ಧರ್ಮಸ್ಥಳ: ಧರ್ಮಸ್ಥಳ ದೊಂಡೋಲೆ ನಿವಾಸಿ ದಿ| ಕೃಷ್ಣ ಶೆಟ್ಟಿಯವರ ಪುತ್ರ ಸಂತೋಷ್ ಶೆಟ್ಟಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಧರ್ಮಸ್ಥಳದಲ್ಲಿ ಅಂಗಡಿ ವ್ಯಾಪಾರಿಯಾಗಿದ್ದು, ಮೃತರು ತಾಯಿ, ಸಹೋದರಿ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.
ಗುರುವಾಯನಕೆರೆ : ನಿಲ್ಲಿಸಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಎ.10 ರಂದು ಗುರುವಾಯನಕೆರೆ ಶಕ್ತಿನಗರ ಜಂಕ್ಷನ್ ನಲ್ಲಿ ರಾತ್ರಿ 10 ಗಂಟೆಗೆ ನಡೆದಿದೆ. ಮೃತರನ್ನು ರಬ್ಬರ್ ಟ್ಯಾಪರ್ ವೃತ್ತಿನಿರತರು ಎಂದು ಗುರುತಿಸಲಾಗಿದೆ. ಸಹಸವಾರ ಬದ್ಯಾರು ಬರಾಯ ನಿವಾಸಿ ಲೋಕೇಶ್ ಗೌಡ ಎಂದು ಆರಂಭಿಕ ಮಾಹಿತಿ ತಿಳಿದುಬಂದಿದೆ. ನಿಲ್ಲಿಸಿದ್ದ ಕಂಟೈನರ್ ಲಾರಿಗೆ ಇವರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಗುದ್ದಿ ಈ ಅವಘಡ ನಡೆದುದಾಗಿದೆ. ಗಾಯಾಳು ಲೋಕೇಶ್ ಗೌಡ ಅವರನ್ನು ಚಿಕಿತ್ಸೆಗಾಗಿ […]Read More
ಪಟ್ರಮೆ: ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಪಟ್ರಮೆ ನಿವಾಸಿ ರಕ್ಷಿತ ಎಂಬಾಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಎ.6 ರಂದು ವರದಿಯಾಗಿದೆ. ಮೃತ ಯುವತಿ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಬಾಬು ಎಂಬವರ ಪುತ್ರಿ. ಎ.5 ರಂದು ವಿಪರೀತ ಹೊಟ್ಟೆನೋವೆಂದು ಬಳಲುತ್ತಿದ್ದ ಈಕೆಯನ್ನು ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಹೊಟ್ಟೆನೋವಿಗೆ ನಿಖರ ಕಾರಣ ಏನು ಎಂಬುದರ ಮಾಹಿತಿ ಲಭ್ಯವಾಗಬೇಕಾಗಿದೆ.Read More
ಬೆಳ್ತಂಗಡಿ ನಗರ ಪಂಚಾಯತ್ ನಲ್ಲಿ ಎರಡು ವರ್ಷಗಳ ಕಾಲ ಹೊರಗುತ್ತಿಗೆ ಸಿಬ್ಬಂದಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದ ಯಶಸ್ವಿನಿ ಎಂಬ ಯುವತಿ ಎ.4 ರಂದು ರಾತ್ರಿ ಮಂಗಳೂರಿನಲ್ಲಿ ತನ್ನ ಬಾಡಿಗೆ ರೂಂ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಈಕೆ ಮದುವೆಯಾಗಿ 5 ವರ್ಷಗಳಾಗಿದ್ದು ಮೂಲತಃ ಮುಡಿಪುವಿನ ಮಂಚಿ ಎಂಬಲ್ಲಿ ನೆಲೆಸಿದ್ದರು. ಕೆಲಸದ ನಿಮಿತ್ತ ವಾಮಂಜೂರಿನ ಬಾಡಿಗೆ ರೂಂ ನಲ್ಲಿ ವಾಸವಿದ್ದರು. ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಾಗಿದೆ.Read More
ಮುಂಡಾಜೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಎಎನ್ಎಂ ಆಗಿ ಸುದೀರ್ಘ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮುಂಡಾಜೆಯ ದಿ. ಬಾಬು ಶೆಟ್ಟಿ ಅವರ ಪತ್ನಿ ಸರಸ್ವತಿ ರೈ ಎಂ(93) ಅವರು ವಯೋಸಹಜ ಅನಾರೋಗ್ಯದಿಂದಾಗಿ ಮಾ.30 ರಂದು ಬಿ.ಸಿ ರೋಡಿನ ತನ್ನ ಪುತ್ರಿಯ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೆಡ್ರಾಸ್ ಸರಕಾರ ಇದ್ದ ಕಾಲದಲ್ಲಿ ಆರೋಗ್ಯ ಇಲಾಖೆಗೆ ಕರ್ತವ್ಯಕ್ಕೆ ಸೇರ್ಪಡೆ ಗೊಂಡಿದ್ದ ಅವರುಎಎನ್ಎಮ್ ಹುದ್ದೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದಮುಂಡಾಜೆ, ಪುಂಜಾಲಕಟ್ಟೆ, ವೇಣೂರು, ಅವಿಭಜತ ದಕ – ಉಡುಪಿ ಜಿಲ್ಲೆಯ […]Read More