• November 22, 2024

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವಾಣಿ ಕಾಲೇಜಿಗೆ ಪ್ರಾಜೆಕ್ಟರ್ ಹಸ್ತಾಂತರ ಮತ್ತು ರಾಷ್ಟ್ರೀಯ ಅಧ್ಯಕ್ಷರ ಭೇಟಿ

 ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವಾಣಿ ಕಾಲೇಜಿಗೆ ಪ್ರಾಜೆಕ್ಟರ್ ಹಸ್ತಾಂತರ ಮತ್ತು ರಾಷ್ಟ್ರೀಯ ಅಧ್ಯಕ್ಷರ ಭೇಟಿ

 

ಬೆಳ್ತಂಗಡಿ: ಶಿಕ್ಷಣ ಸಂಸ್ಥೆಗಳಿಗೆ ಕೊಡುವ ಕೊಡುಗೆ ಯಾವತ್ತಿಗೂ ಕೂಡ ಪ್ರೇರಣಾದಾಯಕವಾಗಿರುತ್ತದೆ ಮತ್ತು ಎಷ್ಟು ಸಲ ವಿದ್ಯಾ ಸಂಸ್ಥೆಗಳಿಗೆ ಭೇಟಿ ಕೊಟ್ಟರು ಕೂಡ ಅದು ಹೊಸ ಉತ್ಸಾಹವನ್ನು ತುಂಬುತ್ತದೆ ಎಂದು ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಎಮ್ ಕೆ ಕಾರ್ತಿಕೇಯನ್ ಅವರು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ವಾಣಿ ಪದವಿ ಪೂರ್ವ ಕಾಲೇಜಿಗೆ ನೀಡಿದ ಶಾಶ್ವತ ಪ್ರಾಜೇಕ್ಟರ್ ಅನ್ನು ಉದ್ಘಾಟಿಸಿ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷರಾದ ಹೆಚ್ ಪದ್ಮಗೌಡ ರವರು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಕೆಲಸವನ್ನ ಪ್ರಶಂಸಿದರು.

ಹಾಗೆಯೇ ಅಧ್ಯಕ್ಷರಾದ ಕುಶಾಲಪ್ಪ ಗೌಡ ಮಾತಾಡಿ ಜೇಸಿಐಯು ವ್ಯಕ್ತಿತ್ವ ವಿಕಸನದಿಂದ ಇಂದು ನಾಯಕರನ್ನ ಹುಟ್ಟಿ ಹಾಕುತ್ತಿದೆ ಜೇಸಿಐ ಬೆಳ್ತಂಗಡಿ ಅಧ್ಯಕ್ಷರಾದ ಶಂಕರ್ ರಾವ್ ವಾಣಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿ, ಈಗ ಅಧ್ಯಾಪಕರಾಗಿ‌ ಇಲ್ಲೇ ಕೆಲಸ ಮಾಡುತ್ತ ಕಾಲೇಜಿಗೆ ಕೊಡುಗೆ ನೀಡಿರುವುದು ಹೆಮ್ಮೆಯ ವಿಷಯವೆಂದರು.

ಹಾಗೇ ಕಾಲೇಜಿನ‌ ಪ್ರಾಂಶುಪಾಲರಾದ ಯದುಪತಿ ಗೌಡ ಕಾಲೇಜಿನ‌ ಹಲವು ಜನ ಜೇಸಿಐಯಲ್ಲಿ ತೋಡಗಿಸಿಕ್ಕೊಂಡಿದ್ದು ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಹಲವು ಕಾರ್ಯಕ್ರಮಗಳು ಕಾಲೇಜಿನಲ್ಲಿ ನಡೆದಿದ್ದು ತಮ್ಮ ಸಂಪೂರ್ಣ ಸಹಕಾರವಿದೆ ಎಂದು ಶುಭ ಹಾರೈಸಿದರು.‌

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶಂಕರ್ ರಾವ್ ವಹಿಸಿದ್ದು ವೇದಿಕೆಯಲ್ಲಿ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ವಲಯ ಉಪಾಧ್ಯಕ್ಷರಾದ ಭರತ್ ಶೆಟ್ಟಿ, ಮ್ಯಾನೆಜ್ಮೆಂಟ್ ವಿಭಾಗದ ನಿರ್ದೆಶಕರಾದ ಪ್ರಶಾಂತ್ ಲಾಯಿಲ, ಲೈಸನ್ ಆಫೀಸರ್ ನರಸಿಂಹ ಐತಾಳ್, ನಿಕಟಪೂರ್ವಧ್ಯಕ್ಷ ಪ್ರಸಾದ್ ಬಿ.ಎಸ್, ಕಾರ್ಯದರ್ಶಿ ಸುಧೀರ್ ಕೆ ಎನ್ ಉಪಸ್ಥಿತರಿದ್ದರು.

ಘಟಕದ ಕಾರ್ಯಕ್ರಮ ನಿರ್ದೇಶಕ ಚಂದ್ರಹಾಸ ಬಳಂಜ ವೇದಿಕೆ ಆಹ್ವಾನಿಸಿ, ನಮೃತಾ ಜೇಸಿ ವಾಣಿ ವಾಚಿಸಿ, ದೀಕ್ಷಾ ಗಣೇಶ್ ರಾಷ್ಟ್ರೀಯ ಅಧ್ಯಕ್ಷರನ್ನು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ವಾಣಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಗೌಡ, ನಿರ್ದೇಶಕರಾದ ಜಯಾನಂದ ಗೌಡ, ನಾರಾಯಣ ಗೌಡ ದೇವಸ್ಯ, ಉಷಾ ವೆಂಕಟರಮಣ ಗೌಡ,
ಜೆಸಿಐ ವಲಯದ ನಿರ್ದೇಶಕರು ಜೇಸಿಐ ಬೆಳ್ತಂಗಡಿಯ ಪೂರ್ವಧ್ಯಕ್ಷರಾದ ಚಿದಾನಂದ ಇಡ್ಯಾ, ಶ್ರೀನಾಥ್ ಕೆ. ನಾರಾಯಣ ಶೆಟ್ಟಿ,ಕಿರಣ್ ಕುಮಾರ್ ಶೆಟ್ಟಿ, ತುಕಾರಾಮ್, ಉಪಾಧ್ಯಕ್ಷರಾದ ಪ್ರೀತಮ್ ಶೆಟ್ಟಿ, ರಕ್ಷಿತ್ ಅಂಡಿಂಜೆ, ಸದಸ್ಯರಾದ ಶೀತಲ್ ಜೈನ್, ಅರಿಹಂತ್ ಜೈನ್, ಸುಧೀರ್ ಜೈನ್, ವಿನಾಯಕ್ ಪ್ರಸಾದ್, ರಶ್ಮಿ, ಸೃಜನ್ ರೈ, ಜೂನಿಯರ್ ಜೇಸಿ ಅಧ್ಯಕ್ಷ ರಾಮಕೃಷ್ಣ ಶರ್ಮಾ ಜೂನಿಯರ್ ಜೇಸಿ ಸದಸ್ಯರು ಭಾಗವಹಿಸಿದರು.

Related post

Leave a Reply

Your email address will not be published. Required fields are marked *

error: Content is protected !!