• December 6, 2024

ಮುಗೇರಡ್ಕ – ದಂಬೆತ್ತಿಮಾರು ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ

 ಮುಗೇರಡ್ಕ – ದಂಬೆತ್ತಿಮಾರು  ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ

 

ಮೊಗ್ರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮೊಗ್ರು ಗ್ರಾಮದ 1ನೇ ವಾರ್ಡ್ ಬೂತ್ ಸಂಖ್ಯೆ 234 ರ ಮುಗೇರಡ್ಕ – ದಂಬೆತ್ತಿಮಾರು ರಸ್ತೆ ಕಾಂಕ್ರಿಟೀಕರಣ ರಸ್ತೆಯನ್ನು ನಿವೃತ್ತ ಪೊಲೀಸ್ ಅಧಿಕಾರಿ ಬಾಬು ಗೌಡ ಮುಗೆರಡ್ಕ ಇವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,ಉಪಾಧ್ಯಕ್ಷೆ ಪುಷ್ಪಾವತಿ ಬರಮೇಲು, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ ಗೌಡ,ಮಾಜಿ ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ ಮುಗೆರಡ್ಕ, ಸದಸ್ಯರಾದ ಬಾಲಕೃಷ್ಣ ಗೌಡ ಮುಗೆರಡ್ಕ, ಪದ್ಮುಂಜ ಸಿ.ಎ.ಬ್ಯಾಂಕ್ ನಿರ್ದೇಶಕರಾದ ಶ್ರೀಮತಿ ಶೀಲಾವತಿ,ಹಾಗೂ ಆ
ಭಾಗದ ಊರ ನಾಗರಿಕರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!