: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ನಾಳೆ (21)ರಂದು ವಿದ್ಯುತ್ ನಿಲುಗಡೆ ಆಗಲಿದೆ ಎಂದು ತಿಳಿಸಲಾಗಿದೆ. ಉಪ್ಪಿನಂಗಡಿ ಟೌನ್, ಕೆಮ್ಮಾರ ಹಾಗೂ ಕಲ್ಲೇರಿ ಟೌನ್ ಹಾಗೂ ಪದ್ಮುಂಜ ಫೀಡರುಗಳ ಹೆಚ್ ಟಿ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5.30 ರ ತನಕ 11 ಕೆವಿ ಉಪ್ಪಿನಂಗಡಿ ಟೌನ್, ಕೆಮ್ಮಾರ, ಕಲ್ಲೇರಿ ಟೌನ್ ಪದ್ಮುಂಜ. ಹಾಗೂ ಕುದ್ರಡ್ಕಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ
ಬೆಳ್ತಂಗಡಿ(ನ.19) : ಆಭರಣ ಜುವೆಲ್ಲರ್ಸ್ ನ ಪ್ರಿಮಾಯ್ಸಸ್ ನಲ್ಲಿ ಯೋಗೀಶ್ ಆರ್ ಬಿಢೆ ತನ್ನ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಜೊತೆಗೆ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ ರೂ.10,000 ಮೊತ್ತವನ್ನು ನೀಡಿ ತನ್ನ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಸೇವಾಭಾರತಿ ಸಂಸ್ಥೆಯ ಹಿರಿಯ ಪ್ರಬಂಧಕರಾದ ಚರಣ್ ಕುಮಾರ್ ಎಂ ಇದನ್ನು ಸ್ವೀಕರಿಸಿ ಸಂಸ್ಥೆಯ ಪರವಾಗಿ ಶುಭಹಾರೈಸಿ, ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಧರ್ಮಪತ್ನಿ ರಶ್ಮಿ ಯೋಗೀಶ್ ಬಿಢೆ, ದಕ್ಷಿಣ ಕನ್ನಡ […]Read More
ವೇಣೂರು: ಸ್ವಚ್ಛತಾ ಅಭಿಯಾನ: ಮೂಡುಕೋಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಸ್ವಚ್ಛತಾ ಕಾರ್ಯಕ್ರಮ
ವೇಣೂರು : ವೇಣೂರು ಗ್ರಾಮಪಂಚಾಯತ್ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನದ ಅಂಗವಾಗಿ ನ 17 ರಂದು ಮೂಡುಕೋಡಿಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರ ಸಹಕಾರದೊಂದಿಗೆ ರಸ್ತೆ ಬದಿ ಬೆಳೆದಿರುವ ಗಿಡ ಪೊದರು ಕತ್ತರಿಸುವ ಕಾರ್ಯ ನಡೆಯಿತು. ಮುಂದಿನ ದಿನದಲ್ಲಿ ಹುಲ್ಲು ಕತ್ತರಿಸುವ ಯಂತ್ರ ಬಳಸಿ ಎಲ್ಲ ರಸ್ತೆ ಬದಿ ಹುಲ್ಲನ್ನು ಕತ್ತರಿಸುವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಈ ಕಾರ್ಯಕ್ರಮ ನಡೆದಿದ್ದು ಇದರ ನೇತೃತ್ವವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಮೇಲ್ವಿಚಾರಕಿ ಶಾಲಿನಿ ಯವರು, ಒಕ್ಕೂಟದ […]Read More
ಬೆಳ್ತಂಗಡಿ ತಾಲೂಕು, ಕನ್ಯಾಡಿ- || ಶ್ರೀರಾಮ ನಿಲಯದ ಶ್ರೀಮತಿ ವಸಂತಿ ಮತ್ತು ಶ್ರೀ ರಾಮಣ್ಣ ಗುಡಿಗಾರರ ಮಗಳ ಶುಭವಿವಾಹದ ಆರತಕ್ಷತೆಯ ಸಂದರ್ಭದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ ರೂ. 25,000 ಮೊತ್ತವನ್ನು ನೀಡಿ ಶುಭಹಾರೈಸಿದರು. ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಇದನ್ನು ಸಿಬ್ಬಂದಿಯೊಂದಿಗೆ ಸ್ವೀಕರಿಸಿ. ನವ ವಧುವರರಿಗೆ ಶುಭಹಾರೈಸಿ ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ, ಟ್ರಸ್ಟಿ ಶ್ರೀ […]Read More
ಚಾರ್ಮಾಡಿ : ಚಾರ್ಮಾಡಿ ಗ್ರಾಮದ ಮೈಕಾನ್, ಪರ್ಲಾಣಿ ಸ್ಥಳದಲ್ಲಿ ಇಂದು ಮುಂಜಾನೆ 7.00 ಗಂಟೆ ಸುಮಾರಿಗೆ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ.ಹೊಸಮಠ ಕಡೆಗೆ ತೆರಲಿರುವ ಬಗ್ಗೆ ವರದಿಯಾಗಿದೆ. ಯಾವುದೇ ಕೃಷಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಪದೇ ಪದೇ ಆನೆಯ ದಾಳಿಯಾಗುತ್ತಲೆ ಇದೆ ಆ ಭಾಗದ ಜನರು ಭಯಭೀತಗೊಂಡಿದ್ದಾರೆ ಈ ಬಗ್ಗೆ ಅರಣ್ಯ ಇಲಾಖೆ, ಸರ್ಕಾರ ಸೂಕ್ತ ಶಾಶ್ವತ ಪರಿಹಾರ ಒದಗಿಸಬೇಕೆಂದು ಆ ಭಾಗದ ನೊಂದ ನಾಗರಿಕರ ಒಕ್ಕೊರಲ ಆಗ್ರಹವಾಗಿದೆ.Read More
ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯನ್ನು ಶೀಘ್ರ ದುರಸ್ಥಿಗೆ ಆಗ್ರಹಿಸಿ ರಸ್ತೆ ತಡೆದು SDPI
ಬೆಳ್ತಂಗಡಿ (ನ-15): ಸಂಪೂರ್ಣ ಹದಗೆಟ್ಟು ಹೋದ ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯನ್ನು ಶೀಘ್ರ ದುರಸ್ಥಿಗೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕಣಿಯೂರು ಬ್ಲಾಕ್ ಸಮಿತಿ ವತಿಯಿಂದ ಅಧ್ಯಕ್ಷರಾದ ಮುಸ್ತಾಫ ಬಂಗೇರಕಟ್ಟೆ ನೇತೃತ್ವದಲ್ಲಿ ಶುಕ್ರವಾರ ಕಲ್ಲೇರಿ ಜಂಕ್ಷನ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಕಣಿಯೂರು ಬ್ಲಾಕ್ ಅಧ್ಯಕ್ಷರಾದ ಮುಸ್ತಾಫ ಬಂಗೇರಕಟ್ಟೆ ಮಾತನಾಡಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯನ್ನು ಬಹಳಷ್ಟು ಅಪಘಾತಗಳು ಸಂಭವಿಸಿ, ಸಾಕಷ್ಟು ಸಾವು- ನೋವು ಸಂಭವಿಸಿದರೂ […]Read More
ಬೆಳ್ತಂಗಡಿ ತಾಲೂಕು, ರಬ್ಬರ್ ಗ್ರೋವರ್ಸ್ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್ ನ ಅಧ್ಯಕ್ಷರಾದ ಶ್ರೀಧರ್ ಬಿಢೆ, ಉಪಾಧ್ಯಕ್ಷರಾದ ಅನಂತ್ ಭಟ್ ಮಚ್ಚಿಮಲೆ, ಕಾರ್ಯನಿರ್ವಹಣಾಧಿಕಾರಿಯವರಾದ ರಾಜು ಶೆಟ್ಟಿ ಇವರ ತಂಡವು ಕನ್ಯಾಡಿಯ ಸೇವಾನಿಕೇತನಕ್ಕೆ ಭೇಟಿ ನೀಡಿ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಸೊಸೈಟಿಯಿಂದ ರೂ. 50,000 ದ ಚೆಕ್ ನೀಡಿ ಕಟ್ಟಡದ ನಿರ್ಮಾಣ ಶೀಘ್ರ ನೆರವೇರುವಂತೆ ಶುಭಹಾರೈಸಿದರು. ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ […]Read More
ಮಂಗಳೂರು: ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಾವಿತ್ರಿ ಕೊಕ್ಕಡ ಅವರಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನಿಂದ “ಕಲಾ ರತ್ನ ಪ್ರಶಸ್ತಿ”” ನೀಡಿ ಗೌರವಿಸಿದೆ. ನವೆಂಬರ್ 15 ರಂದು ಮಂಗಳೂರು ರೀಜನಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮ್ಯಾನೇಜರ್ ಪೂಜಿತ್ ಉಪಸ್ಥಿತರಿದ್ದರು. ಇವರು ಕೊಕ್ಕಡದ ಸಂದೇಶ್ ಕುಮಾರ್ ಎಂಬವರ ಪತ್ನಿ.Read More
: ಹುಣ್ಸೆಕಟ್ಟೆ: ದ.ಕ.ಜಿ.ಹಿ.ಪ್ರಾ ಶಾಲೆ ಹುಣ್ಸೆಕಟ್ಟೆ ಮತ್ತು ಬಾಲವಿಕಾಸ ಸಮಿತಿ , ಅಂಗನವಾಡಿ ಕೇಂದ್ರ ಹುಣ್ಸೆಕಟ್ಟೆ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮವು ಇಂದು ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಂಗನವಾಡಿ ಕೇಂದ್ರದ ಪುಟಾಣಿ ಮನ್ವಿತ್ ದೀಪ ಪ್ರಜ್ವಲಿಸುವ ಮುಖೇನ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಲಾ ಹಳೆ ವಿದ್ಯಾರ್ಥಿ ಕೃಷ್ಣಕುಮಾರ್ ಐತಾಳ್, ಎಸ್ ಡಿಎಂ ಸಿ ಅಧ್ಯಕ್ಷೆ ಭವ್ಯ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಆಶಾ, ಶಾಲಾ ಮುಖ್ಯೋಪಾಧ್ಯಯರು ಕರಿಯಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕಿ ನಮಿತ […]Read More