• July 27, 2024

ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ಕ್ರೈಸ್ತ ಪತ್ರಕರ್ತರಿಗೆ ಸಹಮಿಲನ ಮತ್ತು ಸನ್ಮಾನ ಕಾರ್ಯಕ್ರಮ:

 ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ಕ್ರೈಸ್ತ ಪತ್ರಕರ್ತರಿಗೆ ಸಹಮಿಲನ ಮತ್ತು ಸನ್ಮಾನ ಕಾರ್ಯಕ್ರಮ:

ಮಂಗಳೂರು : ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ
ಕ್ರೈಸ್ತ ಪತ್ರಕರ್ತರಿಗೆ ಸಹಮಿಲನ ಮತ್ತು ಸನ್ಮಾನ ಕಾರ್ಯಕ್ರಮವು ಜೆಪ್ಪು ಸಂತ ಅಂತೋನಿ ಆಶ್ರಮದ
ಸಂಭ್ರಮ್ ಸಭಾಂಗಣ ದಲ್ಲಿ ಅ. 22ರಂದು ನಡೆಯಿತು.


ಕಾರ್ಯಾಕ್ರಮವನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವ. ಡಾ. ಬಿಷಪ್ ಪೀಟರ್ ಪಾವ್ಲ್ ಸಲ್ದಾನಾ ನೆರವೇರಿಸಿದರು. ಕಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ
ಆಲ್ವಿನ್ ಡಿಸೋಜ ಪಾನೀ‌ರ್ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಕಥೋಲಿಕ್ ಸಭಾ ಕೇಂದ್ರೀಯ ಆದ್ಯಾತ್ಮಿಕ ನಿರ್ದೇಶಕ
ವ. ಫಾ. ಜೆ.ಬಿ.ಸಲ್ದಾನ್ಹಾ, ಸಂತ ಆಂತೊನಿ ಆಶ್ರಮದ ನಿರ್ದೇಶಕ
ವ. ಫಾ. ಜೆ.ಬಿ.ಕ್ರಾಸ್ತಾ, ದಾಯ್ದಿವರ್ಲ್ಡ್ ಮೀಡಿಯಾ ಪ್ರೈ. ಲಿ.ನ
ವಾಲ್ಟರ್ ನಂದಳಿಕೆ, ಕರ್ನಾಟಕ ಪತ್ರಕರ್ತ ಸಂಘಾದ ಅಧ್ಯಕ್ಷ – ಮಹಾರಾಷ್ಟ್ರ
ರೋನ್ಸ್ ಬಂಟ್ವಾಳ್, ಕರಾವಳಿ ಸುದ್ದಿ ವಾರ್ತಾ ಪತ್ರಿಕೆಯ ಸಂಪಾದಕ
ರೋಷನ್ ಬೊನಿಫಾಸ್ ಮಾರ್ಟಿಸ್, ಕಥೋಲಿಕ್ ಸಭಾ ಕೇಂದ್ರೀಯ ಕಾರ್ಯದರ್ಶಿ
ವಿಲ್ಮಾ ಮೊಂತೇರೊ, ಪತ್ರಕರ್ತರ ಸಹಮಿಲನ ಮತ್ತು ಸನ್ಮಾನ ಸಮಿತಿಯ ಸಂಚಾಲಕ
ಪಾವ್ಲ್ ರೊಲ್ಪಿ ಡಿಕೋಸ್ತ, ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ನ
ಆದ್ಯಾತ್ಮಿಕ ನಿರ್ದೇಶಕರು, ಅಧ್ಯಕ್ಷರು, ಕಾರ್ಯದರ್ಶಿ, ಸಂಚಾಲಕರು , ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಮಂಗಳೂರು ಧರ್ಮ ಪ್ರಾಂತ್ಯ ಕ್ಯಾಥೋಲಿಕ್ ಸಭಾ ದಿಂದ 60ಜನ ಕ್ಯಾಥೋಲಿಕ್ ಪತ್ರಕರ್ತರಿಗೆ ಸನ್ಮಾನ ಮಂಗಳೂರು ಧರ್ಮ ಪ್ರಾಂತ್ಯದಲ್ಲಿ ಕಾರ್ಯಾಚರಿಸುವ ಕೊಂಕಣಿ ಪತ್ರಿಕೆ, ಕನ್ನಡ ದಿನ ಪತ್ರಿಕೆ, ವಾರ ಪತ್ರಿಕೆ, ಇಂಗ್ಲಿಷ್ ಪತ್ರಿಕೆ, ಟಿ. ವಿ. ಮಾಧ್ಯಮ, ದೃಶ್ಯ ಮಾಧ್ಯಮದ ಪ್ರಕಾಶಕರಿಗೆ, ಸಂಪಾದಕರಿಗೆ, ಪತ್ರಕರ್ತರಿಗೆ ಸೇರಿದಂತೆ ಬೆಳ್ತಂಗಡಿ ಸುದ್ದಿ ಬಿಡುಗಡೆ ವಾರ ಪತ್ರಿಕೆಯ ವರದಿಗಾರ ಹೆರಾಲ್ಡ್ ಪಿಂಟೊ ಕಳೆದ 24ವರ್ಷ ಸಲ್ಲಿಸಿದ ವಿಶಿಷ್ಟ ಸೇವೆಗೆ, ಬೆಳ್ತಂಗಡಿ ತಾಲೂಕಿನ ಎಲ್ಲಾ ಚರ್ಚ್ ಗಳ ವರದಿ, ವಿವಿಧ ಕಾರ್ಯಕ್ರಮಗಳ ವಿಶೇಷ ಲೇಖನದೊಂದಿಗೆ ಪುರವಣಿಗಳನ್ನು ಆಯೋಜಿಸಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟ ಗೊಂಡಿದೆ. ತಾಲೂಕಿನ ವಿವಿಧ ದೇವಸ್ಥಾನಗಳ ಜಾತ್ರೆ, ಬ್ರಮ್ಮ ಕಲಶಕ್ಕೂ ವಿಶೇಷ ಲೇಖನ ಪುರವಣಿ ಸಂಯೋಜನೆಗೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಧನೆ ಗಳನ್ನು ಗುರುತಿಸಿ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವ. ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಗೌವಿಸಿ ಸನ್ಮಾನಿಸಿದರು. ಈ ಸಂದರ್ಭ ಪತ್ನಿ ಜ್ಯೋತಿ ಪಿಂಟೊ, ಪುತ್ರಿ ಹೇಝಲ್ ಜಿಶಾ ಪಿಂಟೊ, ಉಜಿರೆಯ ಉದ್ಯಮಿ ಪ್ರಗತಿಪರ ಕೃಷಿಕ ಅರುಣ್ ರೆಬೆಲ್ಲೊ, ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್, ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಪ್ರಕಾಶ್ ಡಿಸೋಜಾ, ವೆಲಂಕಣಿ ಕೇಟರಿಂಗ್ ಮಾಲಕ ಲ್ಯಾನ್ಸಿ ಮೋನಿಸ್, ಉಜಿರೆ ಎಸ್ ಎ ಆಯಿಲ್ ಮಿಲ್ ಮಾಲಕ ಅರುಣ್ ಸಂದೇಶ್ ಡಿಸೋಜಾ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!