು