ಮಚ್ಚಿನ: ಸ.ಕಿ.ಪ್ರಾ ಶಾಲೆ ಕುತ್ತಿನದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮಚ್ಚಿನ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುತ್ತಿನ,ದಲ್ಲಿ
ಶಾಲಾಭಿವೃದ್ಧಿ ಸಮಿತಿ,ಪೋಷಕರು,ಹಳೇ ವಿದ್ಯಾರ್ಥಿ ಸಂಘ, ಸ್ಥಳೀಯ ಸ್ವಸಹಾಯ ಸಂಘಗಳ ಸದಸ್ಯರು, ಸಿದ್ಧಿ ವಿನಾಯಕ ಭಜನಾ ಮಂಡಳಿ ಮತ್ತು ಊರಿನ ಮಹನೀಯರ ಪಾಲ್ಗೊಳ್ವಿಕೆಯಿಂದ ಸ್ವಾತಂತ್ರ್ಯ ದಿನಾಚರಣೆಯ ನ್ನು ಆಚರಿಸಲಾಯಿತು.
ಹಳೇ ವಿದ್ಯಾರ್ಥಿ ಸಂಘದವರಿಂದ ಮೆರವಣಿಗೆ ಆಯೋಜಿಸಲಾಗಿತ್ತು.
ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಗಂಗಾಧರ ಸಾಲಿಯಾನ್ ವಹಿಸಿದ್ದರು.
ವೇದಿಕೆಯಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಬಿ. ಎಸ್.ಹಾಗೂ ಸ್ಥಳೀಯ ದುರ್ಗಾ ಕ್ಲಿನಿಕ್ ವೈದ್ಯಾಧಿಕಾರಿಗಳಾದ ಶ್ರೀ ಕೆ. ಮಾಧವ ಶೆಟ್ಟಿ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ನೀತಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಪ್ರಭು, ಧರ್ಮಸ್ಥಳ ಸ್ವಸಹಾಯ ಸಂಘಗಳ ಸೇವಾ ಪ್ರತಿನಿಧಿ ಶ್ರೀಮತಿ ಮಂಜುಳಾ ಶರ್ಮಾ,ಒಕ್ಕೂಟದ ಅಧ್ಯಕ್ಷರಾದಂತಹ ಶ್ರೀ ಜಯ ಪೂಜಾರಿ, ಊರಿನ ಹಿರಿಯರಾದ ಶ್ರೀ ಸುರೇಶ್ ಕುಲಾಲ್, ಸ್ಥಳೀಯ ಅಂಗನವಾಡಿಯ ಅಧ್ಯಕ್ಷರಾದ ಶ್ರೀಮತಿ ಪ್ರತಿಮಾ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಲೋಕೇಶ್ ವೇದಿಕೆಯಲ್ಲಿದ್ದರು.
ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ನವನೀತ ಸ್ವಾಗತಿಸಿದರು. ಅತಿಥಿ ಶಿಕ್ಷಕಿಯಾದ ಕುಮಾರಿ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿ ಮುಖ್ಯ ಶಿಕ್ಷಕರಾದ ಲೋಕೇಶ್ ಧನ್ಯವಾದ ನೀಡಿದರು.
ಈ ಸಲದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಉಚಿತ ಗಣಕಯಂತ್ರದ ಸೌಲಭ್ಯವನ್ನು ಊರಿನ ಹಿರಿಯರಾದ ಶ್ರೀ ಸುರೇಶ್ ಮೂಲ್ಯ ಮತ್ತು ಅವರ ಕುಟುಂಬದವರು ಒದಗಿಸಿ ಕೊಟ್ಟರು.
ಶಾಲೆಗೆ ಅಗತ್ಯವಾಗಿ ಬೇಕಾದಂತಹ ಮಿಕ್ಸಿಯನ್ನು ಹಳೆ ವಿದ್ಯಾರ್ಥಿ ಸಂಘದವರು, ಬಟ್ಟಲು ಇಡುವ ಸ್ಟ್ಯಾಂಡನ್ನು ಸೇವಾ ಪ್ರತಿನಿಧಿ ಶ್ರೀಮತಿ ಮಂಜುಳಾ ಶರ್ಮಾ, ಗಡಿಯಾರವನ್ನು ಹಳೆ ವಿದ್ಯಾರ್ಥಿಗಳಾದ ಕುಮಾರಿ ಲಾವಣ್ಯ ಮತ್ತು ಕುಮಾರಿ ಸೌಜನ್ಯ, ಕುಡಿಯುವ ನೀರಿನ ಬಾಟಲ್ ಗಳನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಪ್ರಭು ಹಾಗೂ ಪುಸ್ತಕಗಳು ಲೇಖನ ಸಾಮಗ್ರಿಗಳನ್ನು ಒದಗಿಸಿಕೊಟ್ಟರು.
ಸುಸಜ್ಜಿತ ಡಯಾಸ್ ಅನ್ನು ಮಾಧವ ನಾಯಕ ಕೊಂಬೊಟ್ಟು ಮತ್ತು ಮುರಳೀಧರ ಕೆದಿಲಾಯ ಪೆರ್ನಡ್ಕ ಒದಗಿಸಿಕೊಟ್ಟರು.
ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀ ಸುಬ್ರಹ್ಮಣ್ಯ ಶರ್ಮ ಬಪ್ಪಳಿಗೆ ಮನೆ ಉಚಿತ ಬ್ಯಾಗನ್ನು ಒದಗಿಸಿ ಕೊಟ್ಟಿರುತ್ತಾರೆ.
ಕೇಶವ ಪ್ರಭು, ಹೊನ್ನಪ್ಪ ಸಾಲ್ಯಾನ್, ಸಿದ್ಧಿ ವಿನಾಯಕ, ರಾಜೇಶ್ವರಿ, ಬ್ರಾಹ್ಮರಿ, ಸಂಜೀವಿನಿ, ಸಮೃದ್ಧಿ ಸ್ವಸಹಾಯ ಸಂಘಗಳು ಶಾಲಾ ಅಭಿವೃದ್ಧಿಗೆ ಧನಸಹಾಯ ನೀಡಿ ಸಹಕರಿಸಿದರು. ಕುಮಾರಿ ದೀಕ್ಷ ಕುಮಾರಿ ದೀಪ್ತಿ ಧ್ವಜ ಕಟ್ಟೆಗೆ ಬಣ್ಣ ಬಳಿದು ಸಹಕರಿಸಿರುತ್ತಾರೆ
ಅದೇ ರೀತಿ ಹಲವಾರು ಮಹಾನೀಯರು ಸಿಹಿ ತಿಂಡಿ ನೀಡುವ ಮೂಲಕ ಸಹಕಾರ ನೀಡಿರುತ್ತಾರೆ.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇದನ್ನು ಶಾಲಾ ಅತಿಥಿ ಶಿಕ್ಷಕಿಯಾದ ಕುಮಾರಿ ಲೋಲಾಕ್ಷಿ ಇವರು ಸಂಯೋಜಿಸಿದರು.
ಹಳೆ ವಿದ್ಯಾರ್ಥಿ ಸಂಘದವರ ವತಿಯಿಂದ ಲಘು ಉಪಹಾರ ಆಯೋಜಿಸಲಾಗಿತ್ತು.