ನಾಳ: ಭಜಕ ಮಿತ್ರರ ಪುಣ್ಯಕ್ಷೇತ್ರ ದರ್ಶನ ಕಾರ್ಯಕ್ರಮ
ನಾಳ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಭಜಕ ಮಿತ್ರರು ಆಯೋಜಿಸಿರುವ ಈ ವರ್ಷದ ‘ಪುಣ್ಯಕ್ಷೇತ್ರ ದರ್ಶನ’ ಕಾರ್ಯಕ್ರಮವು ಇಂದು ಸಂಜೆ ನಾಳ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಆರಂಭಗೊಳ್ಳಲಿದೆ.
ಸೆ.13ರ ಬೆಳಿಗ್ಗೆ ತಂಡವು ಕೊಪ್ಪಳ ಜಿಲ್ಲೆಯಲ್ಲಿರುವ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯಸ್ವಾಮಿಯ ದರ್ಶನ ಪಡೆಯಲಿದೆ. ಅಲ್ಲಿಂದ ರಾಯಚೂರು ಜಿಲ್ಲೆಯಲ್ಲಿರುವ ಗುರು ರಾಘವೇಂದ್ರ ಸ್ವಾಮಿಗಳು ವಾಸವಿದ್ದ ಬಿಚ್ಚಾಲೆ, ಅಪ್ಪಣ್ಣಾಚಾರ್ಯರ ಮನೆ, ಶ್ರೀ ಪಂಚಮುಖಿ ಆಂಜನೇಯ ದೇವಾಲಯದ ದರ್ಶನ ಪಡೆದು ಸಂಜೆ ಮಂತ್ರಾಲಯ ತಲುಪಲಿದೆ.
ಸೆ.13ರ ರಾತ್ರಿ ಮಂತ್ರಾಲಯದಲ್ಲಿ ಗುರುರಾಯರ ದರ್ಶನ ಪಡೆದು ಉತ್ಸವ ಸಂದರ್ಭ ತಂಡದಿಂದ ಭಜನಾ ಸೇವೆ ನಡೆಯಲಿದೆ. ಸೆ.14ರ ಬೆಳಿಗ್ಗೆ ಮಂತ್ರಾಲಯದಲ್ಲಿ ಪಾದಪೂಜೆ ಸೇವೆ ನೆರವೇರಿಸಿ, ಹಂಪಿ, ಗವಿಸಿದ್ದ ಮಠಕ್ಕೆ ಭೇಟಿ ನೀಡಿ ರಾತ್ರಿ ನಾಳಕ್ಕೆ ವಾಪಾಸಾಗಲಿದೆ.
ತಂಡದಲ್ಲಿ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ವರ ಜಿ., ಭಜನಾ ಮಂಡಳಿಯ ಅಧ್ಯಕ್ಷ ಉಮೇಶ್ ಸಂಬೋಳ್ಯ ಸೇರಿದಂತೆ ಇಪ್ಪತ್ತು ಮಂದಿ ಸದಸ್ಯರು ಇರಲಿದ್ದಾರೆ.