ಉಜಿರೆ: NEP ಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಖಂಡನೆ: ಎಬಿವಿಪಿ ಬೆಳ್ತಂಗಡಿ ತಾಲೂಕು ವತಿಯಿಂದ ಬೃಹತ್ ಪ್ರತಿಭಟನೆ
ಉಜಿರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಆ.24 ರಂದು(ಇಂದು) ಉಜಿರೆ ಸರ್ಕಲ್ ಬಳಿ ಎಸ್ ಡಿಎಂ ಕಾಲೇಜು ಎಬಿವಿಪಿ ಸಂಘಟಕರಿಂದ ಬೃಹತ್ ಪ್ರತಿಭಟನೆ ಜರುಗಿತು.
ಬೆಲಾಲು ಕ್ರಾಸ್ ನಿಂದ ಉಜಿರೆ ಸರ್ಕಲ್ ವರೆಗೆ ಎಬಿವಿಪಿ ಸಂಘಟಕರಿಂದ ರ್ಯಾಲಿ ನಡೆಯಿತು.
ಈ ವೇಳೆ NEP ಯನ್ನು ರದ್ದು ಗೊಳಿಸುವ ರಾಜ್ಯ ಸರ್ಕಾರಕ್ಕೆ ದಿಕ್ಕಾರವನ್ನು ಕೂಗಿದ್ದು, ಸರ್ಕಾರದ ನಿರ್ಧಾರವನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆಯನ್ನು ನೀಡಲಾಯಿತು.ಮತ್ತು NEP ವಿರೋಧದ ತನ್ನ ನಿಲುವನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನೂರಾರು ಎಬಿವಿಪಿ ಸಂಘಟಕರು ಭಾಗಿಯಾಗಿದ್ದರು