ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬೆಳಗ್ಗಿನ ದರ್ಶನದ ಸಮಯ ಬದಲಾವಣೆಯಾಗಿದ್ದು, ವಿಷು ಪ್ರಯುಕ್ತ ಧರ್ಮಸ್ಥಳದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಏ.22 ರವರೆಗೆ ಬೆಳಗ್ಗಿನ ದರುಶನ 8.30 ರಿಂದ ಪ್ರಾರಂಭವಾಗಲಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರುಶನ ಹಾಗೂ ಸೇವೆಗಳಲ್ಲಿ ಯಾವುದೇ ಬದಲಾವಣೆಗಳು ಇತುವುದಿಲ್ಲ ಎಂದು ಧರ್ಮಸ್ಥಳ ಆಡಳಿತ ಮಂಡಳಿ ತಿಳಿಸಿದೆ.
ಬೆಳ್ತಂಗಡಿ: ನಾಮಪತ್ರ ಸಲ್ಲಿಸಲಿರುವ ಎಸ್ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ: ಹಲವಾರು ಕಾರ್ಯಕರ್ತರಿಂದ ಮೆರವಣಿಗೆ:
ಬೆಳ್ತಂಗಡಿ: 2023 ವಿಧಾನಸಭಾ ಚುನಾವಣೆಗೆ ದಿನಗಣನೆ ಮಾತ್ರ ಬಾಕಿ ಇದ್ದು ಬೆಳ್ತಂಗಡಿ ಯಲ್ಲಿ ಏ.17 ರಂದು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ ಅಂತೆಯೆ ಇಂದು ಎಸ್ ಡಿ ಪಿ ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಇವರು ನಾಮಪತ್ರ ಸಲ್ಲಿಸಲಿದ್ದು ಎಸ್ ಡಿ ಪಿ ಐ ಕಾರ್ಯಕರ್ತರು ಮೆರವಣಿಗೆ ಮೂಲಕ ಸಾಗುತ್ತಿದ್ದಾರೆ. ಆ ಪ್ರಯುಕ್ತ ಧರ್ಮಸ್ಥಳ ಕಡೆಗೆ ಸಾಗುವ ವಾಹನಗಳು ಚರ್ಚ್ ರೋಡ್ ಮೂಲಕ ಕರ್ನೋಡಿ ರಸ್ತೆಯಿಂದ ಲಾಯಿಲ ರಸ್ತೆಗೆ ಪ್ರಯಾಣಿಸುವಂತೆ ಚರ್ಚ್ ರೋಡ್ ಜಂಕ್ಷನ್ ನಲ್ಲಿ […]Read More
ಕ್ಷಣ ಕ್ಷಣಕ್ಕೂ ರೋಚಕ ಘಟ್ಟ ತಲುಪುತ್ತಿರುವ ಬೆಳ್ತಂಗಡಿ ಕ್ಷೇತ್ರ ಚುನಾವಣೆ: ಹರೀಶ್ ಪೂಂಜಾಗೆ
ಬೆಳ್ತಂಗಡಿ: ವಿಧಾನಸಭಾ ಚುನಾವಣೆ ಘೋಷಣೆಯಾಗಿ ರಾಜ್ಯದೆಲ್ಲೆಡೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನಡೆಯುತ್ತಿದ್ದಂತೆ ಬೆಳ್ತಂಗಡಿ ತಾಲೂಕಿನ ವಿಧಾನಸಭಾ ಚುನಾವಣೆ ಕ್ಷಣ ಕ್ಷಣವು ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಹಾಲಿ ಬಿಜೆಪಿ ಶಾಸಕ ಹರೀಶ್ ಪೂಂಜ ಅವರನ್ನು ಕಾಂಗ್ರೆಸ್ ನ ಹೊಸ ಮುಖ ರಕ್ಷಿತ್ ಶಿವರಾಂ ಅವರು ಈ ಚುನಾವಣೆಯಲ್ಲಿ ಎದುರಿಸುತ್ತಿದ್ದಾರೆ. ವಿಶೇಷತೆಯೆಂದರೆ ಈ ಚುನಾವಣೆಗೆ ಜನಪ್ರಿಯ ಚಲನ ಚಿತ್ರನಟ ವಿಜಯ ರಾಘವೇಂದ್ರ ಅವರು ಎಂಟ್ರಿ ಕೊಡಲಿದ್ದಾರೆ. ನಾಮಪತ್ರ ಸಲ್ಲಿಕೆಯ ದಿನ ತಮ್ಮ ಭಾವ ರಕ್ಷಿತ್ ಶಿವರಾಂ ಗೆ ನಟ […]Read More
ಗೌರಿ ಲಂಕೇಶ್ ಪ್ರಕರಣ ನಡೆಸುತ್ತಿರುವ ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲೆ ಗುಂಡಿನ ದಾಳಿಯ ಹಿಂದೆ
ಮಂಗಳೂರು : ಕರ್ನಾಟಕದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಿಂದೂಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಹಿಂದುತ್ವನಿಷ್ಠ ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲೆ ಬುಧವಾರ ರಾತ್ರಿ ಅಪರಿಚಿತರಿಂದ ಗುಂಡಿನ ದಾಳಿ ನಡೆಸಲಾಗಿದೆ. ನ್ಯಾಯವಾದಿ ಕೃಷ್ಣಮೂರ್ತಿ ಅವರು ವಿಶ್ವ ಹಿಂದೂ ಪರಿಷತ್ತಿನ ಸಭೆ ಮುಗಿಸಿ ತಮ್ಮ ಕಾರಿನಲ್ಲಿ ಚೆಟ್ಟಳ್ಳಿಯಿಂದ ಮಡಿಕೇರಿಗೆ ಹೊರಡುತ್ತಿದ್ದರು. ಈ ವೇಳೆ ಅವರ ಮೇಲೆ ದಾಳಿ ನಡೆದಿದೆ. ಈ ಹೇಡಿತನದ ದಾಳಿಯನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ದಾಳಿಯ ಹಿಂದೆ ಪಿ.ಎಫ್.ಐ ಅಥವಾ […]Read More
ಬೆಳ್ತಂಗಡಿ: 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿ ಯಾಗಿ ಅಭಿವೃದ್ಧಿ ಯ ಹರಿಕಾರ ಬೆಳ್ತಂಗಡಿ ತಾಲೂಕನ್ನು ಅಭಿವೃದ್ಧಿ ಯತ್ತ ಸಾಗಿಸುತ್ತಿರುವ ಹರೀಶ್ ಪೂಂಜ ಏ.17 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಏ.17 ರಂದು ಬೆಳಗ್ಗೆ ಪೂಜೆ ಸಲ್ಲಿಸಿ, ನಂತರ ಬೃಹತ್ ಮೆರವಣಿಗೆಯ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತೆರಳಿ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಬೆಳ್ತಂಗಡಿ ತಾಲೂಕಿನ ಪ್ರತಿ ಗ್ರಾಮದಿಂದಲೂ ಸಾವಿರಾರೂ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ ಎಂದು […]Read More
ಬೆಳ್ತಂಗಡಿ: ವಿಧಾನಸಭಾ ಚುನಾವಣೆಗೆ ದಿನಗಣನೆ: ಸೂಕ್ತ ಭದ್ರತೆಯ ಮೂಲಕ ಬೆಳ್ತಂಗಡಿಗೆ ಬಂದಿಳಿದ ಮತ
ಬೆಳ್ತಂಗಡಿ: ಮೇ 10 ರಂದು ರಾಜ್ಯದಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಯು ಹತ್ತಿರ ಬರುತ್ತಿದ್ದಂತೆ ಸಕಲ ಸಿದ್ದತೆಗಳು ನಡೆಯುತ್ತಿದ್ದು ಇದೀಗ ಬೆಳ್ತಂಗಡಿ ಗೆ ಚುನಾವಣಾ ಮತ ಯಂತ್ರಗಳು ಬಂದಿದ್ದು, ಚುನಾವಣಾ ಪೂರ್ವಸಿದ್ಧತೆಯನ್ನು ಕೈಗೊಂಡಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣಾಧಿಕಾರಿ , ಬೆಳ್ತಂಗಡಿ ತಹಶೀಲ್ದಾರ್ ಉಸ್ತುವಾರಿಯಲ್ಲಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಿಂದ ಉಜಿರೆಗೆ ತರಲಾಗಿದೆ.Read More
ಚುನಾವಣೆ ದಿನಾಂಕ ಘೋಷಣೆಯೊಂದಿಗೆ ಚುನಾವಣಾ ಮಾದರಿ ನೀತಿ ಜಾರಿ: ಎಂಎಲ್ಎ ಬೋರ್ಡ್ ಗಳನ್ನು
ಕರ್ನಾಟಕ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ಚುನಾವಣೆ ದಿನಾಂಕ ಘೋಷಣೆಯೊಂದಿಗೆ ಚುನಾವಣಾ ಮಾದರಿ ನೀತಿ ಸಂಹಿತೆಯೂ ಜಾರಿಗೊಂಡಿದೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ನೆರವೇರಿಸುವಂತಿಲ್ಲ. ಹೀಗಾಗಿ ವಿವಿಧ ಯೋಜನೆಗಳ ಶಿಲಾನ್ಯಾಸ, ಹಕ್ಕುಪತ್ರ ವಿತರಣೆ, ಉದ್ಘಾಟನೆಯಂತಹ ಕಾರ್ಯಕ್ರಮಗಳನ್ನು ಚುನಾವಣೆ ಘೋಷಣೆಯಾದ ಬೆನ್ನಲ್ಲೇ ನಿಲ್ಲಿಸಲಾಗಿದೆ. ಜನಪ್ರತಿನಿಧಿಗಳ ಸಾಧನೆ ಸಂಬಂಧಿ ಪ್ರದರ್ಶನಗಳು, ಪೋಸ್ಟರ್, ಬ್ಯಾನರ್, ಕಟೌಟ್ಗಳ ತೆರವು ಕಾರ್ಯ ಕೂಡಾ ಆರಂಭಗೊಂಡಿದೆ. ಇನ್ನು ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಾಸಕರು, ಸಂಸದರ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದೆ. ಸರ್ಕಾರಿ […]Read More
ಧರ್ಮಸ್ಥಳ: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವ ಭಕ್ತಾಧಿಗಳಿಗೆ ಸೂಚನೆ: ನದಿಯಲ್ಲಿ ಸ್ನಾನ ಮಾಡುವ
ಧರ್ಮಸ್ಥಳ: ಲಕ್ಷಾಂತರ ಭಕ್ತರು ಆಗಮಿಸುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇದೀಗ ಭಕ್ತರಿಗೆ ವಿಶೇಷ ಸೂಚನೆಯನ್ನು ಹೊರಡಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಆಗಮಿಸುವ ಭಕ್ತಾಧಿಗಳು ನೇತ್ರಾವತಿ ನದಿಯಲ್ಲಿ ಮಿಂದೆದ್ದು ಶ್ರೀ ಮಂಜುನಾಥನ ದರ್ಶನ ಪಡೆಯುತ್ತಾರೆ. ಆದರೆ ಇದೀಗ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವ ಭಕ್ತಾಧಿಗಳಿಗೆ ವಿಶೇಷ ಸೂಚನೆಯನ್ನು ಹೊರಡಿಸಲಾಗಿದೆ. ಭಕ್ತಾಧಿಗಳು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವ ವೇಳೆ ಶ್ಯಾಂಪೂ, ಅಥವಾ ಸೋಪು ಇನ್ನಿತರ ವಸ್ತುಗಳನ್ನು ಬಳಸದಂತೆ ನಿಷೇಧ ಹೇರಲಾಗಿದೆ. ಅಲ್ಲದೆ ಧರ್ಮಸ್ಥಳ ಗ್ರಾ.ಪಂ, ನೇತ್ರಾವತಿ ಸ್ನಾನಘಟ್ಟ, […]Read More