• September 21, 2024

ಮುಂಡಾಜೆ: ನಿವೃತ್ತ ಎಎನ್‌ಎಮ್ ಸರಸ್ವತಿ ರೈ ಎಂ. ನಿಧನ

 ಮುಂಡಾಜೆ:   ನಿವೃತ್ತ ಎಎನ್‌ಎಮ್ ಸರಸ್ವತಿ ರೈ ಎಂ. ನಿಧನ

ಮುಂಡಾಜೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಎಎನ್‌ಎಂ ಆಗಿ ಸುದೀರ್ಘ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮುಂಡಾಜೆಯ ದಿ. ಬಾಬು ಶೆಟ್ಟಿ ಅವರ ಪತ್ನಿ ಸರಸ್ವತಿ ರೈ ಎಂ(93) ಅವರು ವಯೋಸಹಜ ಅನಾರೋಗ್ಯದಿಂದಾಗಿ ಮಾ.30 ರಂದು ಬಿ.ಸಿ ರೋಡಿನ ತನ್ನ ಪುತ್ರಿಯ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೆಡ್ರಾಸ್ ಸರಕಾರ ಇದ್ದ ಕಾಲದಲ್ಲಿ ಆರೋಗ್ಯ ಇಲಾಖೆಗೆ ಕರ್ತವ್ಯಕ್ಕೆ ಸೇರ್ಪಡೆ ಗೊಂಡಿದ್ದ ಅವರು
ಎ‌ಎನ್‌ಎಮ್ ಹುದ್ದೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ
ಮುಂಡಾಜೆ,‌ ಪುಂಜಾಲಕಟ್ಟೆ, ವೇಣೂರು, ಅವಿಭಜತ ದಕ – ಉಡುಪಿ ಜಿಲ್ಲೆಯ ಮೆಚ್ಚಿ ಮೊದಲಾದೆಡೆಯಲ್ಲಿ ಸೇವೆ ಸಲ್ಲಿಸಿ ಬಳಿಕ ನಿವೃತ್ತರಾಗಿದ್ದರು.

ವಾಹನ ಮತ್ತು ರಸ್ತೆ ಸಂಪರ್ಕವೇ ಇಲ್ಲದ ಕಾಲದಲ್ಲಿ ಅವರು ಮನೆ ಮನೆಗೆ ತೆರಳಿ ಆರೋಗ್ಯ ಸೇವೆ ಸಲ್ಲಿಸುತ್ತಿದ್ದರು. ಅವರ ಕರ್ತವ್ಯದ ಅವಧಿಯಲ್ಲಿ ಹಾಗೂ ನಿವೃತ್ತರಾದ ನಂತರವೂ
ಸಾವಿರಕ್ಕೂ ಅಧಿಕ ಹೆರಿಗೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.


ಬಾಣಂತಿ ಆರೋಗ್ಯ ವೀಕ್ಷಣೆಯನ್ನೂ ಕೈಗೊಂಡಿದ್ದರು‌.
ಮೃತರ ನಾಲ್ಕು ಗಂಡು ಮಕ್ಕಳ ಪೈಕಿ
ಬಾಲಕೃಷ್ಣ ರೈ ಮತ್ತು ಕೆಎಸ್‌ಆರ್‌ಟಿಸಿ ಚಾಲಕರಾಗಿದ್ದ ಶ್ರೀಧರ ರೈ ಎಂಬಿಬ್ಬರು ಈ ಮೊದಲೇ ಮೃತರಾಗಿದ್ದು, ಇದೀಗ ಕೆಎಸ್‌ಆರ್‌ಟಿಸಿ ಚಾಲಕ ಶಿವರಾಜ್ ರೈ, ಅಂಚೆ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ವಿಜಯಕುಮಾರ್ ರೈ, ನಿವೃತ್ತ ಅಂಗನವಾಡಿ ಶಿಕ್ಷಕಿ ಪುಷ್ಪಲತಾ ರೈ, ಹಾಗೂ ಇನ್ನೋರ್ವೆ ಪುತ್ರಿ ಭುವನೇಶ್ವರೀ ರೈ ಅವರನ್ನು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.


Related post

Leave a Reply

Your email address will not be published. Required fields are marked *

error: Content is protected !!