ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಓದಿನ ಕೌಶಲ್ಯ, ಪರೀಕ್ಷೆಗಾಗಿ ಅಧ್ಯಯನ ಸಲಹೆಗಳು, ಸಮಯ ನಿರ್ವಹಣೆ ಮತ್ತು ತಯಾರಿ ಕುರಿತ ಕಾರ್ಯಾಗಾರ
ಧರ್ಮಸ್ಥಳ: ಎಸ್.ಡಿ.ಎಮ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆಗಳ ತಯಾರಿ, ಸಮಯ ನಿರ್ವಹಣೆ ಮತ್ತು ಅಧ್ಯಯನದ ಉತ್ತಮ ವಿಧಾನಗಳ ಬಗ್ಗೆ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಈ ಕಾರ್ಯಾಗಾರದಲ್ಲಿ ಎಸ್.ಡಿ.ಎಮ್ ರೆಸಿಡೆನ್ಷಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುನಿಲ್ ಪಂಡಿತ್ ಅವರು ಮುಖ್ಯ ಉಪನ್ಯಾಸವನ್ನು ನೀಡಿದರು. ಅವರು ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ವಿವಿಧ ಅಧ್ಯಯನ ತಂತ್ರಗಳು, ಸಮಯ ನಿರ್ವಹಣೆ, ಹಾಗೂ ಅಧ್ಯಯನದಲ್ಲಿ ಸಾಮರ್ಥ್ಯವನ್ನು ಹೇಗೆ ಬೆಳಸಬಹುದು ಎಂಬುದನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕಾರ್ಯಾಗಾರದಲ್ಲಿ ಗುಂಪು ಚರ್ಚೆಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಿ, ವಿದ್ಯಾರ್ಥಿಗಳ […]