• September 21, 2024

ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನಲ್ಲಿ 3 ದಿನ ನಡೆಯಲಿರುವ ಮೀನು ಮೇಳಕ್ಕೆ ಚಾಲನೆ

 ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನಲ್ಲಿ 3 ದಿನ ನಡೆಯಲಿರುವ ಮೀನು ಮೇಳಕ್ಕೆ ಚಾಲನೆ


  • ಬೆಳ್ತಂಗಡಿ : ಆ 10 ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್ಸ್ ನಲ್ಲಿ ಆಗಸ್ಟ್ 10,11,12 ಬೆಳಗ್ಗೆ 8.00 ರಿಂದ ಸಂಜೆ 6.00 ಗಂಟೆಯ ತನಕ ನಡೆಯಲಿರುವ ಮೀನು ಮೇಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
  • ಈ ಸಂದರ್ಭದಲ್ಲಿ ಕಡಮ್ಮಾಜೆ ಫಾರ್ಮ್ಸ್ ನಾ ಕುಸುಮ ದಿನಕರ ಗೌಡ ಕಡಮ್ಮಾಜೆ , ಸಹೋದರರಾದ ದೇವಿಪ್ರಸಾದ ಗೌಡ, ಜಯಪ್ರಸಾದ ಗೌಡ ಕಡಮ್ಮಾಜೆ,ಅಲೆಕ್ಕಿ ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ರಮೇಶ್ ನೆಕ್ಕರಾಜೆ,ಬಂದಾರು ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಜೇನು ಕೃಷಿಕರಾದ ಅಶೋಕ್ ರೈ ಕುಪ್ಪೆಟ್ಟಿ,ವಿವಿಧ ಉಸ್ತುವಾರಿ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

  • ಮೂರು ದಿನದ ಮೀನು ಮೇಳದಲ್ಲಿ ತಿಲಾಪಿಯ ಮೀನು,ಮಡೆoಜಿ ಮೀನು,ಫoಗಾಸಿಯಸ್ ಮೀನು,ರೂಪ್ ಚಂದ್ ಮೀನುಗಳ ಖಾದ್ಯ ನೀರ್ ದೋಸೆ, ಆಪ, ಊಟ ದೊಂದಿಗೆ ಸವಿಯಲು ಕೆದುತ್ತ ಮೀನ್ ಅಡಿಪಿಲ್ದ ಅಟಿಲ್ ನಲ್ಲಿ ಲಭ್ಯವಿದೆ.
  • ಇದರ ಜೊತೆಗೆ ಮೀನು ಮರಿಗಳು ಲಭ್ಯ, ಇದರೊಂದಿಗೆ ಎಸ್.ಆರ್.ಕೆ ಮಿಷನರಿ ಲ್ಯಾಡರ್ಸ್, ನೇತ್ರಾವತಿ ನರ್ಸರಿ, ದೇಸಿ ತರಕಾರಿ ಸಸಿ ಮತ್ತು ಬೀಜ, ಟ್ರೀ ಸೈಕ್ಲಿoಗ್, ಜೇನು ಮತ್ತು ಜೀನಿನ ಪರಿಕರಗಳು, ವಿವಿಧ ಅಕ್ವೆರಿಯಂ ಮೀನು ಸಾಮಗ್ರಿ, ಇಕೋ ಫ್ರೆಶ್ ಎಂಟರ್ ಪ್ರೈಸೆಸ್, ಸಚಿನ್ ಸ್ವೀಟ್ಸ್ & ಸ್ವೀಟ್ ಸೆಂಟರ್ ಮಳಿಗೆಗಳು ಒಂದೇ ಸೂರಿನಡಿಯಲ್ಲಿದೆ.
    ವಿಶೇಷ ಆಕರ್ಷಣೆಯಾಗಿ ಮೀನಿಗೆ ಗಾಲ ಹಾಕುವ ಸ್ಪರ್ಧೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!