ಹೊಸ್ಮಾರು ಈದು – ಕ್ರಾಸ್ ನಲ್ಲಿ ಪ್ರಪ್ರಥಮ ಬಾರಿಗೆ ಅಭಿಜಿತ್ ಜೈನ್ ನಾರಾವಿ ಇವರ ಮಾಲಕತ್ವ ದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಅತ್ಯುತ್ತಮ ಸೇವೆಯೊಂದಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಮುಂಬೈ ಮೂಲದ “ವಕ್ರಾಂಗಿ ಏಟಿಎಂ ಕೇಂದ್ರ” ಬಲ್ಯೊಟ್ಟು ಆಶ್ರಮದ ಬಳಿ ಇರುವ ಆದಿತ್ಯ ಕಾಂಪ್ಲೆಕ್ಸ್ ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಇಂದು ಶುಭಾರಂಭ ಗೊಂಡಿತು.ATM ಕೇಂದ್ರದ ಉದ್ಘಾಟನೆಯನ್ನು ಸಂಸ್ಥೆಯ ಮಾಲಕರ ಮಾತೃಶ್ರೀಯವರಾದ ಶ್ರೀಮತಿ ಸುಮಿತ್ರ ಜೈನ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಇವರು ನೆರವೇರಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ನಿರಂಜನ ಅಜ್ರಿ,ಮೊಕ್ತೇಸರರು […]
ಬೆಳ್ತಂಗಡಿ: ಬೀದಿ ಬದಿ ವ್ಯಾಪಾರಿಗಳು ಸ್ವಚ್ಛತೆಯನ್ನ ಕಾಪಾಡಿಕೊಂಡು ವ್ಯಾಪಾರವನ್ನು ಮಾಡಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಒಂದು ವಾರದೊಳಗೆ ಸಂಪೂರ್ಣವಾಗಿ ತ್ಯಜಿಸಿ ಪರ್ಯಾಯ ವ್ಯವಸ್ಥೆಯನ್ನ ರೂಡಿಸಿಕೊಳ್ಳಬೇಕು ಎಂದು ಪ.ಪಂ ಉಪಾಧ್ಯಕ್ಷ ಜಯಾನಂದ ಗೌಡ ತಿಳಿಸಿದರು. ಅವರು ಪಟ್ಟಣ ಪಂಚಾಯತ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿ ವತಿಯಿಂದ ದೀನ ದಯಾಳ್ ಅಂತಿಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಗರ ಬೀದಿ ವ್ಯಾಪಾರಿಗಳ ಬೆಂಬಲ ಉಪಘಟಕದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಎರಡು ದಿನಗಳ […]Read More
ಉಪ್ಪಿನಂಗಡಿ: ಕುಮಾರಧಾರ- ನೇತ್ರಾವತಿ ನದಿಗಳು ಉಕ್ಕಿ ಹರಿಯುತ್ತಿದ್ದು, ಉಪ್ಪಿನಂಗಡಿಯಲ್ಲಿ ನೆರೆ ಎದುರಾಗಿದೆ. ಎರಡೂ ನದಿಗಳಲ್ಲಿ ನೀರಿನ ಮಟ್ಟ ಏರುತ್ತಲೇ ಇರುವುದರಿಂದ ಅಲ್ಲಿಯ ಜನರಲ್ಲಿ ಆತಂಕ ಮೂಡಿದೆ. ಸಹಸ್ರಲಿಂಗೇಶ್ವರ ಮಹಾಕಾಳಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ನೆನ್ನೆ ಸಂಜೆ ವೇಳೆಗೆ 6 ಮೆಟ್ಟಿಲುಗಳಷ್ಟೆ ಕಾಣುತ್ತಿದ್ದವು, ಪುತ್ತೂರು ತಹಶೀಲ್ದಾರ್ ಉಪ್ಪಿನಂಗಡಿಗೆ ಆಗಮಿಸಿ ಗೃಹರಕ್ಷಕರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡದ ರಬ್ಬರ್ ಬೋಟ್ ನಲ್ಲಿ ಸಂಚರಿಸಿ ಬೋಟ್ ನ ಕಾರ್ಯಕ್ಷಮತೆ ಪರಿಶೀಲನೆ ನಡೆಸಿದ್ದಾರೆ.Read More
ಬೆಳಾಲು: ಬೆಳಾಲಿನಿಂದ ಉಪ್ಪಿನಂಗಡಿ ಮಾರ್ಗವಾಗಿ ಚಲಿಸುತ್ತಿದ್ದ ಲಾರಿ ಚಾಲಕ ಕಣಿಯೂರು ಎಂಬಲ್ಲಿ ರಿಕ್ಷಾ ಚಾಲಕರಿಗೆ ದಾರಿ ಬಿಡದೇ ರಿಕ್ಷಾ ಚಾಲಕರೊಂದಿಗೆ ವಾಗ್ವಾದಕ್ಕೆ ಇಳಿದಿದ್ದು ಈ ವೇಳೆ ಅನುಮಾನ ಬಂದ ಕಾರಣ ಸ್ಥಳೀಯರು ಲಾರಿಯನ್ನು ತಡೆಹಿಡಿದಿದ್ದ ಘಟನೆ ನಡೆದಿದೆ. ಬಳಿಕ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಲಾರಿ ಹಾಗೂ ಮರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.Read More
ಪುಂಜಾಲಕಟ್ಟೆ: ಮುಂಬರುವ ಬಕ್ರೀದ್ ಹಬ್ಬದಂದು ಗೋ ಹತ್ಯೆ ನಡೆಯುವ ಪ್ರಕರಣಗಳನ್ನು ನಿಲ್ಲಿಸುವಂತೆ ಮುಂಚಿತವಾಗಿಯೇ ಎಲ್ಲಾ ಮುಸಲ್ಮಾನರಿಗೂ ಗೋ ಹತ್ಯೆ ನಡೆಯದಂತೆ ಎಚ್ಚರಿಕೆಯನ್ನು ನೀಡಬೇಕು ಎಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ರಾಮ್ ಸೇನಾ ಸಂಘಟಕರು ಮನವಿ ನೀಡಿದರು. ಈ ಸಂದರ್ಭದಲ್ಲಿ ರಾಮ್ ಸೇನಾ ಪುಂಜಾಲಕಟ್ಟೆ ಘಟಕದ ಅಧ್ಯಕ್ಷ ಯೋಗಿಶ್ ಮೂಲ್ಯ, ಕಾರ್ಯದರ್ಶಿ ಪ್ರಶಾಂತ್ ಹಾಗೂ ಘಟಕದ ಕಾರ್ಯಕರ್ತರು ಭಾಗಿಯಾಗಿದ್ದರು.Read More
ಧರ್ಮಸ್ಥಳ: ರಾಜ್ಯ ಸಭಾ ಸದಸ್ಯರಾಗಿ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರನ್ನು ನಾಮನಿರ್ದೇಶನ ಮಾಡಲಾಗಿದೆ. ರಾಜ್ಯಸಭಾ ನಾಮನಿರ್ದೇಶಿತ ಸದಸ್ಯರಾಗಿ ಪಿಟಿ ಉಷಾ, ಇಳಯರಾಜ, ವೀರೇಂದ್ರ ಹೆಗ್ಗಡೆ, ಕೆವಿ ವಿಜಯೇಂದ್ರ ಪ್ರಸಾದ್, ಅವರನ್ನು ಆಯ್ಕೆ ಮಾಡಲಾಗಿದೆ. ನಾಲ್ಕು ನಾಮನಿರ್ದೇಶಿತ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಾಗಿದ್ದು, ಅವರ ಕೊಡುಗೆಗಳಿಗೆ ರಾಷ್ಟ್ರೀಯ ಮತ್ತು ಜಾಗತೀಕ ಮನ್ನಣೆಯನ್ನು ಪಡೆದಿದ್ದಾರೆ.Read More
ಲಾಯಿಲ: ಪ್ರಸನ್ನ ಕಾಲೇಜಿನ ವಿದ್ಯಾರ್ಥಿ ರಕ್ತದೊತ್ತಡದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವ ಘಟನೆ ನಡೆದಿದೆ. ಈತ ಬಾರ್ಯ ಗ್ರಾಮದ ಗಿರಿಗುಡ್ಡೆ ಸುಶೀಲ ಎಂಬವರ ಮಗ ಸುಮಂತ್ ಮಡಿವಾಳ (20). ಎಂದು ಗುರುತಿಸಲಾಗಿದೆ. ಒಂದು ವಾರದ ಹಿಂದೆ ಕಾಲೇಜಿನಲ್ಲಿ ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿ ಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿ ಬೆಳ್ತಂಗಡಿಯ […]Read More
ಪಡಂಗಡಿ: ಪಡಂಗಡಿಯಿಂದ ಬರಾಯ ಕಡೆ ಗೆ ತೆರಳುವ ರಸ್ತೆಯು ಬಿರುಕುಂಟಾಗಿದ್ದು ಸ್ಥಳೀಯರು ಆ ರಸ್ತೆ ಮೂಲಕ ಸಾಗಲು ಭಯಭೀತರಾಗಿದ್ದಾರೆ.ಈ ರಸ್ತೆ ಪಡಂಗಡಿ ಗ್ರಾ.ಪಂ ಗೆ ಒಳಪಟ್ಟಿದ್ದು, ಬರೆಯ ಭಾಗವನ್ನು ಸಂಪರ್ಕಿಸುವ ಒಳ ರಸ್ತೆ ಇದಾಗಿದೆ.ಎರಡು ದಿನದಿಂದ ಸುರಿಯುವ ಭಾರೀ ಮಳೆಗೆ ಈ ಅವಘಡ ಸಂಭವಿಸಿದ್ದು ರಸ್ತೆಯುದ್ದಕ್ಕೂ ನೀರು ತುಂಬಿದ್ದು ಪ್ರಯಾಣಿಕರಿಗೆ ಓಡಾಡಲು ಕಷ್ಟ ಪಡುವಂತಾಗಿದೆ.ಸ್ಥಳೀಯ ಉದ್ಯೋಗಸ್ಥರು, ಶಾಲಾ ಮಕ್ಕಳು ಕೃಷಿಕರು ದಿನನಿತ್ಯ ಪಡಂಗಡಿಯನ್ನು ಸಂಪರ್ಕಿಸಲು ಅವಲಂಬಿಸಿರುವ ರಸ್ತೆ ಇದಾಗಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಅವಘಡಕ್ಕೆ ದಾರಿ […]Read More