• June 15, 2024

ಮತ್ತೆ ಮತ್ತೆ ಕಾರ್ಣಿಕ ಮೆರೆಯುತ್ತಿರುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ: ಮಕ್ಕಳ ಭಾಗ್ಯ ಕರುಣಿಸಿ, ದಂಪತಿಗಳ ಬಾಳಲ್ಲಿ ಬೆಳಕಾದ ಮಹಾತಾಯಿ

 ಮತ್ತೆ ಮತ್ತೆ ಕಾರ್ಣಿಕ ಮೆರೆಯುತ್ತಿರುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ: ಮಕ್ಕಳ ಭಾಗ್ಯ ಕರುಣಿಸಿ, ದಂಪತಿಗಳ ಬಾಳಲ್ಲಿ ಬೆಳಕಾದ ಮಹಾತಾಯಿ

ಕಡಬ: ಕಡಬ ತಾಲೂಕಿನ ಸವಣೂರು ಪರಿಸರದ ಪ್ರಕಾಶ್ ಮತ್ತು ಪ್ರಮೀಳಾ ಎಂಬುವವರು ಸುಮಾರು 11 ವರ್ಷಗಳ ಹಿಂದೆ ಮದುವೆಯಾಗಿದ್ದು,. ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ.

ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ಪ್ರಯೋಜನ ಸಿಗಲಿಲ್ಲ. ಆ ಸಂದರ್ಭದಲ್ಲಿ ಪ್ರಸಿದ್ಧ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು, ದೇವಿ ಚಾಮುಂಡೇಶ್ವರಿಯ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದರು. ಆ ಸಮಯದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮ್ಮ ದಾಂಪತ್ಯದಲ್ಲಿ ಒಂದು ವರ್ಷದ ಒಳಗೆ ಮಕ್ಕಳ ಭಾಗ್ಯ ಒದಗಿ ಬರುತ್ತದೆ ಎಂದು ಅಭಯ ಕೊಟ್ಟಳು.

ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯದಲ್ಲಿ ಮಕ್ಕಳ ಭಾಗ್ಯ ಒದಗಿ ಬಂತು. ಅವರ ದಾಂಪತ್ಯದ ಕತ್ತಲೆ ಯನ್ನು ದೂರ ಮಾಡಿದ ಶ್ರೀದೇವಿ ಚಾಮುಂಡೇಶ್ವರಿ ಗೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿದರು.

Related post

Leave a Reply

Your email address will not be published. Required fields are marked *

error: Content is protected !!