ಬೆಳಾಲು: ಕಾಡಿನ ಮಧ್ಯೆ ಪತ್ತೆಯಾದ ಪುಟ್ಟ ಕಂದಮ್ಮ:ಹಸುಗೂಸಿನ ಅಳುವಿನ ಶಬ್ಧ ಕೇಳಿ ಸಾರ್ವಜನಿಕರಿಂದ ರಕ್ಷಣೆ

ಬೆಳಾಲು: ಕೊಡೋಳುಕೆರೆ ಎಂಬಲ್ಲಿ ಪುಟ್ಟ ಕಂದಮ್ಮನನ್ನು ಯಾರೋ ಕಾಡಿನಲ್ಲಿ ಬಿಟ್ಟು ಹೋದ ಘಟನೆ ಇಂದು ನಡೆದಿದೆ.
ಕಾಡಿನ ದಾರಿ ಮಧ್ಯೆಯಿಂದ ಸಾಗುತ್ತಿದ್ದ ಮಹಿಳೆಯೊಬ್ಬರಿಗೆ ಮಗುವು ಅಳುವ ಶಬ್ಧ ಕೇಳಿದ್ದು, ತಕ್ಷಣ ಮಗುವಿನ ಬಳಿ ಬಂದು ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಆಗಮಿಸಿ ಮಗು ಯಾರದೆಂದು ಪತ್ತೆಹಚ್ಚುವಲ್ಲಿ ತೊಡಗಿದ್ದಾರೆ