• December 8, 2024

ಹುಣ್ಸೆಕಟ್ಟೆ: 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ , ಸಾಂಸ್ಕೃತಿಕ ಕಾರ್ಯಕ್ರಮ

 ಹುಣ್ಸೆಕಟ್ಟೆ: 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ , ಸಾಂಸ್ಕೃತಿಕ ಕಾರ್ಯಕ್ರಮ

 

ಹುಣ್ಸೆಕಟ್ಟೆ: ಶ್ರೀ ರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ಇದರ ವತಿಯಿಂದ ವರ್ಷಂಪ್ರತಿ ಜರುಗುವ 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಆ.31 ರಂದು ಶ್ರೀ ಕೃಷ್ಣ ಕುಮಾರ್ ಐತಾಳ್ , ಪಂಜಿರ್ಪು ಇವರ ಪೌರೋಹಿತ್ವದಲ್ಲಿ ಜರುಗಿತು.

ಆ.31 ರಂದು ಬೆಳಗ್ಗೆ 8 ಗಂಟೆಗೆ ಗಣಹೋಮ, ಮೂರ್ತಿ ಪ್ರತಿಷ್ಠೆ ನಡೆದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಿತು.

ಸಂಜೆ 6 ರಿಂದ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಹಾಗೂ ಊರವರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 8.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ 9 ರಿಂದ ಶ್ರೀ ರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ಅರ್ಪಿಸುವ ತೆಲಿಕೆ- ನಲಿಕೆ ಬಾಯಿ ನಿಲಿಕೆ ಕಾಮಿಡಿ ಕಾರ್ಯಕ್ರಮ ಹಾಗೂ ಊರವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

Related post

Leave a Reply

Your email address will not be published. Required fields are marked *

error: Content is protected !!