ಕನ್ಯಾಡಿ: ಚಾತುರ್ಮಾಸ್ಯ ವೃತಾಚರಣೆಯಲ್ಲಿ ಭಾಗಿಯಾದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ವೈ ಭರತ್ ಶೆಟ್ಟಿ
ಕನ್ಯಾಡಿ: ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಗುರುದೇವ ಮಠದಲ್ಲಿ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆಯಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ವೈ ಭರತ್ ಶೆಟ್ಟಿ ಇವರು ಪಾದುಕ ಪೂಜೆ ನೆರವೇರಿಸಿದರು .
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ರಾಜ್ಯ ಬಿಜೆಪಿ ವಕ್ತಾರರಾದ ವಿಕಾಸ್ ಪುತ್ತೂರು,ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಗಳಾದ ಕಿರಣ್ ಕುಮಾರ್, ವರುಣ್ ಚೌಟ, ಜಯಾನಂದ ಅಂಚನ್, ಮನೋಜ್ ಕುಮಾರ್ , ಪ್ರಮುಖರಾದ ವಿಠಲ್ ಸಾಲ್ಯಾನ್, ಭರತ್ ರಾಜ್ ಕೃಷ್ಣಾಪುರ ,ಪುಷ್ಪರಾಜ್, ಮುಖ ವಿವೇಕ್ ದಂಬೆಲ್ ರಕ್ಷಿತ್ ಪೂಜಾರಿ ಶಿವಪ್ರಸಾದ್, ಮೋಕ್ಷಿತ್ ಸಾಲ್ಯಾನ್ ,ಉಪಸ್ಥಿತರಿದ್ದು ಗುರುಗಳ ಆಶೀರ್ವಾದ ಪಡೆದುಕೊಂಡರು. ಚಾತುರ್ಮಾಸ್ಯ ಸಮಿತಿಯ ಪ್ರಧಾನ ಸಂಚಾಲಕರಾದ ಜಯಂತ್ ಕೋಟ್ಯಾನ್ ,ಸರಕಾರದ ದಿಶಾ ಸಮಿತಿಯ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು .