• September 19, 2024

ಮೊಗ್ರು: ಸ.ಕಿ.ಪ್ರಾ ಶಾಲೆ ಮೊಗ್ರುವಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

 ಮೊಗ್ರು: ಸ.ಕಿ.ಪ್ರಾ ಶಾಲೆ ಮೊಗ್ರುವಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮೊಗ್ರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಎಸ್ ಡಿಎಂಸಿ ಅಧ್ಯಕ್ಷರಾದ ಶೀನಪ್ಪ ಗೌಡ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಆಕರ್ಷಕ ಮೆರವಣಿಗೆ ನಡೆಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷರಾದ ಶೀನಪ್ಪ ಗೌಡ ವಹಿಸಿದ್ದರು.

ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರಾದ ಬಾಲಕೃಷ್ಣ , ಊರ ಗಣ್ಯರಾದ ಸುಧಾಕರ ನೈಮಾರ್,ಮನೋಹರ ಗೌಡ , ಅಂತರ ಚಂದ್ರಹಾಸ ದೇವಸ್ಯ, ಪುರಂದರ ನೈಮಾರ್, ಕೇಶವ ಗೌಡ ಜಾಲ್ನಡೆ ಉಪಸ್ಥಿತರಿದ್ದು ಶುಭಹಾರೈಸಿದರು.

ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕವೃಂದ , ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ದಿ|ಸಂಕಪ್ಪ ಗೌಡ ನೈಮಾರ್ ಇವರ ಸ್ಮರಣಾರ್ಥ ನೀಡುವ ದತ್ತಿ ನಿಧಿ ಪ್ರೋತ್ಸಾಹಕ ಬಹುಮಾನವನ್ನು ಹಿರಿಯ ವಿದ್ಯಾರ್ಥಿಗಳಾದ ಪ್ರಿಯ ಡಿಎಲ್ ಹಾಗೂ ಇಂದ್ರೇಶ್ ಇವರಿಗೆ ಸುಧಾಕರ ನೈಮಾರ್ ಹಸ್ತಾಂತರಿಸಿದರು.

ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಸ್ಥಳೀಯ ಅಂಗನವಾಡಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು. ಶಿಕ್ಷಕಿ ಜಯಶ್ರೀ ಸ್ವಾಗತಿಸಿ, ಮೋಹಿನಿ ವಂದಿಸಿದರು. ಪ್ರಭಾರ ಮುಖ್ಯ ಶಿಕ್ಷಕರಾದ ಮಾಧವ ಗೌಡ ಕಾರ್ಯಕ್ರಮ ನಿರ್ವಹಿಸಿದರು.

Related post

Leave a Reply

Your email address will not be published. Required fields are marked *

error: Content is protected !!