• November 13, 2024

ಸಾರ್ವಜನಿಕ ಗಣೇಶೋತ್ಸದ ವಿಸರ್ಜನೆಯ ವ್ಯವಸ್ಥೆಯನ್ನು ಆದರ್ಶ ರೀತಿಯಲ್ಲಿ ಮಾಡುವಂತೆ ಬೆಳ್ತಂಗಡಿ ಪುರಸಭೆಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ

 ಸಾರ್ವಜನಿಕ ಗಣೇಶೋತ್ಸದ ವಿಸರ್ಜನೆಯ ವ್ಯವಸ್ಥೆಯನ್ನು ಆದರ್ಶ ರೀತಿಯಲ್ಲಿ ಮಾಡುವಂತೆ ಬೆಳ್ತಂಗಡಿ ಪುರಸಭೆಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ

 

ಬೆಳ್ತಂಗಡಿ : ಗಣೇಶ ಚತುರ್ಥಿಯ ವೇಳೆ ಸಾರ್ವಜನಿಕ ಗಣೇಶೋತ್ಸವವನ್ನು ಬಹುದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತಿದ್ದು, ಸಡಗರ ಸಂಭ್ರಮದಿಂದ ಆಚರಣೆಯನ್ನು ಮಾಡುವ ಈ ಉತ್ಸವದಲ್ಲಿ, ಗಣೇಶ ವಿಸರ್ಜನೆಗೆ ಉತ್ತಮ ಮತ್ತು ಸುರಕ್ಷಿತ ವ್ಯವಸ್ಥೆ ಮಾಡಿಕೊಡಬೇಕೆಂದು ಉದ್ದೇಶಿಸಿ ಬೆಳ್ತಂಗಡಿ ತಾಲೂಕಿನ ಉಪ ತಹಶೀಲ್ದಾರ್ ಕೆ. ಜಯ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಸಂಘಟನಾ ಸಂಯೋಜಕಿ ಮಿಟಿಲ್ಡ ಡಿ ಕೋಸ್ತ ಇವರಿಗೆ ಆ.25 ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ ನೀಡಲಾಯಿತು.

ಹಿಂದೂ ಧರ್ಮಶಾಸ್ತ್ರದಂತೆ ಗಣೇಶನ ಮೂರ್ತಿಯ ವಿಸರ್ಜನೆಯನ್ನು ಹರಿಯುವ ನೀರಿನಲ್ಲಿ ಮಾಡಬೇಕೆಂದಿದೆ. ಆದರೆ ಕೆಲವರು ಇದರ ಬಗ್ಗೆ ಪರಿಸರ ಮಾಲಿನ್ಯದ ನೆಪವೊಡ್ಡಿ ಹರಿಯುವ ನೀರಿನಲ್ಲಿ ವಿಸರ್ಜಿಸುವ ಬದಲು ಕೆರೆ ಮತ್ತು ಸರೋವರಗಳಲ್ಲಿ ಹಾಗೂ ಕೃತಕ (ಮೊಬೈಲ) ಟ್ಯಾಂಕ್ ವ್ಯವಸ್ಥೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡಲಾಗುತ್ತದೆ. ಸರಕಾರವು ಇದರ ಬಗ್ಗೆ ಗಮನವಹಿಸಿ ಹರಿಯುವ ನೀರಿನಲ್ಲಿ ಗಣೇಶ ವಿಸರ್ಜನೆಯ ವ್ಯವಸ್ಥೆ ಮಾಡಿಕೊಡಬೇಕು ಜೊತೆಗೆ ಈ ವೇಳೆಯಲ್ಲಿ ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಮನಹರಿಸಬೇಕು. ಮೂರ್ತಿಕಾರರಿಗೆ ಪ್ಲಾಸ್ಟರ್ ಆಫ್ ಪ್ಯಾರೀಸ್ ನ ಮೂರ್ತಿ ಮಾಡದೇ ಮಣ್ಣಿನ ಮೂರ್ತಿಯನ್ನೇ ಮಾಡುವಂತೆ ಪ್ರೇರೇಪಿಸಿ ಅದಕ್ಕಾಗಿ ಅವರಿಗೆ ಸರಕಾರದ ವತಿಯಿಂದ ಅನುದಾನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ವಕೀಲರು ಉದಯ್ ಬಿ ಕೆ , ಬೆಳ್ತಂಗಡಿ ತಾಲೂಕು ಅಖಿಲ ಭಾರತೀಯ ಹಿಂದೂ ಮಹಾಸಭಾ ಅಧ್ಯಕ್ಷರು ಪುನೀತ್ ಸುವರ್ಣ , ಬೆಳ್ತಂಗಡಿ ಸಾರ್ವಜನಿಕ ಶಾರದೋತ್ಸವ ಸಮಿತಿ ಕಾರ್ಯದರ್ಶಿ ಮುರಳಿದರ ಕೆಲ್ಲಗುತ್ತು , ರಾಜ ಕೇಸರಿ ಸಂಘಟನೆ ಬೆಳ್ತಂಗಡಿ ಸದಸ್ಯರು ಅಮೃತ್ ಕುಮಾರ್ , ,

ಮಡಂತ್ಯಾರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯರು ಪ್ರದೀಪ್ ಕುಮಾರ್ , ಬಳ್ಳಮಂಜ ಅನಂತೇಶ್ವರ ಭಜನಾ ಮಂಡಳಿ ಸದಸ್ಯರು ಜಾರಪ್ಪ ಮೂಲ್ಯ , ಧರ್ಮಪ್ರೇಮಿಗಳಾದ ವಿಘ್ನೇಶ ಆಚಾರ್ಯ ಬೆಳ್ತಂಗಡಿ, ಎಂ ನಾರಾಯಣ ಸುಧೆ ಮುಗೆರು ಬೆಳ್ತಂಗಡಿ, ಸುಂದರಿ, ಕುಮಾರಿ, ಜಾನಕಿ ಮಾಚಾರ್, ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ರತ್ನಾಕರ್ ಆಚಾರ್ಯ, ಯೋಗೀಶ್ ಅಚ್ಚಿನಡ್ಕ, ಹರೀಶ್ ಕಕ್ಕಿಂಜೆ, ಉದಯ್ ನೆರಿಯ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!